ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿನಕ್ಕೊಂದು ಕತೆ’ ಓದಿ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ವೃತ್ತಿಯನ್ನು ಪ್ರೀತಿಸುವ ಶಿಕ್ಷಕ ಇತರ ಶಿಕ್ಷಕರಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಅಭಿವೃದ್ಧಿಪಡಿಸಿದ ಆ್ಯಪ್ ‘ದಿನಕ್ಕೊಂದು ಕತೆ’ (dinakkomdu kate).
ಮಕ್ಕಳಿಗೆ ಪಾಠ ಹೇಳುವ ಮುಂಚೆ ಕತೆ ಹೇಳುವ ಅಭ್ಯಾಸವಿಟ್ಟುಕೊಂಡಿದ್ದ ಶಿಕ್ಷಕ ಅರಸಿಕೆರೆಯ ವೀರೇಶ್‌ ಕತೆಗಾಗಿ ಅಲ್ಲಿ ಇಲ್ಲಿ ಹುಡುಕುತ್ತಿದ್ದರು. ಇದೇ ಸಮಸ್ಯೆ ತನ್ನ ಸಹೋದ್ಯೋಗಿಗಳೂ ಎದುರಿಸುತ್ತಿದ್ದಾರೆಂದು ಮನಗೊಂಡು ಅಂತಹವರ ಸಹಾಯಕ್ಕೆಂದೇ ಸಾಫ್ಟ್‌ವೇರ್ ಸಂಸ್ಥೆಯೊಂದರ ಸಹಾಯ ಪಡೆದು ಪ್ರತಿದಿನ ಹೊಸ ಕತೆ ಒದಗಿಸುವ ಆ್ಯಪ್ ಅಭಿವೃದ್ಧಿಪಡಿಸಿದರು.

ದಿನಪತ್ರಿಕೆಗಳಲ್ಲಿ ನೋಡಿದ, ಕೇಳಿದ, ವಾಟ್ಸ್‌ಆ್ಯಪ್‌ಗಳಲ್ಲಿ ಕಂಡ ಕತೆಗಳನ್ನು ಸಂಗ್ರಹಿಸಿ ವೀರೇಶ್ ಅವರು ಆ್ಯಪ್‌ಗೆ ಸೇರಿಸುತ್ತಾ ಬರುತ್ತಿದ್ದಾರೆ. ಇಲ್ಲಿಯವರೆಗೆ 427 ಕತೆಗಳನ್ನು ಆ್ಯಪ್‌ಗೆ ಸೇರಿಸಿದ್ದಾರೆ ಇವರು.

ಹೆಚ್ಚು ಉದ್ದವಿಲ್ಲದ ಸರಳ ಮತ್ತು ಪ್ರಸ್ತುತ ವಸ್ತು ವಿಷಯಗಳಿಗೆ ಸಂಬಂಧಿಸಿದ ಕತೆಗಳು ಚೆನ್ನಾಗಿವೆ. ಮಕ್ಕಳಿಗಾಗಿ ನೀತಿಕತೆಗಳು, ಫ್ಯಾಂಟಸಿ ಕತೆಗಳೂ ಆ್ಯಪ್‌ನಲ್ಲಿವೆ.

ಪತ್ರಿಕೆಗಳನ್ನು ಓದುವ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಇಲ್ಲಿನ ಕತೆಗಳು ಮೊದಲೇ ಓದಿದವು ಎಂದು ಅನಿಸುತ್ತದೆ. ಆದರೆ ಮಕ್ಕಳಿಗೆ ಹೇಳಲು ಉತ್ತಮ ಇವು ಉತ್ತಮವಾದ ಕತೆಗಳು. ಆ್ಯಪ್‌ ಬಳಸಲು ಸುಲಭವಾಗಿದೆ. ಕಪ್ಪು ಬಣ್ಣದ ಪರದೆ ಮೇಲೆ ಮೂಡುವ ಬಿಳಿ ಅಕ್ಷರಗಳು ಓದಲು ಸುಲಭವಾಗಿದೆ. ಅಕ್ಷರಗಳ ಗಾತ್ರ ಹಿಗ್ಗಿಸಲು ಕುಗ್ಗಿಸಲು ಆಯ್ಕೆ ನೀಡಿರುವುದು ಉತ್ತಮವಾಗಿದೆ. ಆ್ಯಪ್‌ನಲ್ಲಿ ಜಾಹೀರಾತುಗಳ ಕಿರಿಕಿರಿ ಇಲ್ಲದಿರುವುದು ಆ್ಯಪ್‌ನ ಮತ್ತೊಂದು ಸಕಾರಾತ್ಮಕ ಅಂಶ. ಕತೆ ಓದಿದ ನಂತರ ಅಭಿಪ್ರಾಯ ಹಂಚಿಕೊಳ್ಳಲು ಇಲ್ಲಿ ಅವಕಾಶ ನೀಡಲಾಗಿದೆ.

ಕತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆಯ್ಕೆ ನೀಡಲಾಗಿದೆ. ಆ್ಯಪ್‌ ಅನ್ನು ಇಲ್ಲಿಯವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಕೆದಾರರು ಆ್ಯಪ್‌ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT