ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂ ಶೋಕಿ

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಹೆಡೆ ಎತ್ತಿದ ಹಾವು: ಹಾವು ಎಂದರೆ ಬೆಚ್ಚಿ ಬೀಳುವವರು ಈ ಬೂಟ್‌ ಧರಿಸಿ ನೋಡಿ. ಒಂದು ಅಡಿ ಹೆಡೆ ಎತ್ತಿ ಬುಸುಗುಡುತ್ತಾ ಇರುವಂತೆ ಕಾಣುವ ಈ ಬೂಟ್‌ನ್ನು ಕಪ್ಪು ಲೆದರ್‌ನಿಂದ ಮಾಡಲಾಗಿದೆ. ಮಂಡಿವರೆಗೂ ಇರುವ ಈ ಬೂಟ್‌ಗಳು ಮಳೆಕಾಲಕ್ಕೆ ಸೂಕ್ತವಾಗಿದೆ. ಆದರೆ ಹಾಕಿಕೊಂಡು ಓಡಾಲು ಧೈರ್ಯ ಬೇಕಷ್ಟೆ.

*


ಮೀನಿನ ಚಪ್ಪಲಿ: ಪಾದಗಳು ಚಪ್ಪಲಿ ಬದಲು ಮೀನಿನ ಬಾಯಿಯೊಳಗೆ ಹೋಗಿ ಬಿಟ್ಟಿದ್ದಾವೇನೊ ಎನ್ನುವಂತೆ ಇರುತ್ತದೆ ಈ ಚಪ್ಪಲಿ. ನಿಜವಾದ ಬಂಗುಡೆ ಮೀನನ್ನು ಒಣಗಿಸಿ, ಅದಕ್ಕೊಂದು ಬೆಲ್ಟ್‌ ಹಾಕಿಕೊಂಡು ಚಪ್ಪಲಿ ಮಾಡಿಕೊಂಡಂತೆ ಇರುತ್ತದೆ.

ಈ ಮೀನಿನ ಚಪ್ಪಲಿಗೆ ಫ್ಯಾಷನ್ ಸ್ಪರ್ಶವೂ ಸಿಕ್ಕಿದೆ.  ಹೀಲ್ಸ್‌ ಕೂಡ ಇದ್ದೂ, ಈಜಿಪ್ಟ್‌ನ ರಾಣಿಯ ಸಿಂಹಾಸನದಲ್ಲಿ ಇರುವ ಉಬ್ಬು ಶಿಲ್ಪದಂತೆ ಆ್ಯಂಟಿಕ್‌ ವಿನ್ಯಾಸದಿಂದ ಕಂಗೊಳಿಸುವ ಈ ಮೀನಿನ ಚಪ್ಪಲಿ ಚರ್ಮದ್ದು.

*


ಕುದುರೆ ಶೂ ಮೋಡಿ: ಕುದುರೆ ನಡೆಯೋದೇ ಚಂದ, ಅದಕ್ಕೊಂದು ಲಯ ಇರುತ್ತದೆ. ಇದನ್ನು ಗಮನಿಸಿ ಕುದುರೆ ಕಾಲಿನಂಥ ಶೂ ತಯಾರಿಸಿದ್ದಾರೆ.

ಬಿಳಿ ಬಣ್ಣದ ಈ ಶೂ ಹಿಮಾಚಲ ಪ್ರದೇಶದಲ್ಲಿ ಕಾಣುವ ಯಾಕ್‌ ಪ್ರಾಣಿಗಳ ಕಾಲುಗಳಂತೆ ಕೆಲವೊಮ್ಮೆ ಕಾಣುತ್ತದೆ. ಇದಕ್ಕೆ ತಿಳಿ ಚಿನ್ನದ ಬಣ್ಣದ ಗನ್‌ ವಿನ್ಯಾಸವನ್ನು ಹೀಲ್ಸ್‌ ಮಾದರಿಯಲ್ಲಿ ಹಾಕಲಾಗಿದೆ. ಇದನ್ನು ನಿತ್ಯ ಧರಿಸಲಾಗದಿದ್ದರೂ ಪಾರ್ಟಿಗಳಿಗೆ ವಿಶೇಷವಾಗಿರುತ್ತದೆ.

*


ಕೋಳಿ ಕಾಲಿನಂತಹ ಹೀಲ್ಡ್ಸ್‌: ಸಣ್ಣಗಿರುವವರಿಗೆ ಕೋಳಿ ಕಾಲು ಎಂದು ರೇಗಿಸುತ್ತಾರೆ. ಆದರೆ ಈಗ ಇದೇ ಫ್ಯಾಷನ್. ಸ್ಯಾಂಡಲ್‌ ಹೀಲ್ಸ್‌ಗೆ ಕೋಳಿ ಕಾಲುಗಳ ಆಕಾರ ನೀಡಲಾಗುತ್ತಿದೆ.

ಕೆಂಪನೆಯ ಶೂಗೆ ಹಳದಿ ಬಣ್ಣದ ಕೋಳಿಕಾಲಿನ ಹೀಲ್ಸ್‌ ವಿಚಿತ್ರವಾಗಿ ಕಂಡರೂ ವಿಭಿನ್ನವಾಗಿದೆ. ಪಾರ್ಟಿ, ವಿಶೇಷ ಕಾರ್ಯಕ್ರಮಗಳಿಗೆ ಧರಿಸಿದರೆ ಈ ಕೋಳಿ ಕಾಲಿನ ಹೀಲ್ಸ್‌ ಎಲ್ಲರ ಗಮನ ಸೆಳೆಯುವುದಂತೂ ಖಚಿತ.

*


ಇಲಿಯ ಚಪ್ಪಲಿ!: ನೆಲದಲ್ಲಿ ಇಲಿಗಳು ಓಡಾಡಿದರೆ ಸಾಕು ಅವುಗಳಿಂದ ತಪ್ಪಿಸಿಕೊಂಡು ಓಡಿ ಹೋಗುತ್ತೇವೆ. ಇಂಥ ಇಲಿಗಳು ನಮ್ಮ ಚಪ್ಪಲಿಗಳಾದರೆ?

ಇಲಿಯ ಹೊಟ್ಟೆಯನ್ನು ಸೀಳಿ ಚಪ್ಪಲಿಯಾಗಿ ಧರಿಸಿದಂತೆ ಕಾಣುತ್ತವೆ ಈ ಶೂಗಳು. ಮುಂದೆ ಪುಟ್ಟ ಪುಟ್ಟ ಕಣ್ಣುಗಳು, ಗುಲಾಬಿ ಬಣ್ಣದ ಅದರ ಮೂತಿ ನೋಡಲು ಮುದ್ದಾಗೇ ಕಾಣುತ್ತದೆ. ಇದು ಮನೆಯಲ್ಲಿ ಧರಿಸಬಹುದಾದ ಚಪ್ಪಲಿ. ಉಣ್ಣೆ ಮತ್ತು ಲೇಸ್‌ನಿಂದ ಮಾಡಲಾಗಿದೆ.

*


ಮನುಷ್ಯನ ಪಾದ: ಇಷ್ಟೆಲ್ಲಾ ಪ್ರಾಣಿಗಳನ್ನು ಹೋಲುವಂತೆ ಶೂ ಮಾಡಿದ ಮೇಲೆ ಮನುಷ್ಯನ ಕಾಲುಗಳನ್ನು ಸುಮ್ಮನೆ ಬಿಡಲಾಗುತ್ತದೆಯೇ. ಮನುಷ್ಯನ ಪಾದಗಳ ಆಕಾರದ ಈ ಶೂ ಕೂಡ ಇದೆ. ಇದು ಹಾಕಿಕೊಂಡರೆ ನಮ್ಮ ಕಾಲಿಗೇ ಲೇಸ್‌ ಕಟ್ಟಿಕೊಂಡಂತೆ ಕಾಣುತ್ತದೆ. ಧರಿಸಿದಾಗ ವಿಚಿತ್ರವಾಗಿ ಕಂಡರೂ ಕಾಲೇಜು ವಿದ್ಯಾರ್ಥಿಗಳಿಗೆ ಟ್ರೆಂಡಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT