ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಸಿಲೋನಾಗೆ ದಾಖಲೆಯ ಪ್ರಶಸ್ತಿ

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌ : ಲಯೊನೆಲ್‌ ಮೆಸ್ಸಿ, ನೇಮರ್‌ ಮತ್ತು ಪಾಕೊ ಅಲಕೇಸರ್‌ ಅವರ ಮಿಂಚಿನ ಆಟದ ಬಲದಿಂದ ಎಫ್‌ಸಿ ಬಾರ್ಸಿ ಲೋನಾ ತಂಡ ಕೊಪಾ ಡೆಲ್‌ ರೇ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ  29ನೇ  ಪ್ರಶಸ್ತಿ   ಗೆದ್ದು ದಾಖಲೆ ಬರೆಯಿತು.

ಭಾನುವಾರ ನಡೆದ ಫೈನಲ್‌ನಲ್ಲಿ ಬಾರ್ಸಿಲೋನಾ ತಂಡ 3–1 ಗೋಲು ಗಳಿಂದ ಅಲವೇಸ್‌ ತಂಡವನ್ನು ಮಣಿಸಿತು.

96 ವರ್ಷಗಳ ಬಳಿಕ ಫೈನಲ್‌ ಪ್ರವೇಶಿ ಸಿದ್ದ ಅಲವೇಸ್‌ ತಂಡ ಶುರುವಿನಿಂದಲೇ ಮಿಡ್‌ಫೀಲ್ಡ್‌ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿತು. ಹೀಗಾಗಿ ಬಲಿಷ್ಠ ಬಾರ್ಸಿ ಲೋನಾ   ತಂಡಕ್ಕೆ ಮೊದಲ 29 ನಿಮಿಷ ಗಳಲ್ಲಿ ಗೋಲು ಗಳಿಸಲು ಆಗಲಿಲ್ಲ.

30ನೇ ನಿಮಿಷದಲ್ಲಿ ಮೆಸ್ಸಿ ಮೋಡಿ ಮಾಡಿದರು. ಸಹಆಟಗಾರ ನೇಮರ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ತಡೆದ ಅವರು ಅದನ್ನು 18 ಗಜ ದೂರ ದಿಂದ ಒದ್ದು ಎದುರಾಳಿ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.ಈ ಮೂಲಕ ಅರ್ಜೆಂಟೀನಾದ ಆಟ ಗಾರ ಈ ಋತುವಿನಲ್ಲಿ 54 ಗೋಲು ಗಳಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT