ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಸ್ಕಾಲರ್‌ಶಿಪ್‌ನಿಂದ ಪುಸ್ತಕ ಖರೀದಿ ಹಾಗೂ ಕಾಲೇಜಿನ ಪ್ರವೇಶ ಶುಲ್ಕು ಪಾವತಿಸಿದ್ದೇನೆ. ಓದು ಮುಂದುವರಿಸಲು ಪ್ರೇರಣೆ ಸಿಕ್ಕಿದ್ದರಿಂದ ಚೆನ್ನಾಗಿ ಓದಿದ್ದು, ಪ್ರಥಮ ಪಿಯುಸಿಯಲ್ಲಿ ಶೇ 86 ಅಂಕ ಬಂದಿದೆ. ಬಂಟ್ವಾಳದ ಎಸ್‌ವಿಎಸ್‌ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದೇನೆ.
 
ಕೇವಲ ನನ್ನ ಕುಟುಂಬವಷ್ಟೇ ಅಲ್ಲ, ಇದೀಗ ನನಗೆ ಸಿಕ್ಕ ಸಹಾಯದಿಂದ ನನ್ನಿಂದಲೂ ಇತರರಿಗೆ ಸಹಾಯ ಆಗಬೇಕು ಎನ್ನುವ ಭಾವನೆ ಹೊಂದಿದ್ದೇನೆ.
  
ಶಶಾಂತ್‌ ಬಿ ಬಂಟ್ವಾಳ
****
ಎಸ್ಎಸ್ಎಲ್‌ಸಿಯಲ್ಲಿ ಶೇ 95.2 ಫಲಿತಾಂಶ ಪಡೆದಿದ್ದೆ. ಮುಂದೆ ಪಿಸಿಎಂಬಿ ಓದುವ ಬಯಕೆ ಇತ್ತು. ಆದರೆ, ಕಾಲೇಜು ಶುಲ್ಕ ಹಾಗೂ ಪುಸ್ತಕ ಖರೀದಿಗೆ  ‘ಪ್ರಜಾವಾಣಿ’ ಪತ್ರಿಕೆ ಸಹಾಯಧನ ನೀಡಿದ್ದರಿಂದ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಯಿತು. ವೈದ್ಯಕೀಯ ವ್ಯಾಸಾಂಗ ಮಾಡುವ ಆಸೆ ಇದೆ.
ಪ್ರಥಮ ಪಿಯುಸಿಯಲ್ಲಿ ಶೇ 91ರಷ್ಟು ಅಂಕ ಬಂದಿದೆ.
ಕೆ.ಲಿಖಿತಾ, ಮಂಜುನಾಥ ನಗರ, ಕೊಳ್ಳೇಗಾಲ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT