ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಪ, ಪ್ರತಿಭಟನೆಗೆ ಬಗ್ಗುವವಳು ನಾನಲ್ಲ’

Last Updated 29 ಮೇ 2017, 9:20 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಗ್ರಾಮದ  ಅಭಿವೃದ್ಧಿ, ಪ್ರಗತಿಯ ವಿಚಾರದಲ್ಲಿ ನಾನು ರಾಜ ಕೀಯ ಮುಕ್ತವಾಗಿರುವವಳು, ಹೀಗಿರು ವಾಗ ಅಭಿವೃದ್ಧಿ ಮಾಡುವಾಗ ಯಾರೇ ರಾಜಕೀಯ ಮಾಡಿದರೂ ನಾನು ಸಹಿಸುವವಳಲ್ಲ, ರಾಜಕೀಯ ಪ್ರೇರಿತ ಆರೋಪ, ಪ್ರತಿಭಟನೆಗೆ ಬಗ್ಗುವವಳೂ ನಾನಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

‘ಗಾಂಧಿ ಪಥ ಗ್ರಾಮ ಪಥ’ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಯಲ್ಲಿ ಮಂಜೂರಾಗಿರುವ ಹಿರೇ ಬಂಡಾಡಿ ಗ್ರಾಮದ ದಾಸರಮೂಲೆ-ಅಡೇಕ್ಕಲ್ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ‘ ಇಲ್ಲಿನ ಈ ರಸ್ತೆ ಒಂದೂ ವರೆ ಕಿಲೋ ಮೀಟರ್ ಉದ್ದ ಅಭಿವೃದ್ಧಿ ಹೊಂದಲಿದ್ದು, ಕಾಮಗಾರಿಗೆ ಯಾವುದೇ ಚ್ಯುತಿ, ಅಡ್ಡಿ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಿಗೂ ಇದೆ’ ಎಂದರು.

ರಸ್ತೆ ಚರಂಡಿಯಿಂದ ಚರಂಡಿಗೆ 9 ಮೀಟರ್ ಇರುತ್ತದೆ, ಕಾಮಗಾರಿ ಆಗುವಾಗ ಒಂದಿಂಚು ಜಾಗ ಬಿಟ್ಟು ಕೊಡಬೇಕಾದಲ್ಲಿ ಅದಕ್ಕೆ ಅಡ್ಡಿಪಡಿಸದೆ ಊರ ಅಭಿವೃದ್ಧಿಯಲ್ಲಿ ತನ್ನ ಪಾತ್ರವನ್ನು ಗುರುತಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದರು.

ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಸದಸ್ಯ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸದಸ್ಯರಾದ  ನಳಿನಿ, ಸದಾನಂದ ಶೆಟ್ಟಿ, ಮಾಜಿ ಅಧ್ಯಕ್ಷೆ ಗೀತಾ ದಾಸರಮೂಲೆ, ಮಾಜಿ ಸದಸ್ಯರಾದ ಶೇಷಪ್ಪ ನೆಕ್ಕಿಲು, ಬಿ.ಕೆ. ಅಬೂಬಕ್ಕರ್ ಕೊಳ್ಳೇಜಾಲ್, ಪುತ್ತೂರು ನಗರ ಪ್ರಾಧಿಕಾರ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾ ಪನಾ ಸಮಿತಿ ಅಧ್ಯಕ್ಷ ರಘುನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‍ಚಂದ್ರ ಆಳ್ವ, ಹಿರೇ ಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ಪಿಡಬ್ಲ್ಯುಡಿ ಗುತ್ತಿಗೆದಾರ ರಾಧಾಕೃಷ್ಣ ನಾಯಕ್, ಹಿರಿಯ ಗುತ್ತಿಗೆ ದಾರರಾದ ಕೊಳ್ಳೇಜಾಲ್ ಯಾಕೂಬ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಇತರರು ಇದ್ದರು. ಲೋಕೋಪಯೋಗಿ ಎಂಜಿನಿಯರ್ ಜನಾರ್ದನ ಸ್ವಾಗತಿಸಿ, ಸುಲೈಮಾನ್ ವಂದಿಸಿದರು.

13 ರಸ್ತೆಗಳಿಗೆ ₹19.77 ಕೋಟಿ ಅನುದಾನ (ಲಕ್ಷಗಳಲ್ಲಿ)
l ಸುಳ್ಯಪದವು-ಪದ್ದಡ್ಕ-ಮೈಂದನಡ್ಕ ರಸ್ತೆಗೆ  ₹221.50
l ಬಲ್ನಾಡು-ಸಾಜ ರಸ್ತೆ    ₹217
l ಅರ್ಕ-ಹನಿಯೂರು ರಸ್ತೆ (ಕೊಡಿಪ್ಪಾಡಿ)  ₹160.50
l ಅಳಕೆಮಜಲು-ವಡ್ಯರ್ಪೆ ರಸ್ತೆ (ಇಡ್ಕಿದು)   ₹72.50
l ಪಾಟ್ರಕೋಡಿ-ಕೆದಿಲ ರಸ್ತೆ   ₹126.50
l ವಿನಾಯಕನಗರ-ಮಠಂತಬೆಟ್ಟು-ದೋರ್ಮೆ ರಸ್ತೆ (ಕೋಡಿಂಬಾಡಿ)  ₹118
ಬೋಳಂತಿಲ ದರ್ಬೆ ರಸ್ತೆ (34-ನೆಕ್ಕಿಲಾಡಿ)   ₹107.50
l ತಲೆತ್ತಿಮಾರು-ಮುಂಡಮೂಲೆ ರಸ್ತೆ  (ಮಾಣಿಲ)   ₹141
l ನೀರ್ಕಜೆ-ಕಟ್ಟೆ ರಸ್ತೆ(ಕೇಪು)   ₹141
l ಗರಡಿಬೈಲು-ಅಡ್ಕ ರಸ್ತೆ(ಪುಣಚ)    ₹160.50
l ಪಾಪೆಮಜಲು-ಬಪ್ಪಪುಂಡೇಲು ರಸ್ತೆ(ಅರಿಯಡ್ಕ)   ₹198
l ಬನ್ನೂರು ಕಜೆ-ಕುಂಟ್ಯಾನ ರಸ್ತೆ (ಬನ್ನೂರು)  ₹180
l ದಾಸರಮೂಲೆ-ಅಡೆಕ್ಕಲ್ ರಸ್ತೆ (ಹಿರೇಬಂಡಾಡಿ)   ₹133

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT