ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಕಿವೀಸ್ ಹಣಾಹಣಿ

ಹಾಲಿ ಚಾಂಪಿಯನ್ನರಿಗೆ ಶುಭ ನಿರೀಕ್ಷೆ
Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್: ಹಾಲಿ ಚಾಂಪಿಯನ್ ಭಾರತ ತಂಡವು ಭಾನುವಾರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ನ್ಯೂಜಿ ಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಟ್ವೆಂಟಿ–20 ಪಂದ್ಯಗಳಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ ಆಟಗಾರರು ಈಗ 50 ಓವರ್‌ಗಳ ಪಂದ್ಯಗಳಿಗೆ ಸಜ್ಜಾಗ ಬೇಕಿದೆ. ನಾಲ್ಕು ತಿಂಗಳಿಂದ ಏಕದಿನ ಪಂದ್ಯಗಳನ್ನು ಆಡದ ಭಾರತ ತಂಡ ದವರಿಗೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಸಜ್ಜಾಗಲು ಅಭ್ಯಾಸ ಪಂದ್ಯಗಳು ನೆರವಾಗಲಿವೆ.

2013ರಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಅದನ್ನು ಉಳಿಸಿ ಕೊಳ್ಳುವತ್ತ ಚಿತ್ತ ನೆಟ್ಟಿದೆ. ಸುಮಾರು  ಒಂದು ವರ್ಷದ ನಂತರ ಏಕದಿನ ಕ್ರಿಕೆಟ್‌ ಪಂದ್ಯ ಆಡುತ್ತಿರುವ ಮಧ್ಯಮವೇಗಿ ಮೊಹಮ್ಮದ್ ಶಮಿ ಮತ್ತು  ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸತ್ವ ಪರೀಕ್ಷೆಯು ಈ ಪಂದ್ಯದಲ್ಲಿ ಆಗಲಿದೆ.
ಟೆಸ್ಟ್‌ ಕ್ರಿಕೆಟ್‌ ಬೌಲರ್‌ಗಳಲ್ಲಿ ಅಗ್ರ ಸ್ಥಾನದಲ್ಲಿರುವ ಅಶ್ವಿನ್ ಅವರು  ತವರಿ ನಲ್ಲಿ ನಡೆದಿದ್ದ 13 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದರು. 

ಆದರೆ, ಬೆರಳಿನ ಗಾಯ ದಿಂದಾಗಿ ಅಶ್ವಿನ್ (ರೈಸಿಂಗ್ ಪುಣೆ ಸೂಪರ್‌ಜೈಂಟ್ ಪ್ರತಿನಿಧಿಸುತ್ತಾರೆ)  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹತ್ತನೇ ಆವೃತ್ತಿ ಯಲ್ಲಿ ಆಡಿರಲಿಲ್ಲ. ಆಸ್ಟ್ರೇಲಿಯಾ ಎದು ರಿನ ಟೆಸ್ಟ್ ಸರಣಿಯ ನಂತರ ಅವರು ಸುಮಾರು ಏಳು ವಾರಗಳ ವಿಶ್ರಾಂತಿ ಪಡೆದಿದ್ದಾರೆ.

ಮೊಹಮ್ಮದ್ ಶಮಿ ಅವರು 2015ರ ಡಿಸೆಂಬರ್‌ನಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎದುರಿಗೆ ಏಕದಿನ ಪಂದ್ಯ ಆಡಿದ್ದರು. ಅದರ ನಂತರ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ಏಕದಿನ ಪಂದ್ಯ ಆಡಿರಲಿಲ್ಲ.


ಭಾರತದ ತಂಡದ ಶಿಖರ್‌ ಧವನ್‌ ಕ್ಯಾಚ್‌ ಹಿಡಿಯಲು ಯತ್ನಿಸಿದ ರೀತಿ

ಹೋದ ವರ್ಷ ಮೊಹಾಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು. ಆದರೆ ಗಾಯ ಮರು ಕಳಿಸಿದ್ದ ಕಾರಣ ವಿಶ್ರಾಂತಿ ಪಡೆದಿದ್ದರು.  ಐಪಿಎಲ್‌ನಲ್ಲಿ ಅವರು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪರವಾಗಿ ಆಡಿದ್ದರು. ಇಂಗ್ಲೆಂಡ್‌ ಪಿಚ್‌ಗಳಲ್ಲಿ ವೇಗದ ಬೌಲರ್‌ ಗಳ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಅವರು ಅಭ್ಯಾಸ ಪಂದ್ಯದಲ್ಲಿ ತಮ್ಮ ಫಿಟ್‌ ನೆಸ್ ಸಾಬೀತು ಮಾಡಿಬಿಟ್ಟರೆ ಮುಂದೆ ಟೂರ್ನಿಯಲ್ಲಿ ತಂಡದ ಬಲ ಹೆಚ್ಚಲಿದೆ.

ಹೋದ ವರ್ಷ ಭಾರತಕ್ಕೆ ಬಂದಿದ್ದ ನ್ಯೂಜಿಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು.  ನಾಯಕ ವಿರಾಟ್,  ಶಿಖರ್ ಧವನ್, ಅಜಿಂಕ್ಯ ರಹಾನೆ, ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಮಹೇಂದ್ರಸಿಂಗ್ ದೋನಿ  ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಬೌಲಿಂಗ್‌ನಲ್ಲಿ ಕೊನೆಯ ಹಂತದ ಓವರ್‌ಗಳ ಪರಿಣತ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಮತ್ತು ಸ್ಪಿನ್ನರ್  ರವೀಂದ್ರ ಜಡೇಜ ಅವರು  ಶಮಿ ಮತ್ತು ಅಶ್ವಿನ್‌ಗೆ ಉತ್ತಮ ಜೊತೆ ನೀಡುವ ಸಮರ್ಥರು. 

ಕಳೆದ ಬಾರಿ ಭಾರತ ತಂಡ ಪ್ರಶಸ್ತಿ ಗೆಲ್ಲಲು ಶಿಖರ್ ಧವನ್‌ ಅವರ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ ವಾಗಿತ್ತು. ಟೂರ್ನಿಯ ಉತ್ತಮ ಬ್ಯಾಟ್ಸ್‌ ಮನ್ ಪ್ರಶಸ್ತಿ ಗಳಿಸಿದ ಧವನ್‌ ಮೇಲೆ ಈ ಬಾರಿಯೂ ತಂಡಕ್ಕೆ ‘ಶಿಖರ’ದಷ್ಟು ನಿರೀಕ್ಷೆ ಇದೆ.  ಭುಜದ ಶಸ್ತ್ರಚಿಕಿತ್ಸೆಗೆ ಒಳ ಗಾದ ಕಾರಣ ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರ ಹೆಸರು ಆಯ್ಕೆ ಸಮಿತಿಯ ಮುಂದೆ ಬರಲಿಲ್ಲ. ಹೀಗಾಗಿ ಧವನ್‌ ಸುಲಭವಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವರು ಶ್ರಮಿಸಲಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿರುವ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಟಾಮ ಲಥಾಮ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್ ಮತ್ತು ಲೂಕ್ ರಾಂಚಿ ಅವರ ಸವಾಲನ್ನು ಬೌಲರ್‌ಗಳು ಮೀರಿ ನಿಂತರೆ ಗೆಲುವು ಸುಲಭವಾಗುತ್ತದೆ.
*
ತಂಡಗಳು 

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ಯುವರಾಜ್ ಸಿಂಗ್, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ರವೀಂದ್ರ ಜಡೇಜ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್ ಜಸ್‌ಪ್ರೀತ್ ಬೂಮ್ರಾ, ಮುಖ್ಯ ಕೋಚ್: ಅನಿಲ್ ಕುಂಬ್ಳೆ

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಲೂಕ್ ರಾಂಚಿ (ವಿಕೆಟ್‌ಕೀಪರ್), ನೀಲ್ ಬ್ರೂಮ್, ಜಿಮ್ಕಿ ನಿಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೋರಿ ಆ್ಯಂಡರ್ಸನ್,  ಮಿಷೆಲ್ ಸ್ಯಾಂಟನರ್, ಜೀತನ್ ಪಟೇಲ್, ಆ್ಯಡಮ್ ಮಿಲ್ನೆ, ಮಿಷೆಲ್ ಮೆಕ್‌ಲೆಂಗಾನ್, ಟಿಮ್ ಸೌಧಿ, ಟ್ರೆಂಟ್ ಬೌಲ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT