ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಭಯೋತ್ಪಾದಕರಿಗೆ ಪತ್ರ ಬರೆಯಿರಿ!

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಭಯೋತ್ಪಾದಕರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಪತ್ರ ಬರೆಯಿರಿ ಎಂದು ಬ್ರಿಟನ್‌ನಲ್ಲಿ ಪ್ರಕಟವಾದ ಹೊಸ ಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ತಿಳಿಸಲಾಗಿದೆ.

ಭಯೋತ್ಪಾದನೆ ಕುರಿತು ಚರ್ಚಿಸುವ ಪುಸ್ತಕವು, ಮ್ಯಾಂಚೆಸ್ಟರ್‌ ದಾಳಿಗಿಂತ ಮುಂಚೆ ಪ್ರಕಟಗೊಂಡಿದೆ. ಅಮಾಯಕ ನಾಗರಿಕರನ್ನು ಹತ್ಯೆ ಮಾಡುವುದು ಒಂದು ರೀತಿ ಯುದ್ಧ ಎಂದು ಅದು ಹೇಳಿದೆ.

ಸಮಾಜ ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂಬ ಭಾವನೆಯಿಂದ ಭಯೋತ್ಪಾದಕರು ಸಾಮೂಹಿಕ ಹತ್ಯೆ ಮಾಡುತ್ತಾರೆ ಎಂದು ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ಹೇಳುತ್ತದೆ ಎಂದು ‘ಡೈಲಿ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದೆ.

ಪುಸ್ತಕದಲ್ಲಿ 7 ವರ್ಷದಿಂದ 11 ವರ್ಷದವರೆಗಿನ ಮಕ್ಕಳಿಗೆ ಶಿಫಾರಸು ಮಾಡಿರುವ ಚಟುವಟಿಕೆಯಲ್ಲಿ, ಶಿಕ್ಷಕರು ಪತ್ರ ಬರೆಯಲು ಮಕ್ಕಳಿಗೆ  ಕೇಳಿಕೊಳ್ಳಬೇಕು ಎಂದು ಹೇಳಲಾಗಿದೆ.

‘ಯಾವ ಆರು ಪ್ರಶ್ನೆಗಳನ್ನು ಮಕ್ಕಳು ಭಯೋತ್ಪಾದಕರಿಗೆ ಕೇಳಬಹುದು’ ಎಂದು ಅದರಲ್ಲಿ ತಿಳಿಸಲಾಗಿದೆ.

ಪುಸ್ತಕವನ್ನು ಬ್ರಿಲಿಯಂಟ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಮಕ್ಕಳ ಮೇಲಿನ ಹಿಂಸಾಚಾರ ತಡೆಗಾಗಿ ಕೆಲಸ ಮಾಡುತ್ತಿರುವ ನ್ಯಾಷನಲ್‌ ಸೊಸೈಟಿ ಚಾರಿಟಿ ಮುಖ್ಯಸ್ಥ ಪೀಟರ್‌ ವಾನ್‌ಲೆಸ್‌ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಪುಸ್ತಕದಲ್ಲಿ ಪ್ರಕಟವಾಗಿರುವ ಈ ಸಲಹೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಇದರಿಂದ ಭಯೋತ್ಪಾದಕರ ಬಗ್ಗೆ ಅನುಕಂಪ ತೋರಿಸಿದಂತಾಗುತ್ತದೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಾಥಮಿಕ ಶಾಲಾ ತರಗತಿಯು ಭಯೋತ್ಪಾದನೆಯನ್ನು ಮಾನವೀಯಗೊಳಿಸುವ ಜಾಗವಲ್ಲ. ಪತ್ರ ಬರೆಯುವ ಈ ಚಟುವಟಿಕೆಯು ಮಕ್ಕಳಲ್ಲಿ ಗೊಂದಲ ಉಂಟುಮಾಡಲಿದೆ’ ಎಂದು ರಿಯಲ್‌ ಎಜುಕೇಷನ್‌ ಅಭಿಯಾನದ ಮುಖ್ಯಸ್ಥ  ಕ್ರಿಸ್‌ ಮೆಕ್‌ಗವರ್ನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT