ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಸೇವೆಯೇ ಆಸ್ಪತ್ರೆಯ ಗುರಿ

Last Updated 27 ಮೇ 2017, 6:36 IST
ಅಕ್ಷರ ಗಾತ್ರ

ಉಜಿರೆ: ಗಣಕೀಕೃತ ವೈದ್ಯಕೀಯ ದಾಖಲೆಗಳ ವಿಭಾಗದಿಂದ ಶೀಘ್ರವಾಗಿ ರೋಗಿ ಗಳ ಜತೆ ಸಮಾಲೋಚನೆ ಮತ್ತು ತಪಾಸಣೆ ನಡೆಸಲು ಅನುಕೂಲವಾ ಗುತ್ತದೆ. ರೋಗಿಯ ಸಂಪೂರ್ಣ ವೈದ್ಯ ಕೀಯ ವಿವರ ಒಂದೇ ಪರದೆಯಲ್ಲಿ ಕಾಣುವುದರಿಂದ ಸಮಗ್ರ ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದು ಧರ್ಮ ಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಗಣಕೀಕೃತ ವೈದ್ಯಕೀಯ ದಾಖಲೆಗಳ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.‘ವೈದ್ಯಕೀಯ ದಾಖಲೆಗಳ       ನಿರ್ವ ಹಣೆ ಮತ್ತು ಅದನ್ನು ಹುಡುಕುವ ಕೆಲಸ ದಲ್ಲಿ ಆಗುವ ಅನಗತ್ಯ ವಿಳಂಬವನ್ನು ತಡೆಗಟ್ಟಬಹುದು. 

ರೋಗಿಗಳ ತ್ವರಿತ ಸೇವೆಯೇ ನಮ್ಮ ಆಸ್ಪತ್ರೆಯ ಗುರಿಯಾ ಗಿದ್ದು ದಾಖಲೆಗಳನ್ನು ಗಣಕೀಕೃತಗೊಳಿ ಸುವುದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಹೇಳಿ ಅವರು ಶುಭ ಹಾರೈಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಾತ ನಾಡಿ. ಗಣಕೀಕೃತ ವೈದ್ಯಕೀಯ ದಾಖಲೆ ಗಳಿಂದ ದೀರ್ಘಕಾಲ ದಾಖಲೆಗಳ ಸಂ ರಕ್ಷಣೆ ಮಾಡಬಹುದು. ಮಾನವ ಶ್ರಮ ದ ಉಳಿತಾಯವೂ ಆಗುತ್ತದೆ ಎಂದರು. ಆಸ್ಪತ್ರೆಯ ಕಾರ್ಯನಿರ್ವಹ ಣಾಧಿಕಾರಿ ಮನ್ಮಥ್ ಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟಿನ ಕಾರ್ಯದರ್ಶಿ ಶಿಶುಪಾಲ ಪೂವಣಿ ಧನ್ಯವಾದವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT