ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾಸಿನಿ ಸರ್ಫಿಂಗ್‌ ಚಾಂಪಿಯನ್‌

ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌: ತನ್ವಿ ಜಗದೀಶ್‌ ಚಾಂಪಿಯನ್‌
Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್‌ನ ತನ್ವಿ ಜಗದೀಶ್ ಮತ್ತು ಪುದುಚೇರಿಯ ಕಲಿಅಲೈ ಸರ್ಫಿಂಗ್‌ ಸ್ಕೂಲ್‌ನ ಸುಹಾಸಿನಿ   ಡಾಮಿನ್ ಅವರು ಭಾನುವಾರ ಮುಕ್ತಾಯವಾದ  ಇಂಡಿ­ಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮುಕ್ತ ಸ್ಟ್ಯಾಂಡ್‌ ಅಪ್ ಪೆಡಲಿಂಗ್ ಮತ್ತು ಸರ್ಫಿಂಗ್‌ನಲ್ಲಿ ಪ್ರಶಸ್ತಿ ಗೆದ್ದರು.

ಸಸಿಹಿತ್ಲು ಬೀಚ್‌ನಲ್ಲಿ  ಕೆನರಾ ಸರ್ಫಿಂಗ್‌ ಅಂಡ್‌ ವಾಟರ್‌ ಸ್ಪೋರ್ಟ್ಸ್ ಪ್ರಮೋಷನ್‌ ಕೌನ್ಸಿಲ್‌ ಹಾಗೂ ಮಂತ್ರ ಸರ್ಫಿಂಗ್‌ ಕ್ಲಬ್‌ ಸಹಯೋಗದಲ್ಲಿ ಈ ಚಾಂಪಿಯನ್‌ಷಿಪ್ ಆಯೋಜಿಸ­ಲಾಗಿತ್ತು.

ಮಹಿಳೆಯರ ಸ್ಟ್ಯಾಂಡ್‌ ಅಪ್ ಪೆಡಲಿಂಗ್‌ನಲ್ಲಿ ಅಮೋಘ  ಸಾಮರ್ಥ್ಯ ಮೆರೆದ ತನ್ವಿ ಜಗದೀಶ್ ಅವರು  ಪ್ರಶಸ್ತಿ ಗೆದ್ದತು. ಇದೇ ವಿಭಾಗದಲ್ಲಿ ತಮಿಳು­ನಾಡಿನ ವಿಲಾಸಿನಿ ಸುಂದರ್ ಹಾಗೂ ಹರ್ಷಿತಾ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರು.

ಮಿಂಚಿದ ಸುಹಾಸಿನಿ
ಮೊದಲ ಬಾರಿಗೆ ಸರ್ಫಿಂಗ್‌ನಲ್ಲಿ ಪಾಲ್ಗೊಂಡಿದ್ದ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು. ರಷ್ಯಾದ ಓಲ್ಗಾ ಕೊಸೆಂಕೊ ಅವರು ದ್ವಿತೀಯ ಮತ್ತು ಮಣಿಪಾಲದ ಇಶಿತಾ ಮಾಳವೀಯ ತೃತೀಯ ಸ್ಥಾನ ಪಡೆದರು.
ಶನಿವಾರ ನಡೆದಿದ್ದ ಹೀಟ್ಸ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಸರ್ಫರ್‌ ತನ್ವಿ ಜಗದೀಶ್‌ ಹಾಗೂ ಕಳೆದ ಬಾರಿಯ ಚಾಂಪಿಯನ್‌  ಸಿಂಚನಾ ಗೌಡ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು.

ಅಮ್ಮಾಡೇಗೆ ಜಯ
ಪುರುಷರ ಮುಕ್ತ ವಿಭಾಗದ ಫೈನಲ್‌ನಲ್ಲಿ ಮಾಲ್ಡೀವ್ಸ್ ಸರ್ಫರ್ ಅಮ್ಮಾಡೇ, ತಮಿಳುನಾಡಿನ ಪ್ರಸ್ಟಿಲ್‌ ಫ್ರೀಯಾನ್‌ ಹಾಗೂ ಮಣಿಕಂಠನ್‌ ಅಪ್ಪು ನಂತರದ ಎರಡು ಸ್ಥಾನ ಪಡೆದುಕೊಂಡರು. 

ಪುರುಷರ ಮುಕ್ತ ವಿಭಾಗದ ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌ನಲ್ಲಿ  ಚೆನ್ನೈನ ಶೇಖರ್‌ ಪಿಟ್ಚೆ ಮೊದಲ ಸ್ಥಾನ ಪಡೆದರು, ವಿಘ್ನೇಶ ವಿಜಯ ಹಾಗೂ ಕಿಶೋರ್‌ ಕುಮಾರ್‌ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಮಾಸ್ಟರ್ಸ್‌ ವಿಭಾ­ಗದಲ್ಲಿ ವೆಂಕಟ ಕೆ ಮೊದಲಿಗರಾದರು. ಮೂರ್ತಿ ಹಾಗೂ ಸಂದೀಪ್‌ ಸ್ಯಾಮು­ಯೆಲ್‌  ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

23 ರಿಂದ 30 ವರ್ಷದ ಪುರುಷರ ವಿಭಾಗದಲ್ಲಿ ಶೇಖರ್ ಪಿಟ್ಚೆ ಮೊದಲ ಸ್ಥಾನ, ಆಂಟೋನಿ ಕೆ, ದ್ವಿತೀಯ, ಧರಣೀಶ್‌ ಸೆಲ್ವಕುಮಾರ್‌ ತೃತೀಯ ಸ್ಥಾನ ಪಡೆದರು.


ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌ನಲ್ಲಿ ಚಾಂಪಿಯನ್‌ ಆದ ತನ್ವಿ ಜಗದೀಶ್‌ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ವಿಲಾಸಿನಿ ಸುಂದರ್‌, ಹರ್ಷಿತಾ ಇದ್ದಾರೆ

17 ರಿಂದ 22 ವರ್ಷ ವಯಸ್ಸಿನ ಕಿರಿಯರ ವಿಭಾಗದಲ್ಲಿ ಚಾಂಪಿಯನ್ ಸ್ಥಾನ ಕೋವಳಂ ಸರ್ಫರ್ ರಮೇಶ್ ಅವರ ಪಾಲಾಯಿತು. ಪಿ.ಸೂರ್ಯ ಹಾಗೂ ರಾಹುಲ್ ಗೋವಿಂದ್ ಕ್ರಮವಾಗಿ ನಂತರದ ಎರಡು ಸ್ಥಾನ ಪಡೆದರು.

16 ವರ್ಷ ವಯೋಮಿತಿ ವಿಭಾಗದಲ್ಲಿ ಕೋವಳಂನ ಅಜೇಶ್ ಅಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ­ಹೊಮ್ಮಿದರು. ಸಂತೋಷ್ ಶಾಂತಕುಮಾರ್ ಹಾಗೂ ಶಿವರಾಜ ಬಾಬು ಎರಡು ಹಾಗೂ ಮೂರನೇ ಸ್ಥಾನ ಪಡೆದರು. 14 ವರ್ಷ ವಯೋಮಿತಿ ವಿಭಾಗದಲ್ಲಿ ಅಖಿಲನ್‌ ಪ್ರಥಮ, ಸುಬ್ರಮಣಿ ಹಾಗೂ ಅಬ್ದುಲ್‌ ಕೊನೆಯ ಎರಡು ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT