ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿ ತೀವ್ರತೆ ಹೆಚ್ಚಿಸಿದ್ದ ಹಿಮಾಲಯದ ಕೆಸರು!

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಹಿಮಾಲಯದಿಂದ ಕೊಚ್ಚಿಕೊಂಡು ಬಂದು ಹಿಂದೂ ಮಹಾಸಾಗರದ ತಳದಲ್ಲಿ ಶೇಖರವಾಗಿ ಗಟ್ಟಿಗೊಂಡ ಕೆಸರು 2004ರಲ್ಲಿ ಸಂಭವಿಸಿದ ಸುನಾಮಿಯ ಪರಿಣಾಮವನ್ನು ತೀವ್ರಗೊಳಿಸಿರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿದೆ.

ಲಕ್ಷಾಂತರ ವರ್ಷಗಳಿಂದ ಹಿಮಾಲಯ ಮತ್ತು ಟಿಬೆಟ್ ಪ್ರಸ್ಥಭೂಮಿಯ ಕೆಸರು ನದಿ ಮೂಲಕವಾಗಿ ಸಾವಿರಾರು ಕಿ.ಮೀ ಸಾಗಿ ಹಿಂದೂ ಮಹಾಸಾಗರದಲ್ಲಿ ಶೇಖರಗೊಂಡಿತ್ತು. ಸಾಗರದಾಳದಲ್ಲಿ ಇದು ಗಟ್ಟಿಯಾಗಿ, ಸುನಾಮಿಯ ತೀವ್ರತೆಯನ್ನು ಹೆಚ್ಚಿಸುವಷ್ಟು ಉಷ್ಣತೆ ಮತ್ತು ಕಂಪನವನ್ನು ಸೃಷ್ಟಿಸಿತ್ತು ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಉತ್ತರ ಅಮೆರಿಕದ ವಾಯವ್ಯ ಕರಾವಳಿ, ಇರಾನ್, ಪಾಕಿಸ್ತಾನ ಮತ್ತು ಕೆರಿಬಿಯನ್‌ನಲ್ಲಿ ಇದೇ ಮಾದರಿಯಲ್ಲಿ ಮಣ್ಣಿನ ರಚನೆ ಇರುವ ಸಾಧ್ಯತೆ ಇದ್ದು, ಅಲ್ಲಿ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮಗಳು ಉಂಟಾಗಹುದು ಎಂದು ಅರಿಯಲು ಈ ಅಧ್ಯಯನ ನಡೆಸಿದ್ದಾಗಿ ಒರಿಗಾನ್ ಸ್ಟೇಟ್ ಯೂನಿವರ್ಸಿಟಿಯ ಲಿಸಾ ಮೆಕ್‌ನೆಯಿಲ್ ಹೇಳಿದ್ದಾರೆ.

ಸಮುದ್ರ ತಳದಲ್ಲಿ ಶೇಖರಗೊಂಡ ಮಣ್ಣನ್ನು ಅಧ್ಯಯನಕ್ಕೆ ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT