ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪರ್ಕ ವ್ಯವಸ್ಥೆಯಲ್ಲಿ ರೈಲ್ವೆ ಇಲಾಖೆ ನಂ. 1’

ರೈಲ್ವೆ ಕರ್ಮಚಾರಿ ಟ್ರ್ಯಾಕ್‌ಮೈಂಟೆನರ್ಸ್ ಅಸೋಸಿಯೇಷನ್ ಶಿವಮೊಗ್ಗ ಶಾಖೆ ಉದ್ಘಾಟನೆ
Last Updated 29 ಮೇ 2017, 4:44 IST
ಅಕ್ಷರ ಗಾತ್ರ
ಶಿವಮೊಗ್ಗ: ರೈಲ್ವೆ ಕರ್ಮಚಾರಿಗಳು ಮತ್ತು ಟ್ರ್ಯಾಕ್‌ಮೈಂಟೆನರ್ಸ್‌ಗಳ ಕಾರ್ಯದಕ್ಷತೆಯಿಂದ ದೇಶದ ಯಾವುದೇ ಸ್ಥಳಗಳಿಗೆ ಸುರಕ್ಷಿತವಾಗಿ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು.
 
ರೈಲು ನಿಲ್ದಾಣದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರೈಲ್ವೆ ಕರ್ಮಚಾರಿ ಟ್ರ್ಯಾಕ್‌ಮೈಂಟೆನರ್ಸ್ ಅಸೋಸಿಯೇಷನ್ ಶಿವಮೊಗ್ಗ ಶಾಖೆ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ರೈಲಿನ ಪ್ರಯಾಣ ದರ ಕಡಿಮೆ. ಹಾಗಾಗಿಯೇ ರೈಲ್ವೆ ಇಲಾಖೆ ಲಾಭ ಮತ್ತು ನಷ್ಟ ಎರಡನ್ನೂ ಅನುಭವಿಸು ತ್ತಿದೆ. ಆದರೂ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ರೈಲ್ವೆ ಇಲಾಖೆ ಮೊದಲ ಸ್ಥಾನ ಕಾಯ್ದುಕೊಂಡಿದೆ ಎಂದರು.
 
ಅಸೋಸಿಯೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮಹೇಶ್ ಮಾತನಾಡಿ, ರೈಲ್ವೆ ಕರ್ಮಚಾರಿಗಳು ಮತ್ತು ಟ್ರ್ಯಾಕ್‌ಮೈಂಟೆನರ್ಸ್‌ಗಳಿಗೆ ಸೂಕ್ತ ಕುಡಿಯುವ ನೀರು, ವಿಶ್ರಾಂತಿ ಸೇರಿದಂತೆ ಮೂಲ ಸೌಲಭ್ಯ ನೀಡುವತ್ತ ಸರ್ಕಾರ ಗಮನಹರಿಬೇಕು ಎಂದರು.
 
ಅಸೋಸಿಯೆಷನ್‌ನ ಪ್ರಭುಕುಮಾರ್ ಪ್ರಾಸ್ತಾವಿಕ ಮಾತನಾಡಿ, ಮೂಲ ಸೌಲಭ್ಯ ಮತ್ತು ಸುರಕ್ಷತೆ ಕೊರತೆಯಿಂದ ಪ್ರತಿ ವರ್ಷ ನೂರಾರು ಟ್ರ್ಯಾಕ್‌ ಮೈಂಟನರ್ಸ್‌ಗಳು ಸಾವೀಗಿಡಾಗುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ಜೀವನ ಭದ್ರತೆ ಬಗ್ಗೆ ನಿಗಾವಹಿಸಬೇಕು ಎಂದರು.
 
ಅಸೋಸಿಯೇಷನ್‌ ಸದಸ್ಯರು, ಸಾರ್ವಜನಿಕರು ರಕ್ತದಾನ ಮಾಡಿದರು. ಅಸೋಸಿಯೆಷನ್ ಶಿವಮೊಗ್ಗ ಶಾಖೆ ಅಧ್ಯಕ್ಷ ಡಿ.ಎ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಕೆ.ನಿಂಗಪ್ಪ, ಶಿವಮೊಗ್ಗ ಶಾಖೆ ಕಾರ್ಯದರ್ಶಿ ಆರ್.ರಾಜೇಶ್, ಬಳ್ಳೆಕೆರೆ ಸಂತೋಷ್ ಎ.ನಾಗರಾಜ್, ವಿ.ಸುನೀಲ್, ಶಬರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT