ನಗೆ, ಬಗೆ ಬಗೆ ಲೇ

ಮೊದಲ ಓದು

ಹಿರಿಯ  ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅವರ ವಿನೋದ ಕವಿತೆಗಳ ಗುಚ್ಛ ‘ನಗೆ, ಬಗೆ ಬಗೆ’. ಈ ಕೃತಿಯನ್ನು ‘ಈವರೆಗಿನ ಪ್ರಕಟಿಕ ವಿನೋದ ಕವಿತೆಗಳ ಸಮಗ್ರ ಸಂಕಲನ’ ಎಂದು ಕವಿ ಕರೆದುಕೊಂಡಿದ್ದಾರೆ.

ಪುಟ:100 ಬೆಲೆ: ₹ 65

ನಗೆ, ಬಗೆ ಬಗೆ
ಲೇ:
ಬಿ.ಆರ್‌. ಲಕ್ಷ್ಮಣರಾವ್
ಪ್ರ: ಸಪ್ನ ಬುಕ್‌ಹೌಸ್‌, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು–9

**

ಹಿರಿಯ  ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅವರ ವಿನೋದ ಕವಿತೆಗಳ ಗುಚ್ಛ ‘ನಗೆ, ಬಗೆ ಬಗೆ’. ಈ ಕೃತಿಯನ್ನು ‘ಈವರೆಗಿನ ಪ್ರಕಟಿಕ ವಿನೋದ ಕವಿತೆಗಳ ಸಮಗ್ರ ಸಂಕಲನ’ ಎಂದು ಕವಿ ಕರೆದುಕೊಂಡಿದ್ದಾರೆ.

ಇಲ್ಲಿ ಕಿಕ್ಕಿರಿದಿರುವ ನೂರಾರು ಕವಿತೆಗಳ ಉದ್ದೇಶ ಸಹೃದಯರ ಮುಖದಲ್ಲಿ ಮಂದಹಾಸ ಮೂಡಿಸುವುದು. ಹೀಗೆ ನಗಿಸಲು ಹೊರಡುವ ಬಹುತೇಕ ಸಂದರ್ಭಗಳಲ್ಲಿ, ನಗೆಯೆನ್ನುವುದು ಲಘುವಾಗುವುದೇ ಹೆಚ್ಚು. ಜೊತೆಗೆ ನಗೆಯ ಹೆಸರಿನಲ್ಲಿ ತುಂಟತನ ತನ್ನ ಚೌಕಟ್ಟನ್ನು ದಾಟಿರುವ ಉದಾಹರಣೆಗಳೂ ಸಾಕಷ್ಟಿವೆ. ಆದರೆ, ಲಕ್ಷ್ಮಣರಾವ್‌ ಅವರ ಕವಿತೆಗಳು ಸಭ್ಯತೆಯ ಚೌಕಟ್ಟಿನಲ್ಲಿ ನಿಂತೇ ಓದುಗರಿಗೆ ಕಚಗುಳಿ ಇಡುತ್ತವೆ.

ದೈನಿಕದ ಸರಳ ಸಂಗತಿಗಳಲ್ಲಿ ಹುದುಗಿರುವ ನಗುವನ್ನು ಮಿಡಿಯುವಲ್ಲಿ ಹಾಗೂ ಭಾಷೆಯ ಬಾಗು–ಬಳುಕಿನ ಮೂಲಕ ಹೊಸ ಅರ್ಥಗಳನ್ನು ಸ್ಫುರಿಸುವಲ್ಲಿ ಬಿಆರ್‌ಎಲ್‌ ಸಿದ್ಧಹಸ್ತರೆನ್ನುವುದಕ್ಕೆ ಪುಸ್ತಕದ ಪುಟಪುಟದಲ್ಲೂ ಕುರುಹುಗಳಿವೆ. ‘ತರಳೆ / ಹಾಸಿಗೆಯಲ್ಲಿ / ಅಂಗಾತ / ಜಿರಲೆ’ ಎಂದು ತುಂಟತನ ತೋರುವ ಕವಿ, ‘ಮಿತವಾಗಿ ಬಳಸಿ / ಕನ್ನಡ ಉಳಿಸಿ’ ಎಂದು ಮೇಷ್ಟ್ರೂ ಆಗಬಲ್ಲರು. ‘ನಗರ ವಿಹಾರ’, ‘ನನಗೆ ಮಗಳಿದ್ದಿದ್ದರೆ’, ‘ಎಷ್ಟಾದರೆ ಸಾಕು’, ‘ಸಾಲಗಾರನ ಹಾಡು’ ರೀತಿಯ ಜನಪ್ರಿಯ ಕವನಗಳು ಈ ಸಂಕಲನದಲ್ಲಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017
ಮೊದಲ ಓದು

ನಗೆಯ ಹಾಯಿದೋಣಿ ಲೇ
ಮೊದಲ ಓದು

27 May, 2017