ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಕುರಿತ ಪ್ರಶ್ನೆಗಳಿಗೆ ಸರ್ಕಾರದಿಂದ ಟ್ವಿಟರ್‌ ಮೂಲಕ ಉತ್ತರ

Last Updated 29 ಮೇ 2017, 7:07 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 1ರಿಂದ ಜಾರಿಯಾಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಗೆ ಸಂಬಂಧಿಸಿದ ಉದ್ಯಮ ವಲಯದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಭಾನುವಾರ(ಮೇ. 28) ಹೊಸ ಟ್ವಿಟರ್‌ ಖಾತೆ ನಿರ್ವಹಣೆಯನ್ನು ಆರಂಭಿಸಿದೆ.

ಈ ಮೂಲಕ ಜಿಎಸ್‌ಟಿ ಬಗ್ಗೆ ಉದ್ಯಮ ವಲಯದಲ್ಲಿನ ಜನರಲ್ಲಿರುವ ಪ್ರಶ್ನೆ, ಗೊಂದಲಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ. 
ಆದಾಯ ತೆರಿಗೆ ಇಲಾಖೆಯ ಹೊಸ ಟ್ವಿಟರ್‌ ಖಾತೆ @askGST_GoI ಮೂಲಕ  ಜಿಎಸ್‌ಟಿ ಮೇಲಿನ ಎಲ್ಲಾ ಬಗೆಯ ‌ಪ್ರಶ್ನೆಗಳಿಗೆ ತೆರಿಗೆದಾರರಿಂದ ಆಹ್ವಾನಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಎಲ್ಲಾ ತೆರಿಗೆದಾರರು ಮತ್ತು ಇತರ ಪಾಲುದಾರರು ಜಿಎಸ್ಟಿಗೆ ಸಂಬಂಧಿಸಿರುವ ಪ್ರಶ್ನೆಗಳನ್ನು ನೇರವಾಗಿ ಟ್ವಿಟರ್ ಮೂಲಕ ಕೇಳಬಹುದಾಗಿದ್ದು, ಸ್ಪಷ್ಟೀಕರಣ ನೀಡಲಿದೆ ಹಾಗೂ ನಿರ್ದೇಶನಗಳನ್ನೂ ಸ್ವಾಗತಿಸುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT