ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಜೀಪ್ ಕಂಪೆನಿ ತನ್ನ ಕಂಪಾಸ್ ಸರಣಿ ಎಸ್‌ಯುವಿಗಳನ್ನು ಪರಿಚಯಿಸುವ ತಯಾರಿಯಲ್ಲಿದೆ. ಕೆಲವೇ ದಿನಗಳ ಹಿಂದೆ ಈ ಕಂಪೆನಿ, ಭಾರತದಲ್ಲಿ ಎಸ್‌ಯುವಿ ತಯಾರಿಕೆಯನ್ನು ಆರಂಭಿಸಿದ್ದು, ಮೊದಲ ಮೇಡ್ ಇನ್ ಇಂಡಿಯಾ ಮಾದರಿಯನ್ನು ಇದೇ ಆಗಸ್ಟ್‌ಗೆ ಹೊರತರುವುದಾಗಿ ಹೇಳಿದೆ.

ಜೀಪ್ ಕಂಪಾಸ್ ಸ್ಪೋರ್ಟ್ಸ್‌, ಜೀಪ್ ಲಾಂಗಿಟ್ಯೂಡ್, ಜೀಪ್ ಲಾಂಗಿಟ್ಯೂಡ್ (o), ಜೀಪ್ ಕಂಪಾಸ್ ಲಿಮಿಟೆಡ್, ಜೀಪ್ ಕಂಪಾಸ್ ಲಿಮಿಟೆಡ್ (o) ಎಂಬ ಐದು ಮಾದರಿಗಳನ್ನು ಕಂಪಾಸ್ ಸರಣಿಯಲ್ಲಿ ಬಿಡುಗಡೆಗೊಳಿಸಲಾಗುವುದು.

ಇವುಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಫೋರ್ ವೀಲ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಟ್ರ್ಯಾಕ್ಷನ್‌ ಕಂಟ್ರೋಲ್‌, ಪಾರ್ಕಿಂಗ್ ಸೆನ್ಸರ್‌ ಹಾಗೂ ಡ್ಯುಯಲ್ ಟೋನ್ ಇಂಟೀರಿಯರ್ ಹೀಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇವುಗಳ ಬೆಲೆ ₹ 18 ಲಕ್ಷದಿಂದ ಆರಂಭಗೊಂಡು ₹ 25 ಲಕ್ಷದವರೆಗೂ ಇದೆ.

***


ಡುಕಾಟಿ ಮಾನ್ಸ್‌ಟರ್ –797 ಬಿಡುಗಡೆಗೆ ಸಿದ್ಧ
ಬೈಕ್ ತಯಾರಕ ಡುಕಾಟಿ ಕಂಪೆನಿ, ತನ್ನ ಪ್ರವೇಶ ಹಂತದ ಸ್ಪೋರ್ಟ್ಸ್‌ ಬೈಕ್  ‘ಡುಕಾಟಿ ಮಾನ್ಸ್‌ಟರ್ –797’ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಬೈಕ್‌ನಲ್ಲಿ ಮೂಲ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು, ಅದಕ್ಕೆ ಕೆಲವು ಆಧುನಿಕ ಅಂಶಗಳನ್ನು ಅಳವಡಿಸಲಾಗಿದೆ. ದೊಡ್ಡ ಹ್ಯಾಂಡಲ್‌ಬಾರ್, ಟ್ಯಾಂಕ್ ಟ್ರೆಲ್ಲಿಸ್ ಫ್ರೇಮ್, ಎರಡೂ ಬದಿ ಸ್ವಿಂಗ್ ಆರ್ಮ್‌, ಬೈಕ್‌ನ ಇಡೀ ದೇಹಕ್ಕೆ ನೀಡಿರುವ ಮಸ್ಕ್ಯುಲರ್ ಲೈನ್‌ ಇವೆಲ್ಲದರಿಂದ ಬೈಕ್‌ ಸ್ಪೋರ್ಟಿ ಲುಕ್‌ ಪಡೆದುಕೊಂಡಿದೆ. ಎಲ್‌ಇಡಿ ಪೊಸಿಷನ್‌ ಲೈಟ್‌ಗಳು, ಸರ್ಕ್ಯುಲರ್ ಹೆಡ್‌ಲೈಟ್‌ಗಳು ಕ್ಲಾಸಿಕ್‌ ಲುಕ್ ತಂದುಕೊಟ್ಟಿವೆ.

43 ಎಂಎಂ ಫ್ರಂಟ್‌ ಫೋರ್ಕ್‌ ಇದರಲ್ಲಿದೆ. ಬೈಕ್‌ನ ವೀಲ್‌ಬೇಸ್ 1435ಎಂಎಂ ಇದ್ದು, ಎಲ್‌ ಟ್ವಿನ್ ಸಿಲಿಂಡರ್, ಏರ್‌ಕೂಲ್ಡ್ ಎಂಜಿನ್ 803ಸಿಸಿ ಡಿಸ್‌ಪ್ಲೇಸ್‌ಮೆಂಟ್‌ ನೀಡಲಾಗಿದೆ. ಎಂಜಿನ್, 75ಎಚ್‌ಪಿ ಹಾಗೂ 68ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸಲಿದೆ. ಡುಕಾಟಿ 2 ಇನ್ 1 ಎಕ್ಸ್‌ಹಾಸ್ಟ್ ಇದ್ದು, ಹೆಚ್ಚು ಶಾಖ ಉತ್ಪತ್ತಿ ತಡೆಗೆ ನೆರವಾಗಲಿದೆ. ಇದೇ ಜುಲೈನಲ್ಲಿ ಬೈಕ್ ಬಿಡುಗಡೆಯಾಗುವ ಸೂಚನೆ ನೀಡಿದೆ. ಇದರ ಬೆಲೆ ₹7.77 ಲಕ್ಷ (ಎಕ್ಸ್‌ಶೋ ರೂಂ ದೆಹಲಿ).

*


ಕ್ಲೆವೆಲೆಂಡ್ ಸೈಕಲ್ ವರ್ಕ್ಸ್‌ನಿಂದ ಮೋಟಾರು ಸೈಕಲ್ 
ಅಮೆರಿಕದ ಮೋಟಾರ್ ಸೈಕಲ್ ತಯಾರಕ ಕಂಪೆನಿ ಕ್ಲೆವೆಲೆಂಡ್ (ಸಿಸಿಡಬ್ಲ್ಯು), ಇದೇ ಸೆಪ್ಟೆಂಬರ್‌ಗೆ ಭಾರತೀಯ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಹೈದರಾಬಾದ್‌ನ ಲಾಯಿಶ್ ಮ್ಯಾಡಿಸನ್ ಮೋಟಾರ್ ವರ್ಕ್ಸ್‌ನ ಸಹಭಾಗಿತ್ವದಲ್ಲಿ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಲಿದೆ. ಇತ್ತೀಚಿನ ನೂತನ ಐದು ಮಾದರಿಗಳಲ್ಲಿ ಮೂರನ್ನು ಭಾರತಕ್ಕೆ ಪರಿಚಯಿಸಲಾಗುವುದು.

ಮಿಸ್‌ಫಿಟ್-ಕೆಫೆ ರೇಸರ್, ಎಫ್‌ಎಕ್ಸ್ ಆರ್-ಡರ್ಟ್ ಮೋಟಾರ್‌ ಸೈಕಲ್, ಏಸ್-ಕಮ್ಯೂಟರ್ ಮಾದರಿಯನ್ನು ಇಲ್ಲಿ ಪರಿಚಯಿಸಲಿದೆ. ಕಮ್ಯೂಟರ್ ಮೋಟಾರು ಸೈಕಲ್ ಮಾರುಕಟ್ಟೆಯಲ್ಲಿ ಭಾರತ ಮುಂದಿರುವುದನ್ನು ಪರಿಗಣಿಸಿ ಏಸ್ ಮಾದರಿಯನ್ನು ಮೊದಲು  ಬಿಡುಗಡೆಗೊಳಿಸುವುದಾಗಿ ಕಂಪೆನಿ ತಿಳಿಸಿದೆ. ಏಸ್‌ಗೆ 230 ಸಿಸಿ ಎಂಜಿನ್ ಇದ್ದು, 14.8 ಬಿಎಚ್‌ಪಿ ಹಾಗೂ 15.8 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT