ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಠಾರವೆಂಬುದು ಬೆಸುಗೆಯ ತಾಣ

Last Updated 28 ಮೇ 2017, 11:01 IST
ಅಕ್ಷರ ಗಾತ್ರ

ಒಂದು ಶತಮಾನದಿಂದ ಆ ಹಳೇ ಜಂತೆ ಮನೆಯಲ್ಲಿ ಎರಡು ಕುಟುಂಬಗಳ ಮೂರು ತಲೆಮಾರಿನ ಸದಸ್ಯರು ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ ಜೀವನ ಸಾಗಿಸುತ್ತಿದ್ದಾರೆ. ಒಮ್ಮೆಲೇ ಹತ್ತು ಮಂದಿ ನಿಲ್ಲಲೂ ಆಗದ ಪುಟ್ಟ ವಠಾರ ಈ ಕುಟುಂಬಗಳನ್ನು ಬೆಸೆ ದಿದೆ ಎಂಬುದೇ ವಿಶೇಷ.

ಈ ಸನ್ನಿವೇಶ ನೋಡಲು ಬಳ್ಳಾರಿ ನಗರದ ಐದನೇ ವಾರ್ಡಿನಲ್ಲಿರುವ ಗುಗ್ಗ ರಹಟ್ಟಿ ಪ್ರದೇಶಕ್ಕೆ ಬರಬೇಕು. ಎಪ್ಪತ್ತರ ದಶಕದಲ್ಲೇ ನಿಧನರಾಗಿರುವ ಮೂಲೆ ಮನೆ ಎಲೆಕ್ಟ್ರಿಕ್‌ ನಾಗಪ್ಪ ಮತ್ತು ಎಮ್ಮೆ ಗೊಡ್ಲು ರಂಗಪ್ಪ ಅವರ ಕುಟುಂಬಗಳ ನಡುವೆ ರಕ್ತಸಂಬಂಧಿಗಳಿಗಿಂತಲೂ ಹೆಚ್ಚು ಬಾಂಧವ್ಯ ಏರ್ಪಟ್ಟಿದೆ. ಸುತ್ತಲಿನ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಎರಡೂ ಕುಟುಂಬಗಳು ಗೊಲ್ಲರ ಭಿನ್ನ ಸಮುದಾಯಕ್ಕೆ ಸೇರಿದವು.

ನಿವೇಶನಗಳ ಮಾಲೀಕರು ಮನೆ ಕಟ್ಟುವಾಗ ಪ್ರತ್ಯೇಕ ಕಾಂಪೌಂಡ್‌ ಹಾಕು ವುದು ಸಾಮಾನ್ಯ. ಆದರೆ ಅಂದು ಮನೆ ಕಟ್ಟುವ ಸಂದರ್ಭದಲ್ಲಿ ಇಂಥ ಕೃತಕ ಗೋಡೆಗಳ ಬದಲಿಗೆ ಅಂಟುಗೋಡೆ ಕಟ್ಟಿ ಇಬ್ಬರೂ ಮನೆ ನಿರ್ಮಿಸಿದ್ದರು. ಸೂರು ಕೂಡ ಒಂದೇ ಆಗಿತ್ತು. ಹೀಗಾಗಿ, ಮನೆ, ಬಾಗಿಲು ಎರಡಿದ್ದರೂ, ವಠಾರ ಒಂದೇ ಆಗಿತ್ತು.

ಪಶ್ಚಿಮಕ್ಕೊಂದು, ಉತ್ತರಕ್ಕೊಂದು ಬಾಗಿಲಿರುವ ಎರಡೂ ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ, ಈ ವಠಾರ ಅದಕ್ಕೆ ಸಾಕ್ಷಿಯಾಗುತ್ತದೆ. ಎರಡೂ ಮನೆ ಮಂದಿ ಸಂಭ್ರಮದಲ್ಲಿ ಪಾಲ್ಗೊಳ್ಳು ತ್ತಾರೆ. ಅಲ್ಲದೆ, ಕಷ್ಟ–ನಷ್ಟಗಳ ಸಮಯ ದಲ್ಲೂ ಸಾಂತ್ವನದ ತೊರೆ ಅಲ್ಲಿಂದಿಲ್ಲಿಗೆ ಹರಿದಾಡುತ್ತದೆ.

ನಾಗಪ್ಪನವರ ಇಬ್ಬರು ಪತ್ನಿಯರ ಮಕ್ಕಳು, ಮೊಮ್ಮಕ್ಕಳು ಇದೇ ಮನೆ ಯಲ್ಲಿ ಹುಟ್ಟಿ ಬೆಳೆದಿದ್ದಾರೆ. ರಂಗಪ್ಪ ನವರ ಕುಟುಂಬದ್ದೂ ಇದೇ ರೀತಿ. ‘ನಾನು ಈ ಮನೆಗೆ ಸೊಸೆಯಾಗಿ ಬಂದು ಐವತ್ತು ವರ್ಷ ಆಯಿತು. ಆಗಿನಿಂದ ನಾವು ಒಂದೇ ಕುಟುಂಬದವರಂತೆ ಇದ್ದೇವೆ. ಸಣ್ಣ ಪುಟ್ಟ ಮನಸ್ತಾಪಗಳು ಇರುತ್ತವೆ. ಅವೆಲ್ಲ ಆಕ್ಷಣಕ್ಕೆ ಅಷ್ಟೇ. ಈಗಿನ ಕಾಲದಲ್ಲಿ ಹೀಗೆ ಯಾರು ಸಹನೆ ಯಿಂದ ಇರುತ್ತಾರೆ?’ ಎಂದು ಕೇಳುತ್ತಾರೆ ನಾಗಪ್ಪನವರ ಸೊಸೆಯಂದಿರಾದ ಕಾಳಮ್ಮ ಮತ್ತು ಲಕ್ಷ್ಮಮ್ಮ.

ಕಾಳಮ್ಮನವರ ದೊಡ್ಡ ಮಗ ಜಿ.ಕಾಳಪ್ಪ–ಗಂಗಮ್ಮ ದಂಪತಿ, ಅವರ ಐವರು ಮಕ್ಕಳು, 2ನೇ ಮಗ ನಾಗಪ್ಪ–ವಿರೂಪಮ್ಮ ದಂಪತಿ, ಇಬ್ಬರು ಮಕ್ಕಳು, 3ನೇ ಮಗ ಜಿ.ಉಮಾಪತಿ–ಸುಜಾತಾ, ಅವರ ಮಗ ಸೇರಿ 14 ಜನ ಅವಿಭಕ್ತ ಕುಟುಂಬದಲ್ಲೇ ಮುಂದುವರಿದಿದ್ದಾರೆ.

ರಂಗಪ್ಪ ಅವರ ಮಗ ವೆಂಕಟ ರಮಣ–ಬಾಲಮ್ಮ ದಂಪತಿ ಹಾಗೂ ಅವರ ಏಳು ಪುತ್ರಿಯರು, ಇಬ್ಬರು ಪುತ್ರರ ಏಳ್ಗೆಯೂ ಇದೇ ಮನೆ– ವಠಾರ ದಲ್ಲೇ ನಡೆದಿದೆ. ಈಗ  ವೆಂಕಟರಮಣ ಅವರ ಮಗ ಯರ್ರಿಸ್ವಾಮಿ–ನಾಗರತ್ನ ದಂಪತಿ ಮತ್ತು ಇಬ್ಬರು ಮಕ್ಕಳು ವಾಸವಿದ್ದಾರೆ.

ಈ ಎರಡೂ ಕುಟುಂಬಗಳಿಗೆ ವಠಾರ ಗಟ್ಟಿ ಬೆಸುಗೆಯಾಗಿದೆ.ದಿನವೂ ಒಂದು ಮನೆಯವರು ವಠಾರ ಸಾರಿಸಿದರೆ, ಮತ್ತೊಂದು ಮನೆ ಯವರು ರಂಗೋಲಿ ಹಾಕುತ್ತಾರೆ, ವಠಾ ರವು ಕುಟುಂಬಗಳನ್ನು ಬೆಸೆದು, ಪೊರೆ ಯುತ್ತಿರುವ ರೀತಿಯಲ್ಲೇ ವಠಾರವನ್ನು ಕುಟುಂಬಗಳ ಸದಸ್ಯರೂ ಜತನದಿಂದ ಕಾಪಾಡಿಕೊಂಡಿದ್ದಾರೆ. ‘ಎರಡೂ ಮನೆಗಳ ಯಜಮಾನ್ರು ಅಣ್ಣ ತಮ್ಮಂದಿರಂಗೆ ಇದ್ರು. ಇದು ಮನೆ ಮಂದಿಗೂ ಮಾದರಿಯಾಯಿತು.

ನಮ್ಮ ಸಾಧನೆ ಏನಿಲ್ಲ’ ಎಂದು ಕಾಳಮ್ಮ ಅವರ ಮಗ ಜಿ.ಉಮಾಪತಿ ಅಭಿಪ್ರಾಯ.‘ಈ ಎರಡೂ ಕುಟುಂಬಗಳ ಸಾಮ ರಸ್ಯ ಹಲವು ವರ್ಷಗಳಿಂದ ನಮ್ಮಲ್ಲಿ ಅಚ್ಚರಿ ಮೂಡಿಸಿದೆ. ಒಮ್ಮೆಯೂ ಜೋರು ಜಗಳ ಮಾಡದೇ, ಅನುಸರಣೆಯೇ ಪ್ರಧಾನ ಗುಣವಾದ ಈ ಮಂದಿಯ ವ್ಯಕ್ತಿತ್ವದಿಂದ ನಾವಂತೂ ಮೋಡಿಗೆ ಒಳ ಗಾಗಿದ್ದೇವೆ’ ಎಂದು ಸ್ಥಳೀಯ ನಿವಾಸಿ ರಮೇಶ್‌ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಳ್ಳಾರಿಯ ವಠಾರವೊಂದು ಹೀಗೆ ಸದ್ದಿಲ್ಲದೆ ಕೌಟುಂಬಿಕ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT