ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆ ಇಲ್ಲ’

Last Updated 26 ಮೇ 2017, 8:44 IST
ಅಕ್ಷರ ಗಾತ್ರ

ಸಿಂದಗಿ:  ತಾಲ್ಲೂಕಿನಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮ ಗುಣಮಟ್ಟದ್ದಾಗಿಲ್ಲ. ಹೆಸರಿಗೆ ಮಾತ್ರ ಇವೆ. ಅವುಗಳ ನಿರ್ವಹಣೆ ಇಲ್ಲ
ಎಂದು ಶಾಸಕ ರಮೇಶ ಭೂಸನೂರ ಅಸಮಾಧಾನ ವ್ಯಕ್ತಪಡಿಸಿದರು.

ಬರ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಈ ಘಟಕಗಳು ಪ್ರಾರಂಭಗೊಂಡು ವರ್ಷಗಳೇ ಆದರೂ ಕೆಲವು ದುರಸ್ತಿ ಯಲ್ಲಿವೆ. ಇನ್ನೂ ಕೆಲವು ಕಳಪೆ ಯಂತ್ರಗಳಿಂದಾಗಿ ಪ್ರಾರಂಭಗೊಂಡೇ ಇಲ್ಲ. ಇವುಗಳು ಬರೀ ಪ್ರದರ್ಶನಕ್ಕಾಗಿ ಮಾತ್ರ ಇಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಂಗಠಾಣ, ಕೆರೂರ, ಗಬಸಾವಳಗಿ, ಹಂದಿಗನೂರ, ಕೊಕಟನೂರ, ಚಾಂದಕವಠೆ, ಬಿಸನಾಳ ಈ ಏಳು ಗ್ರಾಮಗಳಲ್ಲಿ ಮಾತ್ರ 15 ಟ್ಯಾಂಕರ್ ಗಳ ಮುಖಾಂತರ ದಿನಕ್ಕೆ 43 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಬಹು ಹಳ್ಳಿಗಳ ನೀರಿನ ಯೋಜನೆ ಶೀಘ್ರದಲ್ಲಿ ಪೂರ್ಣ ಗೊಳಿಸುವ ಮೂಲಕ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೋಗಲಾಡಿಸ ಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮುತವರ್ಜಿ ವಹಿಸಬೇಕಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ದುಡಿ ಯುವ ಕೈಗಳಿಗೆ ಕೆಲಸ ಕೊಡಿ, ಹಳ್ಳಿಗರು ಗುಳೆ ಹೋಗುವದನ್ನು ತಪ್ಪಿಸಿ ಎಂದು ಎಂದು ಅಧಿಕಾರಿಗಳಿಗೆ ಕೇಳಿಕೊಂಡರು. ಮಳೆಗಾಲ ಪ್ರಾರಂಭಗೊಳ್ಳುವ ಮುನ್ನವೇ ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆ ಬಗ್ಗೆ ಡಂಗೂರ ಬಾರಿಸುವ ಮೂಲಕ ತಿಳುವಳಿಕೆ ನೀಡಿ ಎಂದರು.

ಗುಬ್ಬೇವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕಣ್ಣಗುಡ್ಡಿಹಾಳ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳ ತೆರೆದ ಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದರೂ ಅವರು ಸಾರ್ವಜನಿಕರಿಗೆ ನೀರು ಕೊಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಂಥವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರಿ ಜಾಗೆಗಳಲ್ಲಿ ಹಳ್ಳ ಮತ್ತು ಕಾಲುವೆ ಬಳಿ ಬಾವಿ ತೋಡಿಸಿ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಹೇಳಿದರು. ಬಳಗಾನೂರ ಕುಂಬಾರ ವಸತಿಯಲ್ಲಿ ಸಾಕಷ್ಟೂ ನೀರಿದ್ದರೂ ಕಾಯ್ದೆ ಸಬೂಬೂ ಹೇಳಿ ಜನರಿಗೆ ನೀರು ಕೊಡದೇ ಇರುವುದು ಸರಿಯಲ್ಲ ಎಂದು ಜಿಪಂ ಸದಸ್ಯ ಬಿ.ಆರ್.ಯಂಟಮಾನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶರಣಯ್ಯ ಮಠಪತಿ ಮಾತನಾಡಿ, ‘ನಾನು ಹೇಳಿದ ಸ್ಥಳದಲ್ಲಿ ಕೊಳವೆಬಾವಿ ಹಾಕಿಸಿದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ. ಒಂದು ವೇಳೆ ಬರದೇ ಇದ್ದರೆ ಅದಕ್ಕೆ ತಗಲುವ ಹಣವನ್ನು ನನ್ನ ಪಗಾರದಲ್ಲಿ ನೀಡುತ್ತೇನೆ ’ ಎಂದು ಸವಾಲು ಹಾಕಿದರು.

ಆಗ ನೀರು ನೈರ್ಮಲ್ಯ ಇಲಾಖೆ ಎಎಇ ಕೊಟಗಿ ಸಮರ್ಥನೆ ಮಾಡಿ ಕೊಂಡು ‘ಈಗಾಗಲೇ ಅವರು ಹೇಳಿ ದಂತೆ ಕೊಳವೆಬಾವಿ ತೋಡಿಸಿದ್ದೇವೆ 5 ಇಂಚು ನೀರು ಬಂದಿವೆ’ ಎಂದು ಪ್ರತಿಕ್ರಿಯಿಸಿದರು. ತಾಪಂ ಇಓ ಡಾ.ಸುಭಾಸ ಟಕ್ಕಳಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT