ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಸ್ಥಳಾಂತರ: ಜೂ.30ರ ಗಡುವು

Last Updated 26 ಮೇ 2017, 9:52 IST
ಅಕ್ಷರ ಗಾತ್ರ

 ಬಾಗಲಕೋಟೆ: ಸುಪ್ರೀಂಕೋರ್ಟ್‌ನ ಮರು ಆದೇಶದ ಅನ್ವಯ ಜಿಲ್ಲೆಯಲ್ಲಿ ಹೆದ್ದಾರಿ ಪಕ್ಕದಲ್ಲಿರುವ 204 ಮದ್ಯದ ಅಂಗಡಿಗಳನ್ನು ಜೂನ್ 30ರೊಳಗೆ ಸ್ಥಳಾಂತರಿಸಬೇಕಿದೆ. ಜುಲೈ 1ರಿಂದ ಅನ್ವಯವಾಗುವಂತೆ ವಾರ್ಷಿಕ ಸನ್ನದು (ಲೈಸೆನ್ಸ್‌) ಮರು ನವೀಕರಣ ಮಾಡ ದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ.

ನ್ಯಾಯಾಲಯದ ಈಗಿನ ಆದೇಶದ ಅನ್ವಯ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಮದ್ಯದಂಗಡಿಗಳನ್ನು 220 ಇಲ್ಲವೇ 500 ಮೀಟರ್ ದೂರಕ್ಕೆ ಕಡ್ಡಾಯವಾಗಿ ಸ್ಥಳಾಂತರಿಸಬೇಕಿದೆ ಇಲ್ಲವೇ ಮುಚ್ಚಬೇಕಿದೆ.

‘ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಮದ್ಯ ಸೇವನೆ ಮಾಡಿ ಚಾಲಕರು ವಾಹನ ಚಾಲನೆ ಮಾಡು­ವುದು ಕಾರಣ. ಇದರಿಂದ ಅಮಾ­ಯಕರು ಬಲಿಯಾಗುತ್ತಿದ್ದಾರೆ’ ಎಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಹೆದ್ದಾರಿಯಿಂದ 500 ಮೀಟರ್ ದೂರಕ್ಕೆ ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಈ ಮೊದಲು ಆದೇಶಿ­ಸಿತ್ತು. ಅದಕ್ಕೆ 2017 ಮಾರ್ಚ್ 31ರವರೆಗೆ ಗಡುವು ನೀಡಿತ್ತು.

ಹೊಸ ಆದೇಶ: ಆದರೆ ಈ ಆದೇಶ ಪ್ರಶ್ನಿಸಿ ಮುಂಬೈನ ಮದ್ಯ ಮಾರಾಟ ಸಂಘದಿಂದ ಸುಪ್ರೀಂಕೋರ್ಟ್‌ನ ವಿಭಾ ಗೀಯ ಪೀಠಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲ್ಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ 500ರ ಬದಲು 220 ಮೀಟರ್‌ ಉಳಿದ ಕಡೆ 500 ಮೀಟರ್ ದೂರಕ್ಕೆ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸು ವಂತೆ ಆದೇಶ ನೀಡಿದೆ.

‘ನ್ಯಾಯಾಲಯದ ಮರು ಆದೇಶದ ಅನ್ವಯ ಇಲಾಖೆಯಿಂದ ಹೊಸ ಪಟ್ಟಿ ಸಿದ್ಧಗೊಳಿಸಿದೆ. ಅದರನ್ವಯ  ಜಿಲ್ಲೆಯಲ್ಲಿ ರುವ 272 ಮದ್ಯದಂಗಡಿಗಳ ಪೈಕಿ 204ನ್ನು ಸ್ಥಳಾಂತರಿಸಲೇಬೇಕಿದೆ. ಈಗಾ ಗಲೇ ಸಂಬಂಧಿಸಿದವರಿಗೆ ನೋಟಿಸ್‌ ಕೂಡ ಜಾರಿಗೊಳಿಸಲಾಗಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಬಸವರಾಜ ಸಂದಿಗವಾಡ ಹೇಳುತ್ತಾರೆ.

ಎಂಎಸ್‌ಐಎಲ್‌ಗೆ ಹೆಚ್ಚಿನ ಬಿಸಿ: ಜಿಲ್ಲೆಯಲ್ಲಿ 14 ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳಿವೆ. ಅದರಲ್ಲಿ 12 ಹೆದ್ದಾರಿ ಪಕ್ಕದಲ್ಲಿ ಇವೆ. ಅವುಗಳನ್ನೂ ಈಗ ಸ್ಥಳಾಂತರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT