ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ನಿಯಮ ಪಾಲಿಸದ ನಿರ್ವಹಣಾ ಘಟಕ

Last Updated 26 ಮೇ 2017, 7:56 IST
ಅಕ್ಷರ ಗಾತ್ರ

ಯಾದಗಿರಿ: ನಗರದಿಂದ ಎರಡು ಕಿಲೋಮೀಟರ್ ದೂರ ಇರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಿರ್ವಹಣೆಯ ವೈಜ್ಞಾನಿಕ ನಿಯಮಗಳು ಪಾಲನೆ ಯಾಗದೇ ಇಡೀ ಘಟಕ ಕಸದ ತಿಪ್ಪೆಯಂತಾಗಿರುವುದು ನಗರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದೇ ಘಟಕದಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕ ಕೂಡ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ತ್ಯಾಜ್ಯ, ನಗರದ ಸಾಮಾನ್ಯ ತ್ಯಾಜ್ಯದಿಂದ ಇಡೀ ಘಟಕ ತುಂಬಿ ಹೋಗಿದೆ.

ಘಟಕ ಕಾಯುವ ಕಾವಲುಗಾರ ಹೊರತುಪಡಿಸಿ ದರೆ ಸಿಬ್ಬಂದಿ ಎಲ್ಲೂ ಕಂಡುಬರುವು ದಿಲ್ಲ. ನಗರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಇಲ್ಲಿ ಸಿಬ್ಬಂದಿಯನ್ನು ನಗರಸಭೆ ನೇಮಿಸುವ ಗೋಜಿಗೂ ಹೋಗಿಲ್ಲ. ಪ್ರತಿವರ್ಷ ನಗರಸಭೆ ಸಿಎಫ್‌ಸಿ ಯೋಜನೆ ಅಡಿ ₹ 25ರಿಂದ ₹ 30 ಲಕ್ಷ ಅನುದಾನ ತ್ಯಾಜ್ಯ ನಿರ್ವಹಣೆಗೆ ವೆಚ್ಚ ಮಾಡಿರುವುದಾಗಿ ಖರ್ಚುವೆಚ್ಚದ ಪಟ್ಟಿ ನೀಡುತ್ತಾ ಬಂದಿದೆ. ಆದರೆ, ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ರಾಶಿರಾಶಿ ಬಿದ್ದಿರುವ ಕಸ ನಗರಸಭೆಯ ಕಾರ್ಯವೈಖರಿ ಪ್ರಶ್ನಿಸುವಂತಿದೆ.

ಪ್ರತಿದಿನ ನಗರದಲ್ಲಿ ದ್ರವ, ಘನ ರೂಪದಲ್ಲಿ 24 ಮೆಟ್ರಿಕ್‌ ಟನ್ ಕಸ ಉತ್ಪಾದನೆಯಾಗುತ್ತಿದೆ. 24 ಮೆಟ್ರಿಕ್‌ ಟನ್ ತ್ಯಾಜ್ಯವನ್ನು ಮೊದಲು ಒಣ ಮತ್ತು ಹಸಿ ಕಸ ಬೇರ್ಪಡಿಸಿ ಸಂಸ್ಕರಿಸಬೇಕು. ಸಂಸ್ಕರಿಸಿದ ಕಸದಲ್ಲಿ ಉಪಯೋಗ ಮತ್ತು ಉಪಯೋಗಕಾರಿ ಅಲ್ಲದ ಕಸ ವಿಭಾಗಿಸಿ ನಂತರ ತ್ಯಾಜ್ಯವನ್ನು ಗುಂಡಿ ಯಲ್ಲಿ ಮುಚ್ಚಿ ಕೊಳೆಸಬೇಕು. ಆದರೆ, ಈ ಯಾವ ನಿಯಮಗಳೂ ನಗರಸಭೆಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪಾಲಿಸಿಲ್ಲ. ಬೃಹತ್‌ ಗುಂಡಿಗಳಲ್ಲಿ ನಗರಸ ಸಮಸ್ತ ಕಸವನ್ನು ತಿಪ್ಪೆಯಂತೆ ತುಂಬಿ ದ್ದಾರೆ. ಇದರ ಪರಿಣಾಮ ಇಡೀ ಘಟಕ ದುರ್ವಾಸನೆ ಸೂಸುತ್ತಿದೆ.

ಕೇಂದ್ರ ಸರ್ಕಾರ ಕಸ ನಿರ್ವಹಣೆಗೆ ಹಲವು ಕಾನೂನುಗಳನ್ನು ಜಾರಿ ಗೊಳಿಸಿದೆ. ಸಂವಿಧಾನದ ಪರಿಚ್ಛೇದ 51–ಎ (ಜಿ)ಯ ಪ್ರಕಾರ ನಗರಸಭೆ ನಾಗರಿಕರಿಗೆ ಉತ್ತಮ ಪರಿಸರ ಒದಗಿಸಿ ಕೊಡಬೇಕು. ಅಲ್ಲದೇ ಈ ಕಾನೂನು ಪಟ್ಟಣ, ನಗರ ಪ್ರದೇಶದಲ್ಲಿ ಕಸ ಬಿಸಾಡುವುದನ್ನು ಸಂಪೂರ್ಣ ನಿಷೇಧಿ ಸಿದೆ. ಆದರೂ, ನಗರದ ಯಾವ ಬಡಾವ ಣೆಗಳಿಗೆ ಭೇಟಿ ನೀಡಿದರೂ ತ್ಯಾಜ್ಯದಿಂದ ತುಂಬಿರುವ ರಸ್ತೆಗಳು, ಚರಂಡಿಗಳು ಗೋಚರಿಸುತ್ತವೆ. ಜೈವಿಕ ಔಷಧೀಯ ತ್ಯಾಜ್ಯವನ್ನು ನಗರದ ಗಟ್ಟಿಕಸದೊಂದಿಗೆ ಬೆರೆಸಬಾರದು ಎಂಬ ನಿಯಮ ಇದ್ದರೂ ಅದು ಪಾಲನೆ ಆಗುತ್ತಿಲ್ಲ.

ವೈದ್ಯಕೀಯ ತ್ಯಾಜ್ಯಕ್ಕೂ ವೈಜ್ಞಾನಿಕ ನಿರ್ವಹಣೆ ಕೊರತೆ: ಇಲ್ಲಿನ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯನ್ನು ನಗರಸಭೆ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿದೆ. ಆದರೆ, ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಯುತ್ತಿಲ್ಲ. ನಗರದಲ್ಲಿನ ಜಿಲ್ಲಾ ಆಸ್ಪತ್ರೆ, ಪಶು ಆಸ್ಪತ್ರೆ, ಪ್ರಯೋಗಾಲಯ ಗಳು ಹಾಗೂ ಖಾಸಗಿ ಕ್ಲಿನಿಕ್‌ಗಳಿಂದ ಉತ್ಪತ್ತಿಯಾಗುತ್ತಿರುವ ವೈದ್ಯಕೀಯ ತ್ಯಾಜ್ಯವನ್ನು ಯಂತ್ರದಲ್ಲಿ ಸುಟ್ಟು ನಂತರ ಉಳಿಯುವ ತ್ಯಾಜ್ಯ ಶೇಷವನ್ನು ಅಲ್ಲೇ ರಾಶಿ ಹಾಕಲಾಗಿದೆ.

ಇದು ಭೂ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದ ಅನೇಕ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂಬುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿದ್ದರೂ, ತ್ಯಾಜ್ಯ ನಿರ್ವಹಣೆ ವೈಜ್ಞಾನಿಕ ನಿಯಮ ಗಳನ್ನು ಅಳವಡಿಸಿಲ್ಲ. ದುರ್ನಾತ ಹೊರಡಿಸುವ ಚರಂಡಿಗಳತ್ತ ಕಣ್ಣೆತ್ತಿಯೂ ನೋಡದ ಪುರಪಿತೃಗಳು ನಗರದ ಹೊರವಲಯದತ್ತ ಕಣ್ಣುಹಾಯಿ ಸುತ್ತಾರೆ ಎಂಬ ನಂಬಿಕೆಯೂ ಜನರಲ್ಲಿ ಉಳಿದಿಲ್ಲ. ನಗರಸಭೆಯ ಈ ನಿರ್ಲಕ್ಷ್ಯ ದಿಂದ ಮಾತ್ರ ನಾಗರಿಕರು ಹೈರಾಣ ರಾಗುತ್ತಿದ್ದಾರೆ ಎಂಬುದಾಗಿ ಪರಿಸರ ವಾದಿಗಳು, ಸಂಘ–ಸಂಸ್ಥೆಗಳ ಮುಖ್ಯಸ್ಥರು ಅಳಲು ತೋಡಿ ಕೊಂಡಿದ್ದಾರೆ.

ನೀರು ಕೊಟ್ಟರೆ ಸಾಕೆ...
ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವವರೆಲ್ಲರೂ ಜನರಿಗೆ ಕುಡಿವ ನೀರು ಪೂರೈಸುತ್ತೇವೆ ಎಂಬುದಾಗಿ ಘೋಷಿಸುತ್ತಾರೆ. ಇದು ಇಲ್ಲಿನ ಜನರ ದುರಂತ. ಜನರಿಗೆ ಕುಡಿವ ನೀರಿನ ಜತೆಗೆ ಉತ್ತಮ ನಗರ ಪರಿಸರದ ಅವಶ್ಯಕತೆಯೂ ಇದೆ. ಜಿಲ್ಲಾಕೇಂದ್ರ ಘೋಷಣೆಯಾಗಿ ದಶಕದ ಅಂಚಿಗೆ ನಿಂತು ನಾವು ಈಗಲೂ ನಗರಸಭೆಯಿಂದ ಕುಡಿವ ನೀರನ್ನಷ್ಟೇ ನಿರೀಕ್ಷಿಸಬೇಕೆ? ಇಡೀ ಗಿರಿನಗರ ದೊಡ್ಡ ಕೊಳೆಗೇರಿಯಂತಾಗಿದೆ.

ಒಂದು ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ಕೇವಲ 16 ಮಂದಿ ಪೌರಕಾರ್ಮಿಕರು ಇದ್ದಾರೆ ಅಂದರೆ ನಗರಸಭೆಗೆ ನಾಚಿಕೆ ಆಗುವುದಿಲ್ಲವೇ? ಸರ್ಕಾರ ನೀಡುವ ಅನುದಾನ ಬಳಸುವುದಷ್ಟೇ ಆಡಳಿತ ಅಂದುಕೊಂಡಿರುವ ಪುರಪಿತೃಗಳಿಗೆ ಸರ್ಕಾರವೇ ನೇರವಾಗಿ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ತರಬೇತಿ ಕಾರ್ಯಾಗಾರ ನೀಡಬೇಕಿದೆ ಎನ್ನುತ್ತಾರೆ ಎಐಒಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ.

* * 

ಕಸ ಸಂಯೋಜನೆ ಕುರಿತಂತೆ ಈಗಾಗಲೇ ನಗರಸಭೆ ಪರಿಸರ ಅಧಿಕಾರಿಗೆ ನೋಟಿಸ್‌ ನೀಡಿದ್ದೇನೆ. ಉಳಿದಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಅಧಿಕಾರ ಇಲ್ಲ.
ವೆಂಕಟೇಶ್
ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT