ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಕಠಿಣ ಎದುರಾಳಿಯಾಗಲಿದೆ: ವಿಲಿಯಮ್ಸನ್

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್ :  ಈ ಬಾರಿಯ ಚಾಂಪಿಯನ್ಸ್  ಟ್ರೋಫಿ ಕ್ರಿಕೆಟ್ ಟೂರ್ನಿ ಯಲ್ಲಿ ತಮ್ಮ ತಂಡವು ಎದುರಾಳಿಗಳಿಗೆ ಕಠಿಣ ಪೈಪೋಟಿ ಒಡ್ಡುವುದು ಖಚಿತ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಲಿಯಮ್ಸನ್ ಅವರು ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ತಮ್ಮ ತಂಡದ ನಾಯಕರಾಗಿ ಕಣಕ್ಕಿಳಿ ಯುತ್ತಿದ್ದಾರೆ. ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ವಿಶ್ವಕಪ್‌ ಟೂರ್ನಿಯ ಮಾದರಿಗೂ ಈ ಟೂರ್ನಿಗೂ ಸಾಕಷ್ಟು ವ್ಯತ್ಯಾಸವಿದೆ.  ಟೂರ್ನಿಯ ಆರಂಭದಿಂದಲೇ ಉತ್ತಮ ವಾಗಿ ಆಡಿದರೆ ಮಾತ್ರ ಲಯ ಉಳಿಸಿ ಕೊಳ್ಳಲು ಸಾಧ್ಯವಿದೆ’ ಎಂದರು.

‘ಇದು ಅತ್ಯಂತ ರೋಚಕ ಟೂರ್ನಿ ಯಾಗಲಿದೆ. ಪ್ರತಿಯೊಂದು ಪಂದ್ಯ ದಲ್ಲಿಯೂ ಸಾಮರ್ಥ್ಯ ಮೀರಿ ಹೋರಾಟ ಮಾಡಬೇಕು. ಎಲ್ಲ ರೀತಿಯ ಸವಾಲು ಗಳನ್ನು ಮೀರಿ ನಿಲ್ಲಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT