ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಭಾರತದ ಸಿನಿಮಾಗಳ ಕಂಪು

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ ಮತ್ತು ಭಾರತದ ದ್ವಿಪಕ್ಷೀಯ ಬಾಂಧವ್ಯವು 70 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಗಾಗಿ, 39ನೇ ಮಾಸ್ಕೊ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ  ಇದೇ ಮೊದಲ ಬಾರಿ ‘ಇಂಡಿಯನ್ ಪನೋರಮಾ’ ವಿಭಾಗವನ್ನು ಪರಿಚಯಿಸಲಾಗುತ್ತಿದೆ.

ಕನ್ನಡದ ಪವನ್ ಕುಮಾರ್ ನಿರ್ದೇಶನದ ‘ಯು ಟರ್ನ್’ ಚಿತ್ರವೂ ಪನೋರಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

‘ಭಾರತ ಮತ್ತು ರಷ್ಯಾದ ಸುದೀರ್ಘ ಬಾಂಧವ್ಯವನ್ನು ಸಂಭ್ರಮಿಸಲು ರಾಜತಾಂತ್ರಿಕ ಸಂಬಂಧದ ಹೊರತಾಗಿಯೂ ಇದೊಂದು ವಿಶೇಷ ಮಾರ್ಗ’ ಎಂದು ಭಾರತದಲ್ಲಿ ರಷ್ಯಾ ಒಕ್ಕೂಟದ ಉಪ ರಾಯಭಾರಿ ಆಗಿರುವ ಆಂಟೊನಿ ವಿ. ಕರ್ಗೋಪೊಲೋವ್ ಹೇಳಿದ್ದಾರೆ. ರಷ್ಯಾ ಒಕ್ಕೂಟದ ಸಾಂಸ್ಕೃತಿಕ ಸಚಿವಾಲಯ ಆಯೋಜಿಸುವ ಚಿತ್ರೋತ್ಸವವು ಇದೇ 22ರಿಂದ 29ರವರೆಗೆ ನಡೆಯಲಿದೆ. ಗುಲ್ಷನ್ ಗ್ರೋವರ್ ನಟಿಸಿದ ‘ಬ್ಯಾಡ್‌ಮ್ಯಾನ್’ ಚಿತ್ರ ಪ್ರದರ್ಶನದೊಂದಿಗೆ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ.

‘ಭಾರತದ ಪ್ರತಿಭಾವಂತ ಸಿನಿಕರ್ತರು ತಯಾರಿಸಿದ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸುವ ಅವಕಾಶ ರಷ್ಯಾದ ಚಿತ್ರರಸಿಕರಿಗೆ ಸಿಗಲಿದೆ. ಇದು ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲು ಸಹಕಾರಿ’ ಎಂದು ಗುಲ್ಷನ್ ಗ್ರೋವರ್ ಹೇಳಿದ್ದಾರೆ. ಗುಲ್ಷನ್ ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಭಾರತದ ವಿವಿಧ ಪ್ರಾದೇಶಿಕ ಭಾಷೆಗಳನ್ನು ಪ್ರತಿನಿಧಿಸುವ ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಇವು ಮಾಸ್ಕೊದಲ್ಲಿ ಭಾರತದ ಕಂಪನ್ನು ಹರಡಲಿವೆ’ ಎಂದು ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರತೀಯ ಚಿತ್ರೋತ್ಸವಗಳನ್ನು ಆಯೋಜಿಸುವ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ವರ್ಲ್ಡ್ ವೈಡ್’ನ ಸಹ ಮೇಲ್ವಿಚಾರಕ ರಾಹುಲ್ ಬಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT