ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠಾಣ್‌ಕೋಟ್‌:  ಸೇನಾ ನೆಲೆ ಬಳಿ ಅನುಮಾನಾಸ್ಪದ ಚೀಲಗಳು ಪತ್ತೆ

Last Updated 29 ಮೇ 2017, 12:12 IST
ಅಕ್ಷರ ಗಾತ್ರ
ಪಠಾಣ್‌ಕೋಟ್‌: ಪಂಜಾಬ್‌ನ ಮಮೂನ್ ಸೇನಾ ನೆಲೆ ಬಳಿ ಅನುಮಾನಾಸ್ಪದ ಚೀಲಗಳು ಪತ್ತೆಯಾದ ಕಾರಣ ಪಠಾಣ್‌ಕೋಟ್‌ ಹಾಗೂ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.
 
ಸ್ಥಳೀಯ ವ್ಯಕ್ತಿಯೊಬ್ಬರು ಚೀಲದ ಬಗ್ಗೆ ಮಾಹಿತಿ ನೀಡಿದಾಗ ಪಠಾಣ್‌ಕೋಟ್ ಹಾಗೂ ಮಮೂನ್ ಸುತ್ತಮುತ್ತ ಭಾರತೀಯ ಸೇನೆ ಶೋಧ ಕಾರ್ಯಚರಣೆ ಕೈಗೊಂಡಿತು.  ಈ ವೇಳೆ ಗೋಣಿಚೀಲ ಸಿಕ್ಕಿದ್ದು ಅದರಲ್ಲಿ  ಐದು ಶರ್ಟ್ ಹಾಗೂ 2 ಪ್ಯಾಂಟ್‌ಗಳಿದ್ದವು ಎಂದು ಅಧಿಕಾರಿಗಳು  ಹೇಳಿದ್ದಾರೆ.
 
2015ರಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಮೂವರು ಶಸ್ತ್ರಧಾರಿಗಳು  ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 7 ಮಂದಿಯನ್ನು ಹತ್ಯೆಗೈದಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT