ಫಿಫಾ ವಿಶ್ವಕಪ್‌

ಫುಟ್‌ಬಾಲ್‌ ಪಂದ್ಯಗಳ ಭವಿಷ್ಯ ತೋರುವ ಹಿಮಕರಡಿ

2010ರ ಫಿಫಾ ವಿಶ್ವಕಪ್‌  ಪಂದ್ಯಗಳ ಭವಿಷ್ಯ ಸೂಚಿಸಿ ‘ಪೌಲ್‌ ದಿ ಆಕ್ಟೋಪಸ್‌’ ಗಮನ ಸೆಳೆದಿತ್ತು. ಇದೀಗ  ಪಂದ್ಯ ಗೆಲ್ಲಲಿರುವ ತಂಡವನ್ನು ತೋರುವ ಸರದಿ ಹಿಮಕರಡಿಯದ್ದು!

ಮಾಸ್ಕೋ: 2010ರ ಫಿಫಾ ವಿಶ್ವಕಪ್‌  ಪಂದ್ಯಗಳ ಭವಿಷ್ಯ ಸೂಚಿಸಿ ‘ಪೌಲ್‌ ದಿ ಆಕ್ಟೋಪಸ್‌’ ಗಮನ ಸೆಳೆದಿತ್ತು. ಇದೀಗ  ಪಂದ್ಯ ಗೆಲ್ಲಲಿರುವ ತಂಡವನ್ನು ತೋರುವ ಸರದಿ ಹಿಮಕರಡಿಯದ್ದು!

ಪಾದ ಒತ್ತಿ ಅಥವಾ ಚೆಂಡನ್ನು ಎಸೆದು ಪಂದ್ಯ ಗೆಲ್ಲುವ ತಂಡವನ್ನು ಸೂಚಿಸುತ್ತಿರುವ ‘ಹಿಮಕರಡಿ ನಿಕಾ’ ಪುಟ್‌ಬಾಲ್‌ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.

ರಷ್ಯಾದ ಮಾಸ್ಕೋದಿಂದ 100 ಕಿ.ಮೀ. ದೂರದ ಪ್ರಾಣಿಸಂಗ್ರಹಾಲದಲ್ಲಿರುವ ಹಿಮಕರಡಿ ನಿಕಾ 2018ರ ಫಿಫಾ ವಿಶ್ವಕಪ್‌ ಹಾಗೂ 2017ರ ಫಿಫಾ ಕನ್ಫೆಡೆರೇಷನ್ಸ್‌ ಕಪ್‌ ಭವಿಷ್ಯ ತೋರಲಿದೆ ಎನ್ನುತ್ತಾರೆ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು.

ಫುಟ್‌ಬಾಲ್‌ ಪಂದ್ಯಗಳಲ್ಲಿ ಯಾವ ಕ್ಷಣದಲ್ಲಾದರೂ ಫಲಿತಾಂಶ ಬದಲಾಗುವ ಸಾಧ್ಯತೆ ಹೆಚ್ಚು. ಆದರೆ, ನಿಕಾ ಹೆಸರಿನ ಹೆಣ್ಣು ಹಿಮಕರಡಿ ಪಂದ್ಯಕ್ಕೂ ಮುನ್ನವೇ ಫಲಿತಾಂಶ ಹೇಳುತ್ತಿದೆ.

ತಿಂಡಿ ತಿಂದು ಭವಿಷ್ಯ:
ಉಭಯ ತಂಡಗಳ ರಾಷ್ಟ್ರಧ್ವಜ ಅಂಟಿಸಿದ ಬಟ್ಟಲುಗಳಲ್ಲಿ ಹಿಮಕರಡಿಗೆ ನೆಚ್ಚಿನ ತಿನಿಸು ಇಡಲಾಗಿರುತ್ತದೆ. ನಿಕಾ ತಿಂಡಿ ತಿನ್ನುವ ಬಟ್ಟಲಿನಲ್ಲಿ ಯಾವ ತಂಡದ ಧ್ವಜವಿದೆಯೋ ಅದೇ ತಂಡಕ್ಕೆ ಗೆಲುವು. ಪಂದ್ಯಕ್ಕೂ ಮುನ್ನ ಸೂಚಿಸಿರುವ ಭವಿಷ್ಯದ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮಹಿಳೆಯರ ವಿಶ್ವಕಪ್‌: ಇಂಗ್ಲೆಂಡ್‌ ಚಾಂಪಿಯನ್‌

ಭಾರತಕ್ಕೆ ನಿರಾಸೆ
ಮಹಿಳೆಯರ ವಿಶ್ವಕಪ್‌: ಇಂಗ್ಲೆಂಡ್‌ ಚಾಂಪಿಯನ್‌

23 Jul, 2017

ಬ್ಯಾಡ್ಮಿಂಟನ್‌ ಟೂರ್ನಿ
ರಾಹುಲ್‌ಗೆ ಸೋಲು

ರಷ್ಯಾ ಓಪನ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆ ಬಿದ್ದಿದೆ. ರಾಹುಲ್‌ ಯಾದವ್‌ ಮತ್ತು ಡಬಲ್ಸ್‌ ವಿಭಾಗದಲ್ಲಿ ಅರ್ಜುನ್‌ ಹಾಗೂ ರಾಮಚಂದ್ರನ್‌...

23 Jul, 2017
ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌: ಇಂದು ಫೈನಲ್‌

ಭಾರತ- ಇಂಗ್ಲೆಂಡ್ ಮುಖಾಮುಖಿ
ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌: ಇಂದು ಫೈನಲ್‌

23 Jul, 2017

ಬೆಂಗಳೂರು ರೇಸ್‌
‘ಕ್ಯಾಪ್ಟನ್‌ ಮಾರ್ಗನ್‌’ ಗೆಲ್ಲುವ ನಿರೀಕ್ಷೆ

‘ಬೆಂಗಳೂರು ಸೆಂಟ್‌ ಲೆಗರ್‌’ ಭಾನುವಾರದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಕ್ಯಾಪ್ಟನ್‌ ಮಾರ್ಗನ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.

23 Jul, 2017
ಐತಿಹಾಸಿಕ ಕ್ಷಣಕ್ಕೆ ಭಾರತ ಕಾತರ

ನಾಲ್ಕನೇ ಪ್ರಶಸ್ತಿ ಮೇಲೆ ಆಂಗ್ಲರ ಕಣ್ಣು
ಐತಿಹಾಸಿಕ ಕ್ಷಣಕ್ಕೆ ಭಾರತ ಕಾತರ

23 Jul, 2017