ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಳಿಗೆ ನಿಯೋಗ

Last Updated 29 ಮೇ 2017, 5:41 IST
ಅಕ್ಷರ ಗಾತ್ರ

ಹುಳಿಯಾರು: ‘ಹುಳಿಯಾರನ್ನು ಶೀಘ್ರವೇ ತಾಲ್ಲೂಕು ಆಗಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಲು ನಾಗರಿಕರ ಪರವಾಗಿ ನಿಯೋಗ ತೆರಳುತ್ತಿದೆ’ ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ವೆಂಕಟಚಲಪತಿ ಶೆಟ್ಟಿ ತಿಳಿಸಿದರು.

ಹುಲ್ಲೇಕೆರೆ ಡಾ.ಎಂ.ಎಸ್.ಮಹಲಿಂಗಪ್ಪ ನೇತೃತ್ವದಲ್ಲಿ ನಡೆದ ಮೂರನೇ ಸಭೆಯಲ್ಲಿ ಅವರು ಮಾತನಾಡಿ, ‘ಹುಳಿಯಾರನ್ನು ತಾಲ್ಲೂಕು ಕೇಂದ್ರವನ್ನಾಗಿಸುವ ಬಗ್ಗೆ  ಜೂನ್ ನಲ್ಲಿ ನಡೆಯಲಿರುವ ಅಧಿವೇಶನದ ಸಮಯದಲ್ಲಿ ಹುಳಿಯಾರು ನಾಗರಿಕರ ಪರವಾಗಿ ನಿಯೋಗ ತೆರಳಿ ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಕಾನೂನು ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದರು.

ಡಾ.ಎಂ.ಎಸ್.ಮಹಲಿಂಗಪ್ಪ ಮಾತನಾಡಿ, ‘ಈಗಾಗಲೇ ಒಟ್ಟು 49 ತಾಲ್ಲೂಕು ಕೇಂದ್ರಗಳ ಬಗ್ಗೆ ಘೋಷಣೆಯಾಗಿದ್ದು, ಅಧಿಕೃತವಾಗಿ ರಾಜ್ಯಪತ್ರದಲ್ಲಿ ಘೋಷಣೆಯಾಗುವುದು ಬಾಕಿಯಿದೆ. ತಾಲ್ಲೂಕಾಗಲು ಅರ್ಹತೆ ಹೊಂದಿರುವ ಹುಳಿಯಾರನ್ನು ಕೂಡ ಅಧಿಕೃತವಾಗಿ ಸೇರಿಸಿ ಒಟ್ಟು 50 ತಾಲ್ಲೂಕು ಕೇಂದ್ರ ಘೋಷಿಸುವಂತೆ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್, ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಮಹ್ಮದ್ ಸಜ್ಜಾದ್, ರಹಮತ್ತುಲ್ಲಾ ಸಾಬ್, ಶ್ರೀನಿವಾಸ್ ಬಾಬು, ಹೊಯ್ಸಳಕಟ್ಟೆ ಶ್ರೀನಿವಾಸ್, ಕೆಂಕೆರೆ ಗಿರೀಶ್, ಪ್ರವೀಣ್, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಮಲ್ಲಿಕಣ್ಣ, ಬರದಲೇ ಪಾಳ್ಯದ ಚನ್ನಬಸವಯ್ಯ, ಕಂಪನಹಳ್ಳಿ ಮರುಳಸಿದ್ದಪ್ಪ, ದಾಸಪ್ಪ, ತಮ್ಮಡಿಹಳ್ಳಿ ಮೂರ್ತಪ್ಪ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT