ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತ, ಪಿತ್ತ ನಿವಾರಕ ಕೋಕಂ ಅಡುಗೆ

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಪುನರ್ಪುಳಿ ಗೊಜ್ಜು
ಬೇಕಾಗುವ ಸಾಮಗ್ರಿಗಳು

ಎಣ್ಣೆ –1 ಚಮಚ
ಸಾಸಿವೆ  –½ ಚಮಚ
ಜೀರಿಗೆ  –¼ ಚಮಚ
ಕೆಂಪುಮೆಣಸು  – 4-5 
ನೆನೆಸಿದ ಪುನರ್ಪುಳಿ ಸಿಪ್ಪೆ 5-6 ತುಂಡು
ತೆಂಗಿನ ತುರಿ–  1 ಕಪ್
ಹುರಿಕಡಲೆ –1 ಚಮಚ
ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ
ಕೊತ್ತಂಬರಿ – ಸ್ವಲ್ಪ

ತಯಾರಿಸುವ ವಿಧಾನ

ತೆಂಗಿನತುರಿ, ಇಂಗು, ಕೆಂಪುಮೆಣಸು, ಕೊತ್ತಂಬರಿಸೊಪ್ಪು ಮತ್ತು ಸ್ವಲ್ಪ ನೀರನ್ನು ಸೇರಿಸಿ ರುಬ್ಬಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಜೀರಿಗೆ, ಕೆಂಪುಮೆಣಸು, ಪುನರ್ಪುಳಿ ಸಿಪ್ಪೆಯ ರಸ, ಸ್ವಲ್ಪ ನೀರನ್ನು ಹಾಕಿ ಕುದಿಸಿ. ನಂತರ ಉಪ್ಪು, ಬೆಲ್ಲ, ರುಬ್ಬಿದ ಮಾಸಾಲೆ ಹಾಕಿ 5 ನಿಮಿಷ ಕುದಿಸಿ. ನಂತರ ಕೊತ್ತಂಬರಿಸೊಪ್ಪು ಹಾಕಿ ಇಳಿಸಿ. ಈಗ ರುಚಿಯಾದ ಗೊಜ್ಜು ಅನ್ನದೊಂದಿಗೆ ಸವಿಯಲು ರುಚಿ.

***

ಪುನರ್ಪುಳಿ ರಸಂ

ಬೇಕಾಗುವ ಸಾಮಗ್ರಿಗಳು
ಗಂಟೆ ನೆನಸಿದ ಪುನರ್ಪುಳಿ ಸಿಪ್ಪೆ– 5ರಿಂದ6 , ತೆಂಗಿನಹಾಲು – 1ಕಪ್‌, ಜೀರಿಗೆ – 1 ಚಮಚ, ಕಾಳುಮೆಣಸು – 1/4 ಚಮಚ, ಬೆಲ್ಲ – ರುಚಿಗೆ ತಕ್ಕಷ್ಟು, ತುಪ್ಪ –1 ಚಮಚ, ಸಾಸಿವೆ – ½ ಚಮಚ, ಇಂಗು – ಚಿಟಿಕೆ ಕರಿಬೇವು – 7-8 ಎಲೆ, ಕೆಂಪು ಮೆಣಸು – ಸಣ್ಣ ತುಂಡು

ತಯಾರಿಸುವ ವಿಧಾನ

ನೀರಲ್ಲಿ ನೆನಸಿದ ಪುನರ್ಪುಳಿ ಸಿಪ್ಪೆಯ ರಸವನ್ನು ಶೋಧಿಸಿ ನಂತರ ತೆಂಗಿನ ಹಾಲು, ಹುರಿದುಪುಡಿ ಮಾಡಿದ ಜೀರಿಗೆ, ಕಾಳುಮೆಣಸಿನಪುಡಿ, ಸ್ವಲ್ಪ ನೀರು, ಉಪ್ಪು, ಬೆಲ್ಲ ಸೇರಿಸಿ ಪಾತ್ರೆಗೆ ಹಾಕಿ, 5ರಿಂದ 10 ನಿಮಿಷ ಕುದಿಸಿ. ನಂತರ ತುಪ್ಪದಲ್ಲಿ ಸಾಸಿವೆ, ಇಂಗು, ಕೆಂಪುಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈಗ ರುಚಿಯಾದ ಬೇಸಿಗೆಯ ದೇಹದ ಉಷ್ಣಾಂಶ ತಗ್ಗಿಸುವ ಸಾರು ಅನ್ನದೊಂದಿಗೆ ಸವಿಯಲು ಸಿದ್ಧ.

***

ಪುನರ್ಪುಳಿ ತಂಬುಳಿ

ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ ಹಸಿ ಅಥವಾ ಒಣಗಿಸಿದ್ದು – 5-6, ಬೆಲ್ಲ – ನಿಂಬೆ ಗಾತ್ರದ್ದು, ಕೆಂಪು ಮೆಣಸು – 1, ಕರಿಮೆಣಸು – 2-3, ತೆಂಗಿನತುರಿ – ½ ಕಪ್, ಸಿಹಿ ಮಜ್ಜಿಗೆ – 2-3 ಕಪ್, ಉಪ್ಪು – ರುಚಿಗೆ, ಸಾಸಿವೆ – ½ ಚಮಚ, ಎಣ್ಣೆ  – 1 ಚಮಚ, ಸಣ್ಣ ತುಂಡು ಕೆಂಪುಮೆಣಸು

ತಯಾರಿಸುವ ವಿಧಾನ 

ನೆನೆಸಿದ ಸಿಪ್ಪೆ, ಬೆಲ್ಲ, ಕೆಂಪುಮೆಣಸು, ಕರಿಮೆಣಸು, ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಉಪ್ಪನ್ನು ಸೇರಿಸಿ ಸರಿಯಾಗಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು ಸೇರಿಸಿ ಒಗ್ಗರಣೆಯನ್ನು  ಕೊಡಿ. ಈಗ ರುಚಿಯಾದ ತಂಬುಳಿ ಅನ್ನದೊಂದಿಗೆ ಸವಿಯಲು ಸಿದ್ಧ.

***

ಪುನರ್ಪುಳಿ ಪಾನಕ

ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಹಣ್ಣಿನ ಸಿಪ್ಪೆ – ¼ ಕಪ್, ಬಿಸಿನೀರು–    2 ಕಪ್, ಬೆಲ್ಲ – 6-8 ಚಮಚ, ಉಪ್ಪು – ಚಿಟಿಕೆ

ತಯಾರಿಸುವ ವಿಧಾನ

ಪುನರ್ಪುಳಿ ಹಣ್ಣಿನ ಸಿಪ್ಪೆಯನ್ನು ತೊಳೆದು ಬಿಸಿನೀರಲ್ಲಿ ನೆನೆ ಹಾಕಿ. ಅರ್ಧಗಂಟೆ ಕಳೆದ ಮೇಲೆ ಸಿಪ್ಪೆಯನ್ನು ಚೆನ್ನಾಗಿ ಹಿಚುಕಿ ಸೋಸಿ ರಸಕ್ಕೆ ಬೆಲ್ಲ, ಚಿಟಿಕೆ ಉಪ್ಪು ಬೆರಸಿ ಕುಡಿಯಿರಿ. ಒಣಗಿದ ಸಿಪ್ಪೆಯಾದರೆ ಜಾಸ್ತಿ ಹೊತ್ತು ನೆನೆಸಿ. ಪಿತ್ತದ ಹಾಗೂ ಬಳಲಿಕೆ ತೊಂದರೆ ಇರುವವರಿಗೆ ಉತ್ತಮ ಪಾನೀಯವಿದು.

***

ಪುನರ್ಪುಳಿ ಬಾತ್

ಬೇಕಾಗುವ ಸಾಮಗ್ರಿಗಳು
ಅಕ್ಕಿ – 1ಕಪ್, ಬಟಾಣಿ – ¼ ಕಪ್, ಕ್ಯಾರೆಟ್ ತುಂಡು – ¼ ಕಪ್, ಬೀನ್ಸ್  – ¼ ಕಪ್‌, ಬೆಲ್ಲ – ಸಣ್ಣ ತುಂಡು, ಸಾಸಿವೆ – ½ ಚಮಚ, ಚಿಟಿಕೆ ಇಂಗು, ತೆಂಗಿನ ತುರಿ  – ½ ಕಪ್, ನೆನೆಸಿದ ಪುನರ್ಪುಳಿ ಸಿಪ್ಪೆ – 4-5, ಕೆಂಪುಮೆಣಸು – 4-5, ಅರಿಶಿಣಪುಡಿ – ¼ ಚಮಚ, ಕರಿಬೇವು – 1 ಎಸಳು, ಗೋಡಂಬಿ – 4-5, ನೀರು – 1¾ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಸ್ವಲ್ಪ ಕೊತ್ತಂಬರಿಸೊಪ್ಪು, ಎಣ್ಣೆ –2  ಚಮಚ
 

ತಯಾರಿಸುವ ವಿಧಾನ

ತೆಂಗಿನತುರಿ, ಪುನರ್ಪುಳಿ ಸಿಪ್ಪೆಯ ರಸ, ಕೆಂಪುಮೆಣಸು, ಕೊತ್ತಂಬರಿಸೊಪ್ಪು, ಅರಿಶಿಣ, ಇಂಗು, ಸಾಸಿವೆ –ಇಷ್ಟನ್ನು ಸ್ವಲ್ಪ ನೀರನ್ನು ಸೇರಿಸಿ ರುಬ್ಬಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಕರಿಬೇವಿನ ಎಲೆ, ಗೋಡಂಬಿ, ಬಟಾಣಿ, ಕ್ಯಾರೆಟ್, ಬೀನ್ಸ್ ತುಂಡು, ಅರಿಶಿಣ, ಕೆಂಪುಮೆಣಸು ಹಾಕಿ ಸ್ವಲ್ಪ ಹುರಿದು, 5 ನಿಮಿಷ ನೆನೆಸಿ ತೊಳೆದ ಅಕ್ಕಿ, ನೀರು, ಬೆಲ್ಲ, ಉಪ್ಪನ್ನು ಹಾಕಿ 2 ನಿಮಿಷ ಕುದಿಸಿ. ನಂತರ ಕುಕ್ಕರ್‌ನಲ್ಲಿಟ್ಟು 3 ವಿಷಲ್ ಕೂಗಿಸಿ. ತಣಿದ ನಂತರ ಕೊತ್ತಂಬರಿಸೊಪ್ಪನ್ನು ಉದುರಿಸಿ. ಈಗ ಸವಿಯಾದ ಪುನರ್ಪುಳಿ ಬಾತ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT