ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಶಿಲ್ಪ, ನೂರು ಚಿತ್ತಾರ!

Last Updated 28 ಮೇ 2017, 6:22 IST
ಅಕ್ಷರ ಗಾತ್ರ

ಮೇಲುಕೋಟೆ :  ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮೇಲುಕೋಟೆ. ಧಾರ್ಮಿಕ ಮಹತ್ವದ ಜೊತೆಗೆ ಹಲವು ರೀತಿಯ ವೈಶಿಷ್ಟ್ಯಗಳಿಂದ ಕ್ಷೇತ್ರ ಗಮನ ಸೆಳೆಯುತ್ತದೆ.
ಚೆಲುವನಾರಾಯಣ ಸ್ವಾಮಿ ದೇಗುಲದಲ್ಲಿ ವಿಶೇಷಗಳಿಗೆ ಕೊರತೆ ಇಲ್ಲ. ಭಕ್ತರು ದೇವರ ದರ್ಶನಕ್ಕೆ ಮಹತ್ವ ಕೊಡುವ ಕಾರಣ ಈ ವಿಶೇಷ ಆಕರ್ಷಣೆಗಳ ಅರಿವಿಲ್ಲ.

ಇಲ್ಲಿರುವ ಮೂರು ಶಿಲ್ಪಕಲಾಕೃತಿ ಗಳು ನೋಡುಗರನ್ನು ವಿಸ್ಮಯ ಗೊಳಿ ಸುತ್ತವೆ. ಚೆಲುವನಾರಾಯಣಸ್ವಾಮಿ ದೇಗುಲದ ಅಮ್ಮನವರ ಸನ್ನಿಧಿಯ ಮುಂಭಾಗ ‘ಒಂದು ದೇಹ ಎರಡು ಜೀವಿಗಳ ಚಿತ್ರಣ’ ಬಹಳ ಅಪರೂಪವಾ ದುದು. ಒಂದೇ ದೇಹದಲ್ಲಿ ಹಸುವಿನ ವಿವಿಧ ಭಂಗಿ ಶಿಲ್ಪಿಯ ಕೈಚಳಕ ಎನ್ನಬಹುದು.

ಕೈಸಾಲೆಯ ಮೆಟ್ಟಿಲಿನ ಎರಡನೇ  ಕಂಬದಲ್ಲಿರುವ ಎರಡು ದೇಹ ಒಂದೇ ಶಿರವಿರುವ ಆಕರ್ಷಕ  ಶಿಲ್ಪ ಇಲ್ಲಿಯ ಮತ್ತೊಂದು ಮನಮೋಹಕ ರೂಪಕ. ಮೊದಲನೋಟಕ್ಕೆ ಇಲ್ಲಿರುವ ಜೀವಿಗಳನ್ನು ಗುರುತಿಸಲು ಸಾಧ್ಯವಾಗದಿ ದ್ದರೂ ಪರಿಶೀಲಿಸಿ ನೋಡಿದಾಗ ಶಿಲ್ಪಿಯ ಬುದ್ಧಿವಂತಿಕೆ ಮತ್ತು ಕರಚಾತುರ್ಯ ನೋಡುಗರನ್ನು ನಿಬ್ಬೆರಗಾಗಿಸುತ್ತದೆ.

ಒಂದೇ ಶಿರದಲ್ಲಿ ಆನೆ ತಲೆ ಬಗ್ಗಿಸಿ ನಿಂತಿರುವ ಹಾಗೆ ಮತ್ತು ಬಸವ ತಲೆ ಮೇಲೆತ್ತಿದ ಭಂಗಿ ಕಾಣಸಿಗುತ್ತದೆ. ಈ ಶಿಲ್ಪದ ವಿಶೇಷತೆಯನ್ನು ನೋಡಬೇಕಾ ದರೆ ನಾವು ಶಿಲ್ಪದ ಒಂದು ಬದಿ ಮುಚ್ಚಿ ಕಲಾನೈಪುಣ್ಯತೆ ಆಸ್ವಾದಿಸಬೇಕಾಗುತ್ತದೆ.

ಆರಂಭ ಅಂತ್ಯವಿಲ್ಲದ ಚಿತ್ತಾರ: ಇದೇ ಕಂಬದಲ್ಲಿ ಕೆಳಭಾಗದಲ್ಲಿ ಆಕರ್ಷಕ ನುಲಿಗೆಯ ಕಲ್ಲಿನ ಚಿತ್ತಾರ ಬಿಡಿಸಲಾ ಗಿದೆ. ಈ ಚಿತ್ತಾರವನ್ನು ಎಲ್ಲಿಂದ ಆರಂಭಿ ಸಲಾಗಿದೆ ಮತ್ತು ಎಲ್ಲಿ ಕೊನೆಗೊ ಳಿಸಲಾಗಿದೆ ಎಂಬುದು ನಿಗೂಢ. ಯಾವುದೇ ಕಾರಣಕ್ಕೂ ಇದರ ಜಾಡು ಕಂಡುಹಿಡಿಯಲು ಸಾಧ್ಯವಿಲ್ಲ. ಅತ್ಯಂತ ಕಲಾತ್ಮಕವಾಗಿ ಹಾಗೂ ಆಕರ್ಷಕವಾಗಿ ಇಲ್ಲಿ ಈ ಚಿತ್ತಾರ  ಪಡಿಮೂಡಿಸಲಾಗಿದೆ.

ಈ ಚಿತ್ತಾರದಲ್ಲಿ ಆರಂಭ ಮತ್ತು ಅಂತ್ಯ ಕಂಡುಹಿಡಿ ದವರು ಎದುರಿಗೆ ಖಾಲಿ ಬಿಟ್ಟ ಅಂಕಣದಲ್ಲಿ ಸಾರ್ವಜನಿಕ ವಾಗಿ ಚಿತ್ತಾರ ಬಿಡಿಸಬಹುದು ಎಂಬ ಆಹ್ವಾನವನ್ನು ಶಿಲ್ಪಿ ನೀಡಿದ್ದಾನೆ ಎಂದು ಹಿರಿಯರು ವಿವರಿಸುತ್ತಾರೆ. ಆದರೆ, ದೇಗುಲ ಸಂರಕ್ಷಿತ ಸ್ಮಾರಕವಾದ ಕಾರಣ ಯಾರೂ ಖಾಲಿ ಜಾಗದಲ್ಲಿ  ಚಿತ್ತಾರ ಬಿಡಿಸಲು ಅವಕಾಶವಿಲ್ಲ, ಆದರೆ ನುಲಿಗೆಯ ಶೈಲಿಯ ಚಿತ್ತಾರದ ವಿಶೇಷತೆ ಮಾತ್ರ ನಮ್ಮನ್ನು ಬೆರಗುಗೊಳಿಸುತ್ತದೆ.

ಒಂದು ದೇಹ ಮೂರು ಭಂಗಿ: ಮತ್ತೊಂದು ವಿಶೇಷಶಿಲ್ಪ ಚೆಲುವನಾರಾ ಯಣನ ವಾಹನೋತ್ಸವದ ಮಂಟಪದ ಲ್ಲಿದೆ. ಒಂದೇ ದೇಹದಲ್ಲಿ ಹಸುವಿನ  ಮೂರು ಭಂಗಿಯ ಚಿತ್ರಣ ಒಂದೇ ವಿಗ್ರಹದಲ್ಲಿ ಮೂಡಿದ್ದು ಮನಸೂರೆಗೊ ಳ್ಳುತ್ತದೆ. ಇಲ್ಲಿ ಹಸು ಕತ್ತೆತ್ತಿ ನಿಂತಿರು ವುದು, ಹುಲ್ಲು ಮೇಯುತ್ತಿರುವುದು ಹಾಗೂ ಹಾಲು ಕುಡಿಯುತ್ತಿರುವ ಕರು ಮುದ್ದಿಸುವ ಶೈಲಿ ಆಕರ್ಷಕವಾಗಿದೆ.

ಹಸುವಿನ ಮೂರು ಭಂಗಿಗೆ ಒಂದೇ ದೇಹ ಹೊಂದಿಕೊಳ್ಳುವಂತೆ ಕಲಾ ಚಾತುರ್ಯದೊಂದಿಗೆ ಕೃತಿಗಿಳಿಸಲಾ ಗಿದೆ. ಒಟ್ಟಾರೆ ಈ ಮೂರೂ ಶಿಲ್ಪಗಳ ವಿಶೇಷತೆ ಪ್ರವಾಸಿಗರಿಗೆ ಮುದನೀಡು ವುದಂತೂ ಸತ್ಯ. ನೀವು ಮೇಲು ಕೋಟೆಗೆ ಬಂದಾಗ ಈ ಶಿಲ್ಪಗಳನ್ನು ಗಮನವಿಟ್ಟು ವೀಕ್ಷಿಸಿದರೆ ಶಿಲ್ಪಿಯ ಕೈಚಳಕ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT