ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದರ್ಶನಕ್ಕೆ ಬರಲಿದೆ ಡಬ್ಬಲ್‌ ಡೆಕ್ಕರ್‌ ಬಸ್‌

ನಾಲ್ಕು ಬಸ್‌ಗಳ ಖರೀದಿಗೆ ಬಿಎಂಟಿಸಿ ಉತ್ಸುಕ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ
Last Updated 25 ಮೇ 2017, 19:50 IST
ಅಕ್ಷರ ಗಾತ್ರ
ಬೆಂಗಳೂರು: ನಗರದ ರಸ್ತೆಗಳಲ್ಲಿ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರ ಆರಂಭವಾಗಲಿದೆ.
 
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹವಾನಿಯಂತ್ರಿತ ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಖರೀದಿ ಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. ನಗರದ ಪ್ರೇಕ್ಷಣೀಯ ತಾಣಗಳ ವೀಕ್ಷಣೆಗೆ ಈ ಬಸ್‌ಗಳನ್ನು ಬಳಸಲು ಸಂಸ್ಥೆ ಉದ್ದೇ ಶಿಸಿದೆ. ವರ್ಷಾಂತ್ಯದೊಳಗೆ ಈ ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದೆ. 
 
ಈ ಬಸ್‌ಗಳು 1971ರಿಂದ 1998ರ ವರೆಗೆ ಕಾರ್ಯಾಚರಣೆಗೊಂಡು ಬಳಿಕ ಸಂಚಾರ ಸ್ಥಗಿತಗೊಳಿಸಿದ್ದವು. ಶಿವಾಜಿ ನಗರ– ಕೆ.ಆರ್‌. ಮಾರುಕಟ್ಟೆ, ಮೆಜೆಸ್ಟಿಕ್‌– ಜಯನಗರ ನಾಲ್ಕನೇ ಹಂತ, ಗಾಂಧಿ ಬಜಾರ್– ಮೆಜೆಸ್ಟಿಕ್‌, ಇಂದಿರಾ ನಗರ– ಮೆಜೆಸ್ಟಿಕ್‌, ಜಯನಗರ– ಶಿವಾಜಿನಗರ ಮಾರ್ಗಗಳಲ್ಲಿ ಇವುಗಳು ಸಂಚರಿಸುತ್ತಿದ್ದವು. 
 
ಬಿಎಂಟಿಸಿ ಸದ್ಯ ಹಳೆಯ ಕಾಲದ ಒಂದು ಡಬ್ಬಲ್‌ ಡೆಕ್ಕರ್‌ ಬಸ್‌ ಹೊಂದಿದೆ. ಇದನ್ನು ಪ್ರದರ್ಶನಕ್ಕಷ್ಟೇ ಬಳಸಲಾಗುತ್ತಿದೆ. 
 
ನಗರದ ಹತ್ತಾರು ಸುತ್ತಾಣಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡಲು ಅನುಕೂಲವಾಗುವಂತೆ ಸಂಸ್ಥೆಯು 2009ರಲ್ಲಿ ‘ಬೆಂಗಳೂರು ರೌಂಡ್ಸ್’ ಎಂಬ ಹವಾನಿಯಂತ್ರಿತ ಬಸ್‌ ಸೇವೆ ಆರಂಭಿಸಿತ್ತು. ಅದು ನಿರೀಕ್ಷಿತ ಲಾಭ ವನ್ನು ತಂದುಕೊಡಲಿಲ್ಲ. ಆದರೂ ಅದೇ ಸೇವೆಯನ್ನು 2014ರಲ್ಲಿ ಸ್ವಲ್ಪ ಮೇಲ್ದರ್ಜೆಗೇರಿಸಿ ‘ಹಾಪ್‌ ಆನ್‌ ಹಾಪ್‌ ಆಫ್‌’; ಸೇವೆ ಆರಂಭಿಸಿತ್ತು. ಇದಕ್ಕೆ ‘ಬೆಂಗಳೂರು ದರ್ಶಿನಿ’ ಎಂದು ಹೆಸರಿಟ್ಟಿತ್ತು. 
 
ಒಟ್ಟು ಏಳು ಬಸ್‌ಗಳು 22 ಪ್ರವಾಸಿ ತಾಣಗಳಿಗೆ ಸಂಚರಿಸುತ್ತಿದ್ದವು. ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಇದರಲ್ಲಿ ಪ್ರಯಾಣ ಮಾಡಲಿಲ್ಲ. ನಷ್ಟದ ಕಾರಣದಿಂದ ನಾಲ್ಕು ಬಸ್‌ಗಳ ಸಂಚಾರ ಸ್ಥಗಿತ ಗೊಳಿಸಲಾಗಿತ್ತು. ಸದ್ಯ ಮೂರು ಬಸ್‌ಗಳಷ್ಟೇ ಕಾರ್ಯಾಚರಣೆ ನಡೆಸು ತ್ತಿವೆ. ಡಬ್ಬಲ್‌ ಡೆಕ್ಕರ್‌ ಬಸ್‌ ಖರೀದಿ ಬಳಿಕ, ಈ ಬೆಂಗಳೂರು ರೌಂಡ್ಸ್‌ ಬಸ್‌ಗಳನ್ನು ವಿಮಾನ ನಿಲ್ದಾಣ ಮಾರ್ಗದಲ್ಲಿ ಆಚರಣೆ ಮಾಡಲು ಬಿಎಂಟಿಸಿ ಯೋಜಿಸಿದೆ. 
 
‘ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ನಗರದ ಪ್ರೇಕ್ಷಣೀಯ ತಾಣಗಳ ದರ್ಶನ ಮಾಡಿಸಲು ಈ ಬಸ್‌ಗಳ ಖರೀದಿ ಮಾಡುವಂತೆ ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಾಹನದ ಚಾವಣಿ ತೆರೆದ ಸ್ಥಿತಿಯಲ್ಲಿರಬೇಕೇ ಅಥವಾ ಗಾಜಿನಿಂದ ಕೂಡಿರಬೇಕೇ ಎಂಬ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. 
 
‘ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರನ್ನು ದೃಷ್ಟಿಯಲ್ಲಿರಿಸಿ ಕೊಂಡು ಬೆಂಗಳೂರು ರೌಂಡ್ಸ್‌ಗೆ ಹೊಸ ರೂಪ ನೀಡಲು ಯೋಜಿಸಲಾಗಿದೆ’ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಹೇಳಿದರು. 
 
‘ಕೆಲವು ರಸ್ತೆಗಳ ಪಕ್ಕದಲ್ಲಿ ಮರಗಳು ಇವೆ. ಇನ್ನೂ ಕೆಲವು ರಸ್ತೆಗಳು ಇಕ್ಕಟ್ಟಾಗಿವೆ. ಇಂತಹ ಕಡೆಗಳಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರ ಕಷ್ಟ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳ ಖರೀದಿ ಮಾಡುತ್ತೇವೆ. ಬಸ್‌ಗಳ ಸಂಚಾರದ ಮಾರ್ಗ ಇನ್ನೂ ಅಂತಿಮ ಆಗಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT