ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ಶಿಕ್ಷಣದ ‘ಬಚ್‌ಪನ್‌’

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ನಾಲ್ಕು ಕೋಟಿಗೂ ಅಧಿಕ ಮಕ್ಕಳು ಬಡತನದಲ್ಲಿದ್ದಾರೆ. ಅದರಲ್ಲೂ ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಆರೋಗ್ಯ, ಶಿಕ್ಷಣ ಹಾಗೂ ಪೌಷ್ಟಿಕಾಂಶಗಳ ಕೊರತೆಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ, ಎನ್‌ಜಿಓ ಹಾಗೂ ಕೆಲವು ಸಂಘಟನೆಗಳು ಈ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿವೆ.

ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಬಚ್‌ಪನ್‌. ಸುಮಾರು ದಶಕಗಳಿಂದ ದೇಶದಾದ್ಯಂತ ಮಕ್ಕಳ ರಕ್ಷಣೆ ಹಾಗೂ ಶಿಕ್ಷಣದ ಬಗ್ಗೆ ಈ ಸಂಸ್ಥೆ ಗಮನ ಹರಿಸುತ್ತಿದೆ. ಐದು ವರ್ಷದ ಕೆಳಗಿನ ಮಕ್ಕಳಿಗಾಗಿ ಸುಮಾರು 1000ಕ್ಕೂ ಅಧಿಕ  ಪ್ಲೇ ಸ್ಕೂಲ್‌ಗಳು ಬಚ್‌ಪನ್ ಬ್ಯಾನರ್‌ನಡಿ ಕೆಲಸ ನಿರ್ವಹಿಸುತ್ತಿವೆ. ಶೇ. 60ರಷ್ಟು ಶಾಲೆಗಳು ಗ್ರಾಮೀಣ ಹಾಗೂ ಉಪನಗರಗಳಲ್ಲಿ ಕೆಲಸ ನಿರ್ವಹಿಸುತ್ತಿವೆ.

‘ಶಿಕ್ಷಣದ ಅಡಿಪಾಯ ಬಾಲ್ಯಶಿಕ್ಷಣ. ಬಾಲ್ಯದಲ್ಲೇ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಬಚ್‌ಪನ್‌ ಕಾರ್ಯನಿರ್ವಹಿಸುತ್ತಿದೆ’ ಎಂದು ಎಸ್‌.ಕೆ. ಎಜುಕೇಷನ್‌ನ ಕಾರ್ಯ ನಿರ್ವಹಣಾಧಿಕಾರಿ ಅಜೆಯ್ ಗುಪ್ತಾ ತಿಳಿಸಿದ್ದಾರೆ.

‘ನಾವು ಮಕ್ಕಳ ಭವಿಷ್ಯವನ್ನು ಚಿಕ್ಕನಿಂದಲೇ ಉಜ್ವಲಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಬಾಲ್ಯದಿಂದಲೇ ಉತ್ತಮ ಕಲಿಕಾಕಾರರು, ಉತ್ತಮ ನಿರ್ಧಾರ ಕೈಗೊಳ್ಳುವವರು ಹಾಗೂ ಉತ್ತಮ ಸಂವಹನಾಕಾರರು ಆಗಬೇಕೆಂಬ ನಿಟ್ಟಿನಲ್ಲಿ ನಾವು ಶಿಕ್ಷಣ ನೀಡುತ್ತೇವೆ’ ಎಂದು ಎಸ್‌.ಕೆ. ಎಜುಕೇಷನ್‌ನ ಅಧ್ಯಕ್ಷ ಎಸ್‌.ಕೆ. ಗುಪ್ತಾ ತಿಳಿಸಿದರು. ಬಚ್‌ಪನ್‌ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣಕ್ಕೆ ಸಮನಾದ ಶಿಕ್ಷಣವನ್ನು ನೀಡುತ್ತಿದೆ. 

ಸ್ಮಾರ್ಟ್‌ಕ್ಲಾಸ್ ಎಜುಕೇಷನ್‌, ಮಾತನಾಡುವ ಪುಸಕ್ತಗಳು, ಮಾಂಟೆಸ್ಸರಿ, ತರಗತಿ ಪರಿಕಲ್ಪನೆಯ ಜೊತೆಗೆ ನುರಿತ ಶಿಕ್ಷಕರನ್ನು ಹೊಂದಿದೆ.  ಇಲ್ಲಿ ಶಾಲಾ ಶುಲ್ಕವೂ ಕೂಡ ಕೈಗಟುವ ದರದಲ್ಲಿ ಇರುವುದರಿಂದ ಕೆಳ ಹಾಗೂ ಮಧ್ಯಮವರ್ಗದ ಮಕ್ಕಳು ಕೂಡ ಇದರ ಪ್ರಯೋಜನವನ್ನು ಪಡೆಯಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT