ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಬ್‌ ಇಂಡಿಯಾ ಮಳಿಗೆ ಭಾಗಶಃ ಮುಚ್ಚುವಂತೆ ಸೂಚನೆ

Last Updated 25 ಮೇ 2017, 19:43 IST
ಅಕ್ಷರ ಗಾತ್ರ
ಬೆಂಗಳೂರು:  ಹೈಕೋರ್ಟ್‌ನ ಆದೇಶ ವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಗಮನಕ್ಕೆ ತಂದು ಜಯನಗರ 1ನೇ ಹಂತದಲ್ಲಿರುವ ಫ್ಯಾಬ್‌ ಇಂಡಿಯಾ ಮಳಿಗೆಯನ್ನು ಭಾಗಶಃ ಮುಚ್ಚಿಸುವಲ್ಲಿ ಅಲ್ಲಿನ ನಿವಾಸಿಗಳ ಸಂಘ ‘ಫೊರ್ಸ್‌’ ಯಶಸ್ವಿಯಾಗಿದೆ.
 
ಹೈಕೋರ್ಟ್‌ 2014ರ ಫೆಬ್ರುವರಿ 19ರಂದು ನೀಡಿರುವ ಆದೇಶದಂತೆ ಜನವಸತಿ ಪ್ರದೇಶದಲ್ಲಿರುವ 40 ಅಡಿ ಹಾಗೂ ಅದಕ್ಕಿಂತಲೂ ಕಡಿಮೆ ಅಗಲದ ರಸ್ತೆ ಬದಿಯಲ್ಲಿ ವಾಣಿಜ್ಯ ಚಟುವಟಿಕೆ ಗಳನ್ನು ನಡೆಸುವಂತಿಲ್ಲ.
 
‘ನ್ಯಾಯಾಲಯದ ಆದೇಶವನ್ನು ಜಯನಗರದಲ್ಲಿ ಕಟ್ಟುನಿಟ್ಟಾಗಿ ಜಾರಿ ಗೊಳಿಸುವಂತೆ ಪಾಲಿಕೆಯ ಆಯುಕ್ತರಿಗೆ ಈ ವರ್ಷದ ಫೆಬ್ರುವರಿಯಲ್ಲಿ ಪತ್ರ ಬರೆ ದೆವು. ಆದೇಶವನ್ನು ಉಲ್ಲಂಘಿಸಿ ರುವ ಕಟ್ಟಡಗಳ ಪಟ್ಟಿಯನ್ನು ನೀಡಿದ್ದೆವು’ ಎಂದು ನಿವಾಸಿಗಳ ಸಂಘದ ಉಪಾಧ್ಯಕ್ಷ ಜಿ.ಆರ್‌. ಬಾಲಾಜಿ ತಿಳಿಸಿದರು.
 
‘ಪಾಲಿಕೆಯ ಅಧಿಕಾರಿಗಳು ಫೆಬ್ರು ವರಿಯಿಂದಲೇ ಕಟ್ಟಡಗಳ ಪರಿಶೀಲನೆ ಆರಂಭಿಸಿದ್ದರು. ಪರಿಶೀಲನೆ ವೇಳೆ ಫೊರ್ಬ್‌ ಇಂಡಿಯಾ ಮಳಿಗೆ ಆದೇಶ ಉಲ್ಲಂಘಿಸಿರುವುದು ಅವರ ಗಮನಕ್ಕೂ ಬಂದಿದೆ.
 
ಮಳಿಗೆಯವರು ವಾಹನ ನಿಲು ಗಡೆಗೆ ಜಾಗ ಮೀಸಲಿಟ್ಟಿಲ್ಲ. ಹಾಗಾಗಿ ಗ್ರಾಹಕರು ರಸ್ತೆಯಲ್ಲಿ ವಾಹನ ನಿಲ್ಲಿಸು ತ್ತಿದ್ದರು. ಇದರಿಂದ ಸ್ಥಳೀಯರ ಓಡಾಟಕ್ಕೆ ಅಡಚಣೆ ಉಂಟಾಗುತ್ತಿತ್ತು’ ಎಂದರು.
 
ಮಳಿಗೆಯ ಶೇ 20 ಭಾಗವನ್ನು ವಾಣಿಜ್ಯ ಚಟುವಟಿಕೆಗೆ ಬಳಸಿಕೊಂಡು, ಉಳಿದ ಭಾಗವನ್ನು ವಾಹನ ನಿಲುಗಡೆಗೆ ಮೀಸಲಿಡಿ ಎಂದು ಪಾಲಿಕೆಯು ಕಟ್ಟ ಡದ ಮಾಲೀಕರಿಗೆ ನೋಟಿಸ್‌ ನೀಡಿದೆ.
 
ಕಟ್ಟಡ ಮಾಲೀಕ ಕೆ. ವರದರಾಜ್‌ ಅವರನ್ನು ಮಾತನಾಡಿಸಿದಾಗ, ‘ನ್ಯಾಯಾ ಲಯದಿಂದ ಆದೇಶ ಹೊರಬಿಳುವ ಮೊದಲೇ(2012) ಕಟ್ಟಡವನ್ನು ಕಟ್ಟಿದ್ದೇವೆ. ಪ್ರದೇಶದಲ್ಲಿರುವ ನೂರಾರು ಕಟ್ಟಡಗಳ ಮಾಲೀಕರೂ ನಿಯಮ ಉಲ್ಲಂಘಿಸಿದ್ದಾರೆ.
 
ನನ್ನ ಮೇಲೆ ವೈಯಕ್ತಿಕ ದ್ವೇಷ ಇರುವವರು ನನ್ನ ವಿರುದ್ಧ ದೂರು ನೀಡುತ್ತಿದ್ದಾರೆ. ಅದನ್ನು ಕಾನೂನು ಹೋರಾಟದ ಮೂಲಕವೇ ಎದುರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT