ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಒಂಬತ್ತು ಹೆಸರು ಶಿಫಾರಸು

Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ರಂಗಾಯಣ ಮೈಸೂರು, ಶಿವಮೊಗ್ಗ ಹಾಗೂ ಕಲಬುರ್ಗಿ ಕೇಂದ್ರಗಳ  ನಿರ್ದೇಶಕರ ನೇಮಕಕ್ಕೆ ಕೊನೆಗೂ ಸರ್ಕಾರ ಮುಂದಾಗಿದೆ.
 
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಗುರುವಾರ ‘ರಂಗ ಸಮಾಜದ’ ಸಭೆ ನಡೆದಿದ್ದು, ಈ ಮೂರೂ ಕೇಂದ್ರಗಳಿಗೂ ತಲಾ ಮೂವರ ಹೆಸರನ್ನು ಶಿಫಾರಸು ಮಾಡಿದೆ. 
 
ಮೈಸೂರು ಕೇಂದ್ರಕ್ಕೆ ಎಚ್‌.ಎಸ್‌. ಉಮೇಶ್‌, ಭಾಗೀರಥಿ ಬಾಯಿ ಕದಂ, ಗೋಪಾಲಕೃಷ್ಣ ನಾಯರಿ ಹೆಸರು ಕಳುಹಿಸಲಾಗಿದೆ.
 
ಶಿವಮೊಗ್ಗ ಕೇಂದ್ರಕ್ಕೆ ಎಂ. ಗಣೇಶ್‌, ಸಾಸಿವೆಹಳ್ಳಿ ಸತೀಶ್‌ ಮತ್ತು ಪ್ರತಿಭಾ ಹಾಗೂ ಕಲಬುರ್ಗಿ ರಂಗಾಯಣಕ್ಕೆ ಮಹೇಶ್‌ ಪಾಟೀಲ್, ಸಾಂಬಶಿವ ದಳವಾಯಿ ಮತ್ತು  ಸಹನಾ ಪಿಂಜಾರ ಅವರ ಹೆಸರು ಶಿಫಾರಸು ಮಾಡಲಾಗಿದೆ.
 
ಮೈಸೂರು ಕೇಂದ್ರದ ನಿರ್ದೇಶಕರ ಹುದ್ದೆ 8 ತಿಂಗಳಿಂದ ಖಾಲಿ ಇದ್ದು, ಶಿವಮೊಗ್ಗ ಮತ್ತು ಕಲಬುರ್ಗಿ ಕೇಂದ್ರದ ನಿರ್ದೇಶಕರ ಸ್ಥಾನ ಖಾಲಿಯಾಗಿ ವರ್ಷವೇ ಕಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT