ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 17–6–1967

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಚೀನದೊಡನೆ ರಾಜತಾಂತ್ರಿಕ ಸಂಬಂಧ ತ್ಯಜಿಸಲು ಒತ್ತಾಯ
ನವದೆಹಲಿ, ಜೂನ್ 16–
ಚೀನದ ರಾಯಭಾರಿ ಕಚೇರಿಯ ನೌಕರನೊಬ್ಬನು ನಿನ್ನೆ ರಾತ್ರಿ ಕೇಂದ್ರ ರಿಸರ್ವ್ ಪೋಲೀಸ್ ಕಾನ್‌ಸ್ಟೇಬಲನೊಬ್ಬನ ಕಪಾಳಕ್ಕೆ ಹೊಡೆದುದರಿಂದ ಕ್ರುದ್ಧರಾದ ಲೋಕಸಭೆಯ ಸದಸ್ಯರು ಚೀನದೊಡನೆ ರಾಜತಾಂತ್ರಿಕ ಸಂಬಂಧವನ್ನು ತ್ಯಜಿಸಬೇಕೆಂದು ಇಂದು ಮತ್ತೆ ಒತ್ತಾಯಪಡಿಸಿದರು. ‘ರಾಷ್ಟ್ರಕ್ಕೆ ಆದ ಈ ಅವಮಾನ’ದ ಬಗ್ಗೆ ಕಾಂಗ್ರೆಸ್ ಸದಸ್ಯರೂ ತಮ್ಮ ಕ್ರೋಧವನ್ನು ವ್ಯಕ್ತಪಡಿಸಿದರು.

ಕಾನೂನಿನ ಕ್ರಮದಿಂದ ತಪ್ಪಿಸಿಕೊಂಡಿರುವ ರಾಯಭಾರ ಕಚೇರಿಯ ಮಾಜಿ ಪ್ರಥಮ ಕಾರ್ಯದರ್ಶಿ ಚೆನ್ ಉ ಚಿಹ್  ಅವರಿಗಾಗಿ ಕಚೇರಿಯ ಗೇಟಿನ ಹೊರಗೆ ಕಚೇರಿಯ ಕಾರನ್ನು ಪರಶ್‌ನಾಥ್ ಎಂಬ ಈ ಕಾನ್‌ಸ್ಟೇಬಲ್ ತಡೆದಾಗ ಈ ಘಟನೆ ನಡೆಯಿತು. ಅವರನ್ನು ಹೊಡೆದ ಚೀನೀಯರ ಮೇಲೆ  ರಾಷ್ಟ್ರದ ಕಾನೂನಿನಂತೆ ಕ್ರಮ ಜರುಗಿಸಬೇಕೆಂದು ಸದಸ್ಯರು ಒತ್ತಾಯಪಡಿಸಿದರು.

ಮಾವೊ ಪ್ರತಿಮೆ ದಹನ
ಮುಂಬೈ, ಜೂನ್ 16–
ಸ್ವತಂತ್ರ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಇಂದು ಸಂಜೆ ಇಲ್ಲಿಯ ಫ್ಲೋರಾ ಫೌಂಟೇನ್‌ನಲ್ಲಿ ಚೀನೀನಾಯಕ ಮಾವೋತ್ಸೆ ತುಂಗ್ ಮತ್ತು ರೆಡ್‌ಗಾರ್ಡ್‌ಗಳ ಪ್ರತಿಮೆಗಳನ್ನು ಸುಟ್ಟು ಹಾಕಿದರು.

‘ಚೀನ, ಪಾಕಿಸ್ತಾನದ ಯತ್ನಗಳನ್ನು ಸರ್ಕಾರ ಗಮನಿಸಿದೆ’
ನವದೆಹಲಿ, ಜೂನ್ 16–
ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಚೀನ ಹಾಗೂ ಪಾಕಿಸ್ತಾನವು ನಡೆಸಿದ ಯತ್ನಗಳನ್ನು ಸರಕಾರ ಪೂರ್ಣವಾಗಿ ಗಮನಿಸಿದೆ ಎಂದೂ, ಅದನ್ನೆದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ರಕ್ಷಣಾ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಲೋಕಸಭೆಗೆ ತಿಳಿಸಿದರು.

ಶಾಲಾ ಪಠ್ಯಪುಸ್ತಕಗಳ ರಾಷ್ಟ್ರೀಕರಣದ ನಿರಾತಂಕ ಪ್ರಗತಿ: ಅರ್ಧ ಕಾರ್ಯ ಪೂರ್ತಿ
ಬೆಂಗಳೂರು, ಜೂ. 16–
ಪ್ರತಿ ವರ್ಷ ಆರು  ಪುಸ್ತಕಗಳಂತೆ, ಶಾಲಾ ಪುಸ್ತಕಗಳ ರಾಷ್ಟ್ರೀಕರಣ ಕಾರ್ಯವು ಮುಂದುವರೆಯುತ್ತಿದೆ. 400 ಪುಸ್ತಕಗಳ ಪೈಕಿ 7ನೇ ತರಗತಿಯವರೆಗಿನ 178 ಪಠ್ಯ ಪುಸ್ತಕಗಳ ರಾಷ್ಟ್ರೀಕರಣ ಇದುವರೆಗೆ ನಡೆದಿದೆ.

ಒಂದೊಂದು ವಿಷಯದ ಮೇಲೆ ನಾಲ್ಕೈದು ಪಠ್ಯಪುಸ್ತಕಗಳನ್ನು ಗೊತ್ತು ಮಾಡಿ, ಈ ಪೈಕಿ ಯಾವುದಾದರೊಂದು ಪುಸ್ತಕವೊಂದನ್ನು ಅಧ್ಯಯನಕ್ಕಾಗಿ ಆಯ್ದುಕೊಳ್ಳುವ ಸಂಬಂಧದಲ್ಲಿ ಈಚೆಗೆ ಮಾಡಲಾಗಿದ್ದ ಸಲಹೆಯನ್ನು ಪ್ರಸ್ತಾಪಿಸಿ ಈ ಸೂಚನೆಯಿಂದ ಪಠ್ಯಪುಸ್ತಕಗಳ ರಾಷ್ಟ್ರೀಕರಣ ಯೋಜನೆಗೆ ಕುಂದು ಬರುವುದೇ ಎಂದು ಕೇಳಿದಾಗ ಶಿಕ್ಷಣ ಇಲಾಖೆಯ ವಕ್ತಾರರೊಬ್ಬರು ‘ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT