ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬ್ಯಾಟರಿ ಆರೋಗ್ಯಕ್ಕೆ ಹಲವು ಸೂತ್ರಗಳು

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ಇದು ಸ್ಮಾರ್ಟ್‌ಫೋನ್ ಯುಗ. ಎಲ್ಲರ ಕೈಯಲ್ಲೂ ಮೊಬೈಲ್ ಫೋನ್‌ಗಳೇ. ಈ ಹಿಂದೆ ಮೊಬೈಲ್ ಫೋನ್‌ಗಳನ್ನು ಮಾತನಾಡಲು ಮತ್ತು ಸಂದೇಶ ರವಾನಿಸಲು ಮಾತ್ರ ಬಳಸಲಾಗುತ್ತಿತ್ತು. ಆದರೆ, ಇಂದು ದೈನಂದಿನ ಬದುಕಿನ ಮನರಂಜನೆ, ವ್ಯವಹಾರ, ವಹಿವಾಟಿಗೂ ಮೊಬೈಲ್ ಫೋನ್ ಬಳಕೆಯಾಗುತ್ತಿದ್ದು ಬಳಕೆದಾರರು ಬ್ಯಾಟರಿ ಚಾರ್ಜಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಮೊಬೈಲ್ ಅನ್ನು ಯಾವ ರೀತಿ ಚಾರ್ಜ್ ಮಾಡಬೇಕು, ಬ್ಯಾಟರಿಯಲ್ಲಿನ ಶಕ್ತಿ ಖಾಲಿಯಾಗದಂತೆ ಯಾವ ರೀತಿ ಉಪಯೋಗಿಸಬೇಕು ಎಂಬುದಕ್ಕೆ ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ. ಅದರಂತೆ ಪಾಲಿಸಿದರೆ ನಿಮ್ಮ ಮೊಬೈಲ್ ಬ್ಯಾಟರಿಯ ಆರೋಗ್ಯ ಚೆನ್ನಾಗಿರುತ್ತದೆ.

ನಿಮ್ಮ ಮೊಬೈಲ್  ಚಾರ್ಜರ್‌ನಿಂದಲೇ ಚಾರ್ಜ್ ಮಾಡಿ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ಗೆ ನೀಡಿರುವ ಚಾರ್ಜರ್‌ನಿಂದಲೇ ಚಾರ್ಜ್ ಮಾಡಿಕೊಳ್ಳುವುದು ಉತ್ತಮ. ಯುಎಸ್‌ಬಿ, ಬೇರೆ ಕಂಪೆನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ನಿಮ್ಮ ಬ್ಯಾಟರಿಯ ಕಾರ್ಯಕ್ಷಮತೆ ಹಾಳಾಗುತ್ತದೆ.

ಚಾರ್ಜ್ ಮಾಡುವಾಗ ಫ್ಲಿಪ್ ಕವರ್, ಬ್ಯಾಕ್ ಕೇಸ್ ತೆಗೆಯಿರಿ

ಬಳಕೆದಾರರು  ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌ನಂತಹ ರಕ್ಷಕ ಕವಚಗಳನ್ನು ಅಳವಡಿಸಿಕೊಂಡಿರುತ್ತಾರೆ. ಚಾರ್ಜ್ ಮಾಡುವಾಗ  ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ. 

ಯಾಕೆಂದರೆ ಚಾರ್ಜ್ ಆಗುವಾಗ ಬ್ಯಾಟರಿ ಸ್ವಲ್ಪ ಬಿಸಿಯಾಗುತ್ತದೆ. ರಕ್ಷಣಾ ಕವಚಗಳು ಇದ್ದರೆ ಬ್ಯಾಟರಿಯ ಬಿಸಿ ಬಹುಬೇಗನೆ ತಣ್ಣಗಾಗುವುದಿಲ್ಲ. ಬ್ಯಾಟರಿ ಹೆಚ್ಚು ಬಿಸಿಯಾದಷ್ಟು ಬಾಳಿಕೆ ಬರುವುದಿಲ್ಲ. ಹಾಗಾಗಿ ಚಾರ್ಜ್ ಮಾಡುವಾಗ ಫ್ಲಿಪ್ ಕವರ್ ಮತ್ತು ಬ್ಯಾಕ್ ಕೇಸ್‌ಗಳನ್ನು ತೆಗೆಯುವುದು ಒಳ್ಳೆಯದು. ಮಾರುಕಟ್ಟೆಯಲ್ಲಿ ದೊರೆಯುವ ವೇಗದ ಚಾರ್ಜರ್‌ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಡಿ. ಇದರಿಂದ ಬ್ಯಾಟರಿ ಬಹು ಬೇಗನೆ ಹಾಳಗುತ್ತದೆ. ಕಂಪೆನಿ ನೀಡಿದ ಚಾರ್ಜರ್ ಮೂಲಕವೇ ಸಹಜವಾಗಿಯೇ ಚಾರ್ಜ್ ಮಾಡಿಕೊಳ್ಳಿ.

ರಾತ್ರಿ ಪೂರ್ತಿ ಚಾರ್ಜ್ ಮಾಡಬೇಡಿ..
ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಮೊಬೈಲ್ ಚಾರ್ಜ್ ಮಾಡುವಂತಹ ಆ್ಯಪ್‌ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ವೈಫೈ, ಷೇರ್್ಇಟ್್, ಬ್ಲ್ಯೂಟೂತ್ ಮೂಲಕ ಆ್ಯಪ್ ಗಳಿಂದ ಚಾರ್ಜ್ ಮಾಡಿಕೊಳ್ಳಬಹುದು. ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್‌ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT