ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಕರಡು ಸಿದ್ಧಪಡಿಸಿದವರಾರು?

ನಮ್ಮ ಸಂವಿಧಾನ ನಮಗೆಷ್ಟು ಗೊತ್ತು?
Last Updated 26 ಮೇ 2017, 20:28 IST
ಅಕ್ಷರ ಗಾತ್ರ

ಸಂವಿಧಾನದ ಮೊದಲ ಕರಡನ್ನು ಸಿದ್ಧಪಡಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರದ ಬೆನೆಗಲ್‌ ನರಸಿಂಹರಾವ್‌. ಐಎಎಸ್‌ ಅಧಿಕಾರಿ
ಯಾಗಿದ್ದ ಇವರನ್ನು 1944ರಲ್ಲಿ ನಿವೃತ್ತರಾದ ಮೇಲೆ ಕಾನ್ಸ್‌ಟಿಟ್ಯೂಷನ್‌ ಅಸೆಂಬ್ಲಿಗೆ ಸಂವಿಧಾನ ಸಲಹೆಗಾರರನ್ನಾಗಿ 1946ರಲ್ಲಿ ಕೇಂದ್ರ ಸರ್ಕಾರ ನೇಮಿಸಿತ್ತು.

ಬೇರೆ ಬೇರೆ ದೇಶಗಳಲ್ಲಿ ಇರುವ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಸೂಕ್ತ ಆಗುವಂಥ ಸಂವಿಧಾನವನ್ನು ರಚಿಸಲು ಅವರಿಗೆ ತಿಳಿಸಲಾಗಿತ್ತು. ಅದರಂತೆ ರಾವ್‌ ಅವರು ಸುದೀರ್ಘ ಅಧ್ಯಯನ ನಡೆಸಿ ಕರಡನ್ನು ತಯಾರಿಸಿದರು.

ಅದರಲ್ಲಿ 243 ಪರಿಚ್ಛೇದ(ಆರ್ಟಿಕಲ್‌) ಮತ್ತು 13 ಶೆಡ್ಯೂಲ್‌ ಇದ್ದುವು.  ಡಾ.ಬಿ.ಆರ್‌.ಅಂಬೇಡ್ಕರ್‌ ಅವರು 1947ರಲ್ಲಿ ಕರಡು ಸಮಿತಿಯ ಅಧ್ಯಕ್ಷರಾದ ಮೇಲೆ ಕರಡು ಪ್ರತಿಗಳನ್ನು ತಿದ್ದಿ ತೀಡಿ 395 ಪರಿಚ್ಛೇದ ಮತ್ತು 8 ಶೆಡ್ಯೂಲ್ ರೂಪಿಸಿದರು. ರಾವ್‌ ಅವರು ಕರಡು ಪ್ರತಿ ಸಿದ್ಧಪಡಿಸಲು ಒಂದು ರೂಪಾಯಿ
ಯನ್ನೂ ಪಡೆಯಲಿಲ್ಲ ಎನ್ನುತ್ತದೆ ದಾಖಲೆ. ರಾವ್‌ ಅವರ ಈ ಕೊಡುಗೆ ಬಗ್ಗೆ  ಸ್ವತಃ ಅಂಬೇಡ್ಕರ್‌ ಅವರೇ ಭಾಷಣಗಳಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT