ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷ: ಬಗೆಬಗೆ ಆಚರಣೆ

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಏಪ್ರಿಲ್ ಬಂದರೆ ಹೊಸವರ್ಷದ ಸಂಭ್ರಮ. ವಸಂತ ಋತುವಿನ ಆಗಮನವಾದಂತೆ ಜೀವಕಳೆ. ಮಹಾರಾಷ್ಟ್ರದಲ್ಲಿ ‘ಗುಡಿಪರ್ವ’, ಕರ್ನಾಟಕ ಹಾಗೂ ಆಂಧ್ರದಲ್ಲಿ ‘ಯುಗಾದಿ’, ಪಂಜಾಬ್‌ನಲ್ಲಿ ‘ಬೈಸಾಖಿ’, ಅಸ್ಸಾಂನಲ್ಲಿ ‘ಬಿಹು’, ಕೇರಳದಲ್ಲಿ ‘ವಿಶು’, ತಮಿಳುನಾಡಿನಲ್ಲಿ ‘ವರುಷ ಪಿರಪ್ಪು’ ಎಂದೆಲ್ಲ ಹೊಸವರ್ಷವನ್ನು ಆಚರಿಸುತ್ತಾರೆ.

ಮಹಾರಾಷ್ಟ್ರದಲ್ಲಿ ‘ಗುಡಿ’ ಎಂಬ ಸ್ತಂಭ ನಿರ್ಮಿಸುತ್ತಾರೆ. ಅದರ ಮೇಲೆ ಬೆಳ್ಳಿ ಅಥವಾ ಕಂಚಿನ ಕುಂಭ ಇಡುತ್ತಾರೆ. ಕೇಸರಿ ಅಥವಾ ಕೆಂಪು ಸೀರೆಯಿಂದ ಅಲಂಕರಿಸಿ ಹೂಗಳ ಸಿಂಗಾರ ಮಾಡುತ್ತಾರೆ. ಮಾವಿನ ಎಲೆ ಹಾಗೂ ಬೇವಿನ ಎಸಳುಗಳನ್ನೂ ಕಟ್ಟುತ್ತಾರೆ. ಮನೆಯ ಹೊರಗೆ ‘ಗುಡಿ’ಯನ್ನು ಜನ ನೋಡಲೆಂದು ಇಟ್ಟು, ಪೂಜಿಸುತ್ತಾರೆ. ಮಾವಿನ ಹಣ್ಣಿನಿಂದ ಮಾಡಿದ ಪಾನ್ಹ, ರುಚಿಕಟ್ಟಾದ ಪೂರಣ್ ಪೋಳಿ ಹಾಗೂ ಬಾಯಲ್ಲಿ ನೀರೂರಿಸುವ ಶ್ರೀಖಂಡ್ ಪೂರಿಯನ್ನ ನೈವೇದ್ಯ ಮಾಡಿ, ಸವಿಯುತ್ತಾರೆ. ಕರ್ನಾಟಕದಲ್ಲಿ ಹೋಳಿಗೆ ಊಟ ಜನಪ್ರಿಯ.

ಕೇರಳದಲ್ಲಿ ಹಳದಿ ಹೂಗಳನ್ನು ನಿರ್ದಿಷ್ಟ ಕ್ರಮದಲ್ಲಿ ಜೋಡಿಸುವುದರ ಮೂಲಕ ಹಬ್ಬ ಆರಂಭವಾಗುತ್ತದೆ. ಈ ಆಚರಣೆಯನ್ನು ‘ಕಣಿ’ ಎನ್ನುತ್ತಾರೆ. ಆ ಕಾಲದಲ್ಲಿ ಬೆಳೆಯುವ ಹಣ್ಣು, ತರಕಾರಿಗಳು, ಧಾನ್ಯಗಳನ್ನು ಬಳಸಿ ದೀಪಗಳ ಆಕೃತಿ ಮೂಡಿಸುತ್ತಾರೆ. ಲೋಹದ ಕನ್ನಡಿ, ಅಷ್ಟಮಾಂಗಲ್ಯ, ತಾಳೆಗರಿಯನ್ನ ‘ಉರುಲಿ’
ಎಂಬ ಸಾಂಪ್ರದಾಯಿಕ ಪಾತ್ರೆಯಲ್ಲಿರಿಸುವ ಪೂಜಿಸುವ ಸಂಪ್ರದಾಯವಿದೆ.

ಪಂಜಾಬ್ ಹಾಗೂ ಅಸ್ಸಾಂನಲ್ಲಿ ‘ಬೈಸಾಖಿ’ ಹಾಗೂ ‘ಬೋಹಾಗ್ ಬಿಹು’ ಸುಗ್ಗಿ ಹಬ್ಬಗಳು. 1669ರಲ್ಲಿ ಗುರು ಗೋವಿಂದ್ ಸಿಂಗ್ ಖಾಲ್ಸಾ ಪಂಥವನ್ನು ಪ್ರಾರಂಭಿಸಿದ್ದು ಬೈಸಾಖಿ ದಿನದಂದೇ ಎಂಬ ಪ್ರತೀತಿ ಇದೆ. ಗುರುದ್ವಾರಕ್ಕೆ ಸಿಖ್ಖರು ಹೋಗಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಭಾಂಗ್ರಾ, ಗಿದ್ದ ನೃತ್ಯಕ್ಕೆ ಬೈಸಾಖಿ ಹಬ್ಬ ನೆಪವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT