ನವದೆಹಲಿ: ಹೌರಾ ಮತ್ತು ಕೋಲ್ಕತ್ತ ಮಧ್ಯೆ ಸಂಪರ್ಕ ಕಲ್ಪಿಸಲು ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರೊ ಸುರಂಗ ಮಾರ್ಗ ಮುಂದಿನ ವಾರ ಪೂರ್ಣಗೊಳ್ಳಲಿದೆ.
ಕೋಲ್ಕತ್ತಾದ 16.6 ಕಿ.ಮೀ ಉದ್ದದ ಪೂರ್ವ–ಪಶ್ಚಿಮ ಮೆಟ್ರೊ ಕಾರಿಡಾರ್ ಯೋಜನೆಯು 10.6 ಕಿಮೀ ಉದ್ದದ ಸುರಂಗ ಹೊಂದಿದೆ. ಇದರಲ್ಲಿ 520 ಮೀಟರ್ ಉದ್ದದ ಅವಳಿ ಮಾರ್ಗವು ನೀರಿನಡಿ ಹಾದುಹೋಗಲಿದೆ.
ಹೌರಾ ಮತ್ತು ಮಹಾಕರನ್ ಮೆಟ್ರೊ ನಿಲ್ದಾಣಗಳ ಮಧ್ಯೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರು ಕೇವಲ ಒಂದು ನಿಮಿಷ ನೀರಿನಡಿಯ ಸುರಂಗದಲ್ಲಿ ತೆರಳಲಿದ್ದಾರೆ. ಇಲ್ಲಿ ಗಂಟೆಗೆ 80 ಕಿಲೊ ಮೀಟರ್ ವೇಗದಲ್ಲಿ ಮೆಟ್ರೊ ಸಂಚರಿಸಲಿದೆ.