ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ಗೆ ‘ಚಿನ್ನು’ ಬರಲಿ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಹಾಡು ಹೇಳಿಕೊಡುವ ಆಸೆ ಇದೆ, ಆದರೆ ಸಮಯ ಇಲ್ಲ ಎಂಬುದು ನಿಮ್ಮ ಚಿಂತೆಯೇ? ಹಾಗಿದ್ದ ಮೇಲೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ‘ಚಿನ್ನು’ ಆ್ಯಪ್‌ ಅಥವಾ ಯುಟ್ಯೂಬ್‌ ಚಾನೆಲ್ (Kannada Rhymes Chinnu) ಇಳಿಯಲೇಬೇಕು.

ಗಾಯಕಿ ಅನುರಾಧಾ ಭಟ್‌ ಜೀವ ತುಂಬಿರುವ ಕನ್ನಡದ ಜನಪ್ರಿಯ ಶಿಶುಪ್ರಾಸಗಳಿಗೆ ಹಾಡುಗಳಿಗೆ ಆ್ಯನಿಮೆಷನ್‌ ಮೂಲಕ ‘ಇನ್‌ಫೋಬೆಲ್ಸ್‌’ ಸಂಸ್ಥೆ ಜೀವ ತುಂಬಿದೆ.

ಚಿನ್ನು ಎನ್ನುವುದು ಆ್ಯಪ್‌ನ ಹೆಸರೂ ಹೌದು, ಆ್ಯನಿಮೇಶನ್‌ಗಳಲ್ಲಿ ಕಾಣಿಸಿಕೊಳ್ಳುವ ಮುದ್ದು ಪುಟಾಣಿ ಹೆಣ್ಣುಮಗಳ ಹೆಸರೂ ಹೌದು. ಈ ಹುಡುಗಿ ‘ಅಪ್ಪು’ ಎನ್ನುವ ನಾಯಿಮರಿಯೊಂದಿಗೆ ಆಟವಾಡುತ್ತಾ, ಮಾತನಾಡುತ್ತಾ, ಹಾಡುತ್ತಾ ನಲಿಯುತ್ತಾಳೆ.

ಆನೆ ಬಂತು ಆನೆ, ಚಂದಮಾಮ ಓಡಿ ಬಾ, ರೊಟ್ಟಿ ಅಂಗಡಿ, ಇಲಿ ಮರಿ ಸೇರಿದಂತೆ ನೂರಾರು ಮಕ್ಕಳ ಹಾಡುಗಳು ಇಲ್ಲಿವೆ. ಆ್ಯಪ್‌ನಲ್ಲಿ ಎರಡು ಹಾಡುಗಳನ್ನು ಮಾತ್ರ ಉಚಿತವಾಗಿ ಕೇಳಲು ಅವಕಾಶ ನೀಡಿದ್ದಾರೆ. ಉಳಿದದ್ದಕ್ಕೆ ₨55 ತೆತ್ತು ಖರೀದಿಸಬೇಕು.

ಯುಟ್ಯೂಬ್‌ ಚಾನೆಲ್‌ನಲ್ಲಿ ಶಿಶುಪ್ರಾಸಗಳೊಂದಿಗೆ ಗೋವಿನಹಾಡು (ಧರಣಿ ಮಂಡಲ ಮಧ್ಯದೊಳಗೆ), ಮಕ್ಕಳ ಜಾನಪದ ಗೀತೆಗಳು, ಪಂಚತಂತ್ರದ ಕಥೆಗಳೂ ಉಚಿತವಾಗಿ ಲಭ್ಯ.

ಇನ್‌ಫೊಬೆಲ್‌ ಸಂಸ್ಥೆಯ ನಿರ್ಮಾಣದಲ್ಲಿ ದಾಖಲೆ ಬರೆದಿರುವುದು ‘ಗೋವಿನಹಾಡು’. ಈವರೆಗೆ ಈ ಹಾಡನ್ನು ಯುಟ್ಯೂಬ್‌ನಲ್ಲಿ 75 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಯುಟ್ಯೂಬ್‌ ಮೂಲಕ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಿಮಗೂ ನೋಡುವ ಆಸಕ್ತಿಯಿದ್ದರೆ ಯುಟ್ಯೂಬ್‌ನಲ್ಲಿ infobells - Kannada ಎಂದು ಹುಡುಕಿ ಅಥವಾ ಕ್ಯುಆರ್‌ ಕೋಡ್ ಸ್ಕ್ಯಾನ್ ಮಾಡಿ.

‘ವಿಡಿಯೊ’ ನೋಡಲು ಕೋಡ್‌ ಸ್ಕ್ಯಾನ್‌ ಮಾಡಿ: http://bit.ly/2sJS9O5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT