ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಂಚ್–ಹೆಡ್ ಅಬ್ಬರದ ಬ್ಯಾಟಿಂಗ್

ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾಗೆ ಸೋಲು
Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್: ಆ್ಯರನ್ ಫಿಂಚ್ (137; 109ಎ, 11ಬೌಂ, 6ಸಿ) ಅವರ  ಅಮೋಘ ಶತಕ ಮತ್ತು ಟ್ರಾವಿಸ್ ಹೆಡ್ (85; 73ಎ, 7ಬೌಂ) ಅವರ ಅರ್ಧ ಶತಕದ ಬಲದಿಂದ   ಆಸ್ಟ್ರೇಲಿಯಾ ತಂಡವು  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು  ಏಂಜೆಲೊ ಮ್ಯಾಥ್ಯೂಸ್ (95;  106ಎ, 9ಬೌಂ, 2ಸಿ) ಮತ್ತು ಅಸೆಲಾ ಗುಣರತ್ನೆ (ಔಟಾ ಗದೆ 70; 56ಎ, 8ಬೌಂ, 2ಸಿ) ಅವರ ಅರ್ಧಶತಕಗಳಿಂದ  50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 318 ರನ್‌ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಪಂದ್ಯದಲ್ಲಿ ಇನ್ಣೂ ಎರಡು ಎಸೆತಗಳು ಬಾಕಿಯಿರುವಾಗಲೇ  ಗೆಲುವಿನ ಗುರಿ ಸಾಧಿಸಿತು.

ಐಪಿಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದ ಆಟಗಾರ ಡೇವಿಡ್ ವಾರ್ನರ್ (19 ರನ್ ) ಮತ್ತು ಆ್ಯರನ್ ಫಿಂಚ್ ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು. ವಾರ್ನರ್ ಅವರು 12ನೇ ಓವರ್‌ನಲ್ಲಿ ಪ್ರದೀಪ್ ಎಸೆತದಲ್ಲಿ ಔಟಾದರು. ಆದರೆ ಇನ್ನೊಂದೆಡೆ ಫಿಂಚ್ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದರು. ಕ್ರಿಸ್ ಲಿನ್ (19 ರನ್) ಮತ್ತು ಮೊಸೆಸ್ ಹೆನ್ರಿಕ್ಸ್‌ (10 ರನ್) ಬೇಗನೆ ನಿರ್ಗಮಿಸಿ ದರು. ಫಿಂಚ್ ಜೊತೆಗೂಡಿದ  ಟ್ರಾವಿಸ್ ಹೆಡ್ ಇನಿಂಗ್ಸ್‌ ಬೆಳೆಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 75 ರನ್‌ ಪೇರಿಸಿದರು.

ಫಿಂಚ್ ಅವರು 75 ಎಸೆತಗಳಲ್ಲಿ 100ರ ಗಡಿ ದಾಟಿದರು. ಅದರಲ್ಲಿ ಐದು ಆಕರ್ಷಕ ಸಿಕ್ಸರ್‌ಗಳು ಮತ್ತು ಒಂಬತ್ತು ಬೌಂಡರಿಗಳು ಇದ್ದವು. 36ನೇ ಓವರ್‌ನಲ್ಲಿ ಪ್ರದೀಪ ಅವರ ಎಸೆತದಲ್ಲಿ ಫಿಂಚ್ ಔಟಾದರು. ಆಗ ಗೆಲುವಿಗೆ ಇನ್ನೂ 101 ರನ್‌ಗಳ ಅವಶ್ಯಕತೆ ಇತ್ತು. ಟ್ರಾವಿಸ್ ಹೆಡ್ ಅವರ ದಿಟ್ಟತನದ ಬ್ಯಾಟಿಂಗ್ ಮಾಡಿದ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 318 (ನಿರೋಷನ್ ಡಿಕ್ವೆಲಾ 41,  ಏಂಜೆಲೊ ಮ್ಯಾಥ್ಯೂಸ್ 95, ಚಾಮರ ಕಪುಗೆದೆರಾ 30, ಅಸೆಲಾ ಗುಣರತ್ನೆ ಔಟಾಗದೆ 70, ಸಿಕ್ಕುಗೆ ಪ್ರಸನ್ನ 31, ಜೋಶ್ ಹ್ಯಾಜಲ್‌ ವುಡ್ 69ಕ್ಕೆ1,  ಪ್ಯಾಟ್ ಕಮಿನ್ಸ್‌ 47ಕ್ಕೆ1, ಮೊಸೆಸ್ ಹೆನ್ರಿಕ್ಸ್ 46ಕ್ಕೆ3, ಟ್ರಾವಿಸ್ ಹೆಡ್ 13ಕ್ಕೆ1).


ಆಸ್ಟ್ರೇಲಿಯಾ:  49.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 319 ( ಆ್ಯರನ್ ಫಿಂಚ್ 137, ಟ್ರಾವಿಸ್ ಹೆಡ್ ಔಟಾಗದೆ 85,  ಮಾರ್ಕಸ್ ಸ್ಟೋನಿಸ್ 15, ನುವಾನ್ ಪ್ರದೀಪ್ 57ಕ್ಕೆ3, ಲಕ್ಷ್ಮಣ್ ಸಂದಕಾನ್ 69ಕ್ಕೆ2, ಲಸಿತ್ ಮಾಲಿಂಗ 32ಕ್ಕೆ1, ಅಸೆಲಾ ಗುಣರತ್ನೆ 36ಕ್ಕೆ1)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT