ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆ ಸೊಪ್ಪಿನಿಂದ ಬಣ್ಣ ತಿಳಿಯಾಗುತ್ತದೆ!

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣ ಅಂಶವಿರುವುದರಿಂದ ಇದು ಚರ್ಮದ ಆರೈಕೆಯನ್ನು ಮಾಡಿ, ಜೀವಕೋಶಕ್ಕೆ ಪೋಷಕಾಂಶಗಳನ್ನು ನೀಡುತ್ತದೆ.

*ಪ್ರತಿದಿನ ಮಲಗುವ ಮುನ್ನ ನುಗ್ಗೆ ಸೊಪ್ಪಿನ ರಸದೊಂದಿಗೆ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ.

*ನುಗ್ಗೆ ಸೊಪ್ಪಿನ ರಸ ಲೋಳೆಸರ  (ಅಲೋವೆರಾ) ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಹಚ್ಚಿ ಇದು ಚರ್ಮದಲ್ಲಿನ ನರಿಗೆ ಕಡಿಮೆ ಮಾಡುತ್ತದೆ.
*ಸೌತೆಕಾಯಿ ರಸದೊಂದಿಗೆ ನುಗ್ಗೆಸೊಪ್ಪಿನ ರಸ ಮಿಶ್ರಣ ಮಾಡಿ ಹಚ್ಚಿದರೆ ಕಲೆಗಳು ನಿವಾರಣೆಯಾಗುತ್ತವೆ.

*ನುಗ್ಗೆ ಸೊಪ್ಪಿನ ರಸದೊಂದಿಗೆ ಕ್ಯಾರೆಟ್ ರಸ ಸೇರಿಸಿ ಹಚ್ಚಿದರೆ ಬಿಸಿಲಿನಿಂದ ಕಪ್ಪಾದ ಚರ್ಮ ತಿಳಿಯಾಗುತ್ತದೆ.

*ಒಂದು ಚಮಚ ನುಗ್ಗೆ ಸೊಪ್ಪಿನ ರಸ, ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟಿನ ಪುಡಿ ಮಿಶ್ರಣ ಮಾಡಿ ಒರಟಾದ ಚರ್ಮವನ್ನು ಸ್ಕ್ರಬ್ ಮಾಡಿದರೆ ಚರ್ಮ ನುಣುಪಾಗುತ್ತದೆ.

*ಪ್ರತಿದಿನ ಮಲಗುವ ಮುನ್ನ  ಮುಖಕ್ಕೆ ನುಗ್ಗೆ ಸೊಪ್ಪಿನ ರಸ, ಗುಲಾಬಿ ಜಲವನ್ನು ಮುಖಕ್ಕೆ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT