ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿ ಗಜನಿಯಲ್ಲಿ ಮೀನು, ಏಡಿ, ಸಿಗಡಿ ಸುಗ್ಗಿ!

Last Updated 26 ಮೇ 2017, 9:41 IST
ಅಕ್ಷರ ಗಾತ್ರ

ಕುಮಟಾ: ಮೇ, ಜೂನ್ ತಿಂಗಳು  ಬಂತೆಂದರೆ ಅದು ತಾಲ್ಲೂಕಿನ ಅಘನಾಶಿನಿ ಹಿನ್ನೀರು ಪ್ರದೇಶದ ರುಚಿಕರ ಗಜನಿ ಮೀನು, ಏಡಿ, ಸಿಗಡಿಯ ಸುಗ್ಗಿಯ ಕಾಲ.
ಪ್ರತೀ ವರ್ಷ  ಮೀನು ಹಿಡಿಯಲು ಕೆಲ ಆಸಕ್ತರು ರೈತರಿಂದ ಗಜನಿಯನ್ನು ಸವಾಲಿನಲ್ಲಿ ಪಡೆಯುತ್ತಾರೆ. 

ಮೀನು ಹಿಡಿದ ನಂತರ ಜೂನ್ ಅಂತ್ಯದೊಳಗೆ ಗಜನಿ ಖಾಲಿ ಮಾಡಿ ರೈತರಿಗೆ ವಾಪಸು ಕೊಡಬೇಕು. ಅಘನಾಶಿನಿ ಹಿನ್ನೀರು ಪ್ರದೇಶದ ಎಲ್ಲ ಗಜನಿಗಳಲ್ಲಿ ಈಗ ಮೀನು, ಏಡಿ, ಸಿಗಡಿ ಹಿಡಿಯುತ್ತಾರೆ. ಸಮುದ್ರ ಮೀನಿನ ಕೊರತೆ ಇರುವ ಈ ಸಂದರ್ಭದಲ್ಲಿ ಗಜನಿ ಮೀನಿಗೆ ರುಚಿಯೂ ಹೆಚ್ಚು.

ಹಾಗಾಗಿ  ಬಲೆ ಕಟ್ಟುವ ಉಬ್ಬರ ಇಳಿತ ಸಂದರ್ಭ ನೋಡಿಕೊಂಡು  ಗಜನಿಗೆ ಹೋದರೆ ಸಾರಿಗೆ ಮೀನು ಸಿಗುತ್ತದೆ. ಗಜನಿಯಲ್ಲಿ ಮೀನಿಗಿಂತ ಸಿಗಡಿಯೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ನೈಸರ್ಗಿಕವಾಗಿ ಬೆಳೆಯುವ ವೈಟ್ ಫ್ರೋನ್ಸ್ (ಬಿಳಿ ಸಿಗಡಿ) ದೊಡ್ಡ ಪ್ರಮಾಣದಲ್ಲಿದ್ದರೆ (ಒಂದು ಕಿಲೋಗೆ 30–40 ಸಿಗಡಿ ತೂಗಿದರೆ) ಆಯಿಲ್ ಫ್ರೈ, ಮಸಾಲೆ ಫ್ರೈ ಮಾಡಲು ಯೋಗ್ಯ. ಸಿಗಡಿ ಖಾದ್ಯದ ರುಚಿ ಕಂಡವರು ಮತ್ತೆ ಮತ್ತೆ ಗಜನಿಯತ್ತ  ಹೋಗುವುದೂ ಸಾಮಾನ್ಯ.

ಸಿಗಡಿ ಹೊರತಾಗಿ ಇಲ್ಲಿ ಸಿಗುವ ಹಾಲು ಗುರ್ಕ,  ಚಂದಕ ಮೀನಿನ ಸಾರು,  ಕುರಡಿ, ಕೆಂಸ, ಒಣ ಕಾಂಡಿ ಮೀನಿನ ತವಾ ಫ್ರೈ ಒಂದಕ್ಕಿಂತ ಇನ್ನೊಂದು ರುಚಿಕರ. ಗಜನಿಯಲ್ಲಿ ಸಿಗುವ ಮೀನುಗಳೆಲ್ಲ ಮೀನು ಮಾರುಕಟ್ಟೆಯಲ್ಲೂ ಸಿಗುತ್ತವೆ. ಆದರೆ ತಾಜಾತನದಲ್ಲಿ ಗಜನಿ ಮೀನಿಗೆ ಬೇರೆ ಮೀನುಗಳು ಸಾಟಿಯಲ್ಲ. ಎಷ್ಟೋ ಸಲ ಗಜನಿಯಿಂದ ತಂದ ಮೀನುಗಳನ್ನು  ಮನೆಗೆ ತಂದು ಪಾತ್ರೆಯಲ್ಲಿ ಹಾಕಿದರೂ ಅದು  ಬಡಿದಾಡುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT