ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ವಿದ್ಯಾರ್ಥಿಗಳ ಸಾಧನೆ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ
Last Updated 28 ಮೇ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬೆಂಗಳೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ (ಡಿಆರ್‌ಡಿಓ) ವಿದ್ಯಾರ್ಥಿನಿ ಜಾಸ್ಮಿನ್‌ ಜೆರ್ರಿ 500ಕ್ಕೆ 492 ಅಂಕಗಳನ್ನು (ಶೇ 98.4) ಪಡೆದಿದ್ದಾರೆ. ಕುಮಾರನ್ಸ್‌ ಶಾಲೆಯ ವಿದ್ಯಾರ್ಥಿ ರುದ್ರಪಟ್ಟಣ ವಲ್ಲಭ ರಮಾಕಾಂತ ಶೇ 98.2 ಅಂಕ ಪಡೆದಿದ್ದಾರೆ.

ಡೆಲ್ಲಿ ಪಬ್ಲಿಕ್ ಶಾಲೆಯ (ದಕ್ಷಿಣ) ಸಿ.ವಿ. ಜ್ಯೋತಿಷ್ಮತಿ, ಡೆಲ್ಲಿ ಪಬ್ಲಿಕ್ ಶಾಲೆಯ (ಪೂರ್ವ) ಶ್ರುತಿ ಪರಾಗ್‌ ಲಂಗ್ಡೆ ಹಾಗೂ ಎನ್‌ಪಿಎಸ್‌ ರಾಜಾಜಿನಗರ ಶಾಲೆಯ ಎಲಿಜಬೆತ್ ಕುರುವಿಲ್ಲಾ ಸಮಾನವಾಗಿ ಶೇ 97.6 ಅಂಕ ಪಡೆದಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಡೆಲ್ಲಿ ಪಬ್ಲಿಕ್ ಶಾಲೆಯ (ದಕ್ಷಿಣ) ವಿದ್ಯಾರ್ಥಿನಿ ಐಶ್ವರ್ಯಾ ರಾಮಸ್ವಾಮಿ ಶೇ 97.6, ಮಲ್ಲಸಂದ್ರ ಕುಮಾರನ್ಸ್ ಶಾಲೆಯ ವಿದ್ಯಾರ್ಥಿನಿ ಸವಿನಿ ಶೆಟ್ಟಿ ಶೇ 97.2 ಅಂಕ ಗಳಿಸಿದ್ದಾರೆ.

ಚೆನ್ನೈ ವಲಯಕ್ಕೆ ಶೇ 92.64 ಫಲಿತಾಂಶ
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಅಂಡಮಾನ್–ನಿಕೋಬಾರ್ ಮತ್ತು ದಿಯು–ದಾಮನ್ ಒಳಗೊಂಡಂತೆ ಚೆನ್ನೈ ವಲಯಕ್ಕೆ ಶೇ 92.64ರಷ್ಟು ಫಲಿತಾಂಶ ಬಂದಿದೆ. ಈ ವಲಯದಲ್ಲಿ ಒಟ್ಟು 56,728 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 52,555 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT