ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಪರಿಶ್ರಮದಿಂದ ಫಲ ನಿಶ್ಚಿತ

Last Updated 28 ಮೇ 2017, 6:31 IST
ಅಕ್ಷರ ಗಾತ್ರ

ನಾಪೋಕ್ಲು: ಕಠಿಣ ಪರಿಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಫಲ ಸಾಧ್ಯ ಎಂದು ನಿವೃತ್ತ ಕರ್ನಲ್, ವಿಶಿಷ್ಠ ಸೇವಾ ಪ್ರಶಸ್ತಿ ವೀಜೆತ ಕಂಡ್ರತಂಡ ಸುಬ್ಬಯ್ಯ ಹೇಳಿದರು.
ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟ ಮತ್ತು ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸೈನಿಕರ ತರಬೇತಿ  ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

1784 ರಲ್ಲಿ ಕೂರ್ಗ್‌ ರೆಜಿಮೆಂಟ್ ಸ್ಥಾಪನೆ ಗೊಂಡಾಗ ಶೇ 90ರಷ್ಟು ಕೊಡಗಿನ ಸೈನಿಕರು ಇರುತ್ತಿದ್ದರು. ಈಗ ಬೆರಳೆಣಿಕೆಯಷ್ಟು ಕೊಡಗಿನವರು ಇದ್ದಾರೆ ಎಂದರು.
ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ  ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕ್ಲಬ್ ಕಳೆದ ವರ್ಷ ಏರ್ಪಡಿಸಿದ್ದ ಕೋಚಿಂಗ್ ಕ್ಯಾಂಪ್‌ನಲ್ಲಿ 15 ಮಕ್ಕಳು ಭಾಗವಹಿಸಿ 4 ಮಕ್ಕಳು ಆಯ್ಕೆಯಾಗಿದ್ದಾರೆ ಎಂದರು.

ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟೀರ ಬಿ, ಮಾಚಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೇಯಂಡ ಶಂಭು, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಮಾರ್ಚಂಡ ಗಣೇಶ್, ಮಾತನಾಡಿದರು.

ಕಲಿಯಂಡ ಹ್ಯಾರಿ ಮಂದಣ್ಣ, ಕೊಂಡೀರ ಗಣೇಶ್, ಕಲ್ಯಾಟಂಡ ರಮೇಶ್, ಮತ್ತು ತರಬೇತುದಾರರಾದ ಅರೆಯಡ ನಕುಲ ಪೊನ್ನಪ್ಪ, ಕೇಟೋಳಿರ ಡಾಲಿ ಅಪ್ಪಚ್ಚ, ಕಂಗಾಂಡ ಮಿಟ್ಟು ಪೂವಯ್ಯ, 27ನೇ ಕೂರ್ಗ್‌ ರೆಜಿಮೆಂಟ್‌ನ ಚೋಕಿರ ಮಹೇಶ್ (ಮಧು) ಮತ್ತು ಕುದುಪಜೆ ಸನತ್ ಕುಮಾರ್ ಇದ್ದರು. ಕಲ್ಯಾಟಂಡ ರಮೇಶ್ ಚಂಗಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT