ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 10–6–1967

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

*ನಾಸೆರ್ ರಾಜೀನಾಮೆ, ಮತ್ತೆ ವಾಪಸ್
ಬೈರೂತ್, ಜೂನ್ 9–
ಇಸ್ರೇಲಿನ ಮಿಲಿಟರಿ ಬಲಕ್ಕೆ ಈಜಿಪ್ಟ್ ಶರಣಾದ ಕೂಡಲೇ ಈ ರಾತ್ರಿ ಸಂಯುಕ್ತ ಅರಬ್ ಗಣರಾಜ್ಯದ ಅಧ್ಯಕ್ಷ ನಾಸೆರ್ ಅವರು, ಅರಬ್ ಗಣರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಹಠಾತ್ತನೆ ತಮ್ಮ ರಾಜೀನಾಮೆಯನ್ನು ಪ್ರಕಟಿಸಿ ನಂತರ ವಾಪಸ್ ಪಡೆದರು.

ರಾಜೀನಾಮೆ ಪ್ರಕಟವಾದ ಕೂಡಲೇ ಕೈರೋ ಮತ್ತಿತರ ಸ್ಥಳಗಳಲ್ಲಿ ‘ನಮಗೆ ನಾಸೆರ್ ಇರಬೇಕು’ ಎಂದು ಘೋಷಿಸಿ ಜನರು ಪ್ರದರ್ಶನ ನಡೆಸಿದರು. ತಮ್ಮ ಅನಿರೀಕ್ಷಿತ ರಾಜೀನಾಮೆಯನ್ನು ನಾಸೆರರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ರೇಡಿಯೋ ಟೆಲಿವಿಷನ್ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದರು.

*ಶನಿವಾರ ಅಂತಿಮ ನಿರ್ಧಾರ
ಕೈರೋ, ಜೂನ್ 9–
ಅಧ್ಯಕ್ಷ ನಾಸೆರ್‌ರವರು ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ನಾಳೆಯವರೆಗೆ ಮುಂದಕ್ಕೆ ಹಾಕಿದ್ದಾರೆಂದು ಕೈರೋ ರೇಡಿಯೋ ಇಂದು ರಾತ್ರಿ ಪ್ರಕಟಿಸಿತು.

*ಈಜಿಪ್ಟ್–ಇಸ್ರೇಲ್ ಕದನ ಮುಕ್ತಾಯ
ಕೈರೋ, ಜೂನ್ 9–
ಈಜಿಪ್ಟ್–ಇಸ್ರೇಲ್ ನಡುವಣ ಕದನ ಸಂಪೂರ್ಣವಾಗಿ ಕೊನೆಗೊಂಡಿದೆ. ತಮ್ಮ ಯುದ್ಧ ರಂಗಗಳಲ್ಲೆಲ್ಲಾ ಸಂಪೂರ್ಣ ಶಾಂತಿ ನೆಲೆಸಿದೆಯೆಂದೂ ಎಲ್ಲಾ ಕಾರ್ಯಾಚರಣೆಗಳನ್ನೂ ನಿಲ್ಲಿಸಲಾಗಿದೆಯೆಂದೂ ಈಜಿಪ್ಟ್‌ನ ಹೈಕಮಾಂಡ್ ಇಂದು ಸಂಜೆ ಪ್ರಕಟಿಸಿತು.

ಈ ಪ್ರಕಟಣೆಗೆ ಎರಡು ಗಂಟೆಗಳಿಗೆ ಮುಂಚೆ ಈಜಿಪ್ಟ್ ನೀಡಿದ್ದ ಹೇಳಿಕೆಯೊಂದರಲ್ಲಿ ಸೂಯಜ್ ಕಾಲುವೆಯ ಪಶ್ಚಿಮ ಭಾಗದಲ್ಲಿ ಇಸ್ರೇಲ್ ಪಡೆಗಳು ಈಜಿಪ್ಟ್ ಸೇನೆಯ ಮೇಲೆ ವಾಯು ದಾಳಿಯನ್ನು ಮುಂದುವರಿಸಿದ್ದುವೆಂದು ತಿಳಿಸಿದ್ದಿತು.

* ಬೆಂಗಳೂರು ವಾರ್ಸಿಟಿ 68 ರಿಂದ ಇಂಗ್ಲಿಷ್ ಪಠ್ಯಕ್ರಮ ಬದಲಾವಣೆ
ಬೆಂಗಳೂರು, ಜೂನ್ 9–
ಇಂಗ್ಲಿಷ್ ಭಾಷೆಯ ಆಧುನಿಕ ಸ್ವರೂಪ ಹಾಗೂ ಬಳಕೆಯ ಸಮಗ್ರ ಪರಿಚಯವನ್ನು ಪಡೆದು, ವಿದ್ಯಾರ್ಥಿಗಳು ಈ ಭಾಷಾ ಜ್ಞಾನದಿಂದ ಹೆಚ್ಚು ಪ್ರಯೋಜನ ಪಡೆಯುವಂತಾಗಲು ಪಿ.ಯು.ಸಿ.ಯಿಂದ ಎಂ.ಎ. ತರಗತಿಯವರೆಗೆ ಇಂಗ್ಲಿಷ್ ಪಠ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯ ಬದಲಾಯಿಸಲಿದೆ.

*ಕದನ ವಿರಾಮಕ್ಕೆ ಸಿರಿಯ ಸಮ್ಮತಿ
ಬೈರತ್, ಜೂನ್ 9
– ‘ಬೃಹತ್ ಪ್ರಮಾಣದ ಇಸ್ರೇಲಿ ಆಕ್ರಮಣವನ್ನು ನಿಲ್ಲಿಸುವುದಕ್ಕಾಗಿ ತಕ್ಷಣ ಭದ್ರತಾ ಸಮಿತಿ ಸಭೆ ನಡೆಯಬೇಕೆಂದು ಸಿರಿಯ ಇಂದು ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡಿತು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉ ಥಾಂಟ್ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ಟ್ಯಾಂಕುಗಳು, ಭೂಸೇನೆ, ಆರ್ಟಿಲರಿ ಪಡೆ ಮತ್ತು ವಿಮಾನ ದಾಳಿಗಳ  ಮೂಲಕ ತನ್ನ 72 ಮೈಲಿ ಗಡಿಯುದ್ದಕ್ಕೂ ಇಸ್ರೇಲ್ ಆಕ್ರಮಣ ನಡೆಸಿದೆಯೆಂದು ಸಿರಿಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT