ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೀತ ಗೋವಿಂದ’ ಕಾವ್ಯ ರಸಧಾರೆ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ನೃತ್ಯಾಂತರ ಶಾಲೆಯ ಮೂಲಕ  ನಗರದಲ್ಲಿ ಒಡಿಸ್ಸಿ ನೃತ್ಯ ಸಂಸ್ಕೃತಿ  ಬೆಳೆಸುತ್ತಿರುವ ಕಲಾವಿದೆ ಮಧುಲಿತಾ ಮೊಹಾಪಾತ್ರ. ಇದೀಗ ಸಂಸ್ಥೆಯ ವತಿಯಿಂದ ಮೇ 27 ಹಾಗೂ 28ರಂದು ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ‘ಕಾವ್ಯರಸ’ ಆಯೋಜಿಸಿದ್ದಾರೆ.

ಜಯದೇವ್‌ ವಿರಚಿತ ‘ಗೀತ ಗೋವಿಂದ’ ಕಾವ್ಯದಿಂದ ಆಯ್ದ ಹಾಡುಗಳಿಗೆ ನೃತ್ಯ ಗುರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಗೀತ ಗೋವಿಂದದ 16 ಕಾವ್ಯಗಳು ನೃತ್ಯ ರೂಪದಲ್ಲಿ ಪ್ರಕಟಗೊಳ್ಳಲಿವೆ.

(ಗೋಪಿಕಾ ವರ್ಮಾ)

‘ಎಲ್ಲಾ ಕಾವ್ಯಗಳು ಅಷ್ಟಪದಿಯಲ್ಲಿವೆ. ಅಲ್ಲದೆ ಕೃಷ್ಣ ಹಾಗೂ ರಾಧೆಯ ಪ್ರೀತಿಗೆ ಸಂಬಂಧಿಸಿದ ಹಾಡುಗಳಿಗೆ ಅಭಿನಯಿಸುವುದು, ನರ್ತಿಸುವುದೆಂದರೆ ಎಲ್ಲಾ ನೃತ್ಯ ಕಲಾವಿದರು ವರ ಎಂದೇ ಭಾವಿಸುತ್ತಾರೆ.

‘ಯಾವುದೇ ಸನ್ನಿವೇಶವಿರಲಿ, ಹಿರಿಯ ಕಲಾವಿದರು ಅಭಿನಯದ ಮೂಲಕ ಪ್ರಸ್ತುತಪಡಿಸುವ ರೀತಿ ವಿಶೇಷವಾಗಿರುತ್ತದೆ. ಈ ಬಾರಿ ಭಾನುಮತಿ, ಶರ್ಮಿಳಾ ಮುಖರ್ಜಿ, ಗೋಪಿಕಾ ವರ್ಮಾ, ವೀಣಾ ಮೂರ್ತಿ ವಿಜಯ್‌, ವೈಜಯಂತಿ ಕಾಶಿ ಅವರಂಥ ನೃತ್ಯ ಗುರುಗಳೇ ಸ್ವತಃ ಕಾರ್ಯಕ್ರಮ ನೀಡಲಿದ್ದಾರೆ. ಯುವ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಒಡಿಸ್ಸಿ ನೃತ್ಯವನ್ನಷ್ಟೇ ಅಲ್ಲ, ಎಲ್ಲಾ ನೃತ್ಯ ಪ್ರಕಾರದ ಸೊಬಗನ್ನು ಜನರ ಮನಸ್ಸಿನಾಳಕ್ಕೆ ಇಳಿಸುವುದು ಕಾವ್ಯರಸದ ಉದ್ದೇಶ’ ಎನ್ನುತ್ತಾರೆ ಮಧುಲಿತಾ ಮೊಹಾಪಾತ್ರ.

(ಶರ್ಮಿಳಾ ಮುಖರ್ಜಿ)

‘ಗೀತ ಗೋವಿಂದ’ದ 24 ಕಾವ್ಯಗಳ ಪೈಕಿ 16 ಕಾವ್ಯಗಳನ್ನು ಆಯ್ದುಕೊಳ್ಳಲಾಗಿದೆ. ಈ ಕಾವ್ಯಗಳು ಕಥಕ್‌, ಭರತನಾಟ್ಯ, ಒಡಿಸ್ಸಿ, ಕೂಚಿಪುಡಿ  ನೃತ್ಯ ಶೈಲಿಯಲ್ಲಿ ಪ್ರಸ್ತುತಗೊಳ್ಳಲಿವೆ. ನೃತ್ಯಗುರುಗಳು ತಮ್ಮ ಕ್ರಿಯಾಶೀಲತೆಯನ್ನು ಧಾರೆಯೆರೆದು ನೃತ್ಯ ಸಂಯೋಜನೆ ಮಾಡಿ ಸ್ವತಃ ತಾವೇ ನೃತ್ಯ ಪ್ರದರ್ಶನ ನೀಡಲಿರುವುದು ಪ್ರಮುಖ ಆಕರ್ಷಣೆ.

ಗೀತ ಗೋವಿಂದದ ಕುರಿತು: ಹನ್ನೆರಡನೇ  ಶತಮಾನದಲ್ಲಿ ರಚನೆಯಾದ ಕೃತಿ ಇದು. ರಾಧಾ ಹಾಗೂ ಕೃಷ್ಣರ ಪ್ರೀತಿಯನ್ನು ಸಂಕೇತಿಸುವ, ದೇವರಲ್ಲಿ ವಿಲೀನವಾಗಲು ಹಾತೊರೆಯುವ ಮನಸ್ಥಿತಿಯನ್ನು ಕಾವ್ಯಗಳ ಮೂಲಕ ಕಟ್ಟಿಕೊಡಲಾಗಿದೆ. ಯಮುನಾ ನದಿ ತೀರದಲ್ಲಿ ಸರಸ ಸಲ್ಲಾಪ, ಪ್ರೀತಿ ವ್ಯಕ್ತಪಡಿಸುವ ಬಗೆ, ವಿರಹ ವೇದನೆಯ ನೋವು, ಅಂತಿಮವಾಗಿ ದೈವತ್ವದಲ್ಲಿ ವಿಲೀನವಾಗುವ ಭಾವಗಳನ್ನು ವೇದಿಕೆಯಲ್ಲಿ ನೃತ್ಯಗುರುಗಳು ಪ್ರಸ್ತುತಪಡಿಸಲಿದ್ದಾರೆ.

(ಮಧು ನಟರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT