ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಮಕ್ಕಳ ತಾಯಿ ಬಸವ ಕೃಪಾಲಯ

Last Updated 26 ಮೇ 2017, 9:59 IST
ಅಕ್ಷರ ಗಾತ್ರ

ಕೂಡಲಸಂಗಮ: ಇಲ್ಲಿಯ ಬಸವ ಧರ್ಮ ಪೀಠ ಹಾಗೂ ಬಸವ ಮಹಾ ಮನೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ 2005ರಲ್ಲಿ ಆರಂಭವಾದ ಬಸವ ಕೃಪಾ ಅನಾಥಾಲಯ ನೂರಾರು ಅನಾಥ ಮಕ್ಕಳಿಗೆ ದಾರಿ ದೀಪವಾಗುವ ಜೊತೆಗೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಹಾಗೂ ಕಾಯಕ ತತ್ವದ ಅರಿವು ಮೂಡಿಸುತ್ತಿವೆ.

ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಒದಗಿಸುವ ಉದ್ದೇಶದಿಂದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅನಾಥಾಲಯ ಪ್ರಾರಂಭಿಸಿದರು.

ಸದ್ಯ ಇಲ್ಲಿ 75 ಅನಾಥ ಮಕ್ಕಳು ಬದುಕು ಕಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 50 ಮಕ್ಕಳ 2 ಕುಟೀರಕ್ಕೆ ಅನುದಾನ ಬರುತ್ತಿದೆ, ಶಾಲಾ ಶಿಕ್ಷಣದ ಜೊತೆಗೆ ಅನಾಥಾಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ತರಗತಿ ನಡೆಯುತ್ತವೆ. ಅನಾಥ ಮಕ್ಕಳ ಜೊತೆಗೆ ಬಡ ಹಾಗೂ ಪ್ರತಿಭಾವಂತ ಮಕ್ಕಳೂ ಇಲ್ಲಿ ಆಶ್ರಯ ಪಡೆದಿದ್ದಾರೆ.

ಇಂದು ಅನಾಥ ಮಕ್ಕಳು ಸಮಾಜ ದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಅನಾಥಾಲಯ ಪ್ರಾರಂಭಿಸಿದ್ದೇವೆ, ಜೊತೆಗೆ ಪ್ರತಿಭಾವಂತ  ಹಾಗೂ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ದಿಂದ ಸ್ವಾಮಿ ಲಿಂಗಾನಂದ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಬಡ ಪ್ರತಿಭಾವಂತ ಮಕ್ಕಳಿಗೂ ಆಶ್ರಯ ನೀಡಿದ್ದಾರೆ 5ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಅನಾಥ ಮಕ್ಕಳು, 8 ರಿಂದ ಪಿಯುಸಿವರೆಗಿನ ಬಡ ಪ್ರತಿಭಾ ವಂತ ಮಕ್ಕಳು ಇಲ್ಲಿ ಆಶ್ರಯ ಪಡೆಯ ಬಹುದು.

ಪ್ರೌಢಶಾಲೆ ಹಾಗೂ ಪಿಯುಸಿ ವಿಜ್ಞಾನ ವಿಭಾಗ ಅಧ್ಯಯನ ಮಾಡುವ ವರಿಗಾಗಿಯೇ ಪ್ರತ್ಯೇಕ ಶಾಲೆ ಆರಂಭಿಸಿದ್ದಾರೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಉನ್ನತ ಶಿಕ್ಷಣದ ವೆಚ್ಚವನ್ನೂ ನಮ್ಮ ಸಂಸ್ಥೆಯಿಂದ ಕೊಟ್ಟಿದ್ದೇವೆ.

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಯಿಂದ ನಮ್ಮ ಅನಾಥಾಲಯಕ್ಕೆ ಮಕ್ಕಳು ಬರುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಕೂಡ ನಮಗೆ ಸಹಕಾರ ಕೊಡುತ್ತಿದ್ದಾರೆ. 2017–18ನೇ ಸಾಲಿನ ಅನಾಥಾಲ ಯದ ಉಚಿತ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜೂ.10 ಕೊನೆಯ ದಿನವಾಗಿದೆ ಎಂದು ಬಸವಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ತಿಳಿಸಿದರು.
ಬಸವ ಕೃಪಾ ಅನಾಥಾಲಯ, ಬಸವ ಮಹಾಮನೆ, ಚಾರಿಟಬಲ್ ಟ್ರಸ್ಟ್, ಬಸವಧರ್ಮ ಪೀಠ ಕೂಡಲಸಂಗಮ, ಹೆಚ್ಚಿನ ಮಾಹಿತಿಗೆ ಮೊ– 9341819847, 9743532637 ಸಂಪರ್ಕಿಸಿ.
 

* * 

ತಂದೆ, ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡ ಅನಾಥರಿಗೆ ಉಚಿತ ವಾಗಿ ಆಶ್ರಯ ನೀಡುತ್ತಿದ್ದು, 5 ರಿಂದ ದ್ವಿತೀಯ ಪಿಯುಸಿವರೆಗೆ  ಶಿಕ್ಷಣ ಇದೆ
ಮಾಹಾದೇಶ್ವರ ಸ್ವಾಮೀಜಿ
ಬಸವ ಧರ್ಮ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT