ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ ಕಲೆಯ ಝಲಕ್

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಅನಾದಿ ಕಾಲದಿಂದಲೂ ಸಮರ ಕಲೆಗೆ ಗೌರವ. ಶಿಸ್ತು, ಸಮಯಪ್ರಜ್ಞೆ, ಚಾತುರ್ಯ ಬಯಸುವ ಈ ಯುದ್ಧ ಕಲೆಯನ್ನು ಸಿಖ್ಖರು ‘ಗಟ್ಕಾ’ ಎಂದು ಕರೆಯುತ್ತಾರೆ. ಸಿಖ್ಖರ ಗುರು ‘ಗುರು ಗೋವಿಂದ ಸಿಂಗ್ ಪ್ರಕಾಶ ಪರ್ವ್’ ಅವರ 350ನೇ ಜನ್ಮ ದಿನದ ಅಂಗವಾಗಿ ಅಹಮದಾಬಾದ್‌ನಲ್ಲಿ ಯುವತಿಯೊಬ್ಬಳು ಸಮರ ಕಲೆ ಕರಾಮತ್ತು ತೋರಿದ್ದು ಹೀಗೆ...

*


ಫ್ರಾನ್ಸ್‌ನಲ್ಲಿ ಕಳೆದ ವಾರ ‘ರೊಮ್ಯಾಂಟಿಕ್‌ ಫಿಲಂ ಫೆಸ್ಟಿವಲ್‌’ ನಡೆಯಿತು. ನಟಿ ಫನ್ನಿ ವ್ಯಾಲೆಟ್‌ ತುಸು ರೊಮ್ಯಾಂಟಿಕ್‌ ಗೆಟಪ್‌ನಲ್ಲೇ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಬಂದರು. ಕ್ಯಾಮೆರಾ ಕಣ್ಣುಗಳೆಲ್ಲ ಅವರತ್ತ ನೆಟ್ಟಾಗ ಫನ್ನಿ ತಲೆಗೂದಲಿನಲ್ಲಿ ಬೆರಳು ಆಡಿಸತೊಡಗಿದರು. ಆ ಕ್ಷಣದಲ್ಲಿ ಕ್ಯಾಮೆರಾಗಳು ಕಣ್ಣು ಮಿಟುಕಿಸಿ, ಮಿಟುಕಿಸಿ ಸುಸ್ತು ಹೊಡೆದವಂತೆ!

*


ನಿನ್ನ ನೋಟದಲ್ಲಿ...
ಇಂಡೋನೇಷ್ಯಾದ ಬಾಲಿಯಲ್ಲಿ ಇದೀಗ ಕಲೋತ್ಸವ. ಈ ಕಲೋತ್ಸವಕ್ಕೆ  ರಂಗು ತುಂಬಲೆಂದೇ ಸಜ್ಜಾಗಿ ಕುಳಿತ ತರುಣಿಯರಿವರು. ಮುಖದಲ್ಲಿ ನಗುವೆಂಬ ಮಾಸದ ಬಣ್ಣ ಹೊತ್ತು ಕಣ್ಣ ತುಂಬಾ ಸಡಗರವನ್ನು ತುಂಬಿಕೊಂಡ ಈ  ಯುವತಿಯರು ಪೆರೇಡ್‌ಗೆ ಕಾಯುತ್ತಾ ಕುಳಿತು ತಮ್ಮದೇ ಲೋಕದಲ್ಲಿ ಮುಳುಗಿದ್ದು ಹೀಗೆ. ತಿಂಗಳಿಡೀ ನಡೆಯುವ ಈ ಉತ್ಸವ ಕಳೆದ ವಾರವಷ್ಟೇ ಆರಂಭಗೊಂಡಿದೆ.

*


ಎಲ್‌ ಕೊಲಾಚೊ
‘ಎಲ್‌ ಕೊಲಾಚೊ’ ಇದು ಬೇಬಿ ಜಂಪಿಂಗ್ ಫೆಸ್ಟಿವಲ್ ಎಂದೇ ಪ್ರಸಿದ್ಧಿ. ಸ್ಪೇನ್‌ನ ಬರ್ಗೋಸ್‌ ಎಂಬಲ್ಲಿ 1620ರಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಉತ್ಸವ ಇದು. ಭೂತದಂತೆ ವೇಷ ತೊಟ್ಟ ವ್ಯಕ್ತಿಯೊಬ್ಬ ಮಕ್ಕಳನ್ನು ಹಾದು ಜಿಗಿಯುವುದು ಈ ಪದ್ಧತಿಯ ಮೂಲ. ಒಂದು ವರ್ಷದ ಮಕ್ಕಳನ್ನು ಬೀದಿಯಲ್ಲಿ ಮಲಗಿಸಿ ಅವರ ಮೇಲೆ ಹಾರುವುದು ಪದ್ಧತಿ...

*

.
ರಥ ಎಳೆಯುವ ಪಾತರಗಿತ್ತಿ
‘ಬದಲಾವಣೆಯೇ ಜಗದ ನಿಯಮ’ ಎಂದು ಸಾರುತ್ತಾ ಕಾಲ ಪ್ರತಿಕ್ಷಣವೂ ಬದಲಾಗುತ್ತಿರುವಾಗ ಅದೇ ಹಳೆಯ ವಾಚನ್ನು ಎಷ್ಟು ದಿನಗಳವರೆಗೆ ನಾವು ಕೈಗೆ ಕಟ್ಟಬೇಕು ಎಂದು ಪ್ರಶ್ನಿಸುತ್ತದೆ ಯುವಪೀಳಿಗೆ. ಯುವಮನಗಳ ಈ ಪ್ರಶ್ನೆಯನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ವಾಚ್‌ ಕಂಪೆನಿಗಳು ಪ್ರತಿವರ್ಷವೂ ಹೊಸ ಹೊಸ ವಿನ್ಯಾಸದ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಹೆಚ್ಚು ಸಂಕೀರ್ಣವೇ ಹೊಸ ಫ್ಯಾಷನ್‌ ಎನಿಸಿರುವ ಈ ಸಂದರ್ಭದಲ್ಲಿ ಅಂತಹ ಕೆಲವು ಹೊಸ ವಾಚ್‌ಗಳ ಪರಿಚಯ ಇಲ್ಲಿದೆ:

ರೆಕ್ಕೆಯ ಕೌತುಕ ಜಾಕ್ವೆಟ್‌ ಡ್ರೋಜ್‌ ಬಟರ್‌ಫ್ಲೈ
ಸ್ವತಃ ಹೆನ್ರಿ ಲೂಯಿಸ್‌ ಜಾಕ್ವೆಟ್‌ ಡ್ರೋಜ್‌ ಅವರು 242 ವರ್ಷಗಳ ಹಿಂದೆ ರೇಖಾಚಿತ್ರದಲ್ಲಿ ಅರಳಿಸಿದ್ದ ಮಾದರಿಯನ್ನು ಆಧಾರವಾಗಿ ಇಟ್ಟುಕೊಂಡು ಈ ವಾಚನ್ನು ವಿನ್ಯಾಸ ಮಾಡಲಾಗಿದೆ. ಬಂಗಾರದಿಂದ ತಯಾರಿಸಿದ 40 ಸಲಕರಣೆಗಳು ಇದರಲ್ಲಿವೆ. ಬಟನ್‌ ಅದುಮಿದರೆ ಸಾಕು, ಜೀವ ತಳೆಯುವ ಪಾತರಗಿತ್ತಿ, ರಥವನ್ನು ಎಳೆಯುತ್ತಾ ಸಾಗುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳುವಾಗ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲವಂತೆ. ಈ ವಾಚ್‌ನ ಬೆಲೆ ₹ 81,53,460ರಿಂದ ಶುರುವಾಗುತ್ತದೆ.

ಸ್ಫಟಿಕದಷ್ಟು ಸ್ಫುಟ
ಹ್ಯೂಬ್ಲೆಟ್‌ ಎಂ.ಪಿ–09 ಟರ್ಬಿಲನ್‌ ಬಿ–ಆ್ಯಕ್ಸಿಸ್‌ ಹ್ಯೂಬ್ಲೆಟ್‌ ಕಂಪೆನಿ ಈ ವಾಚನ್ನು ಹೇಗೆ ವಿನ್ಯಾಸ ಮಾಡಿದೆ ಎಂದರೆ ವಾಚ್‌ನ ಯಂತ್ರದೊಳಗಿನ ಪ್ರತಿಯೊಂದು ಚಲನೆಯೂ ವೀಕ್ಷಣೆಗೆ ದಕ್ಕುತ್ತದೆ. ಯಾವ ಕೋನದಿಂದ ಬೇಕಾದರೂ ಯಂತ್ರದೊಳಗಿನ ಚಲನೆಯನ್ನು ನೋಡಲು ಸಾಧ್ಯ; ಅದೂ ಸ್ಫಟಿಕದಷ್ಟು ಸ್ಫುಟವಾಗಿ! ಅಂದಹಾಗೆ, ಈ ಸರಣಿಯ ವಾಚ್‌ ಬೆಲೆ
₹1,09,36,412ರಿಂದ ಶುರುವಾಗುತ್ತದೆ!

*

ಬಲು ಸಂಕೀರ್ಣ ಪೋರ್‌ ಲ ಮೆರಿಟ್‌
ವಾಚ್‌ ತಯಾರಿಕಾ ದೈತ್ಯ ಕಂಪೆನಿಗಳಲ್ಲಿ ಒಂದಾದ ಲಾಂಜ್‌ ಅಂಡ್‌ ಶಾನ್ಸ್‌ನಿಂದ ಬಿಡುಗಡೆ ಮಾಡಲಾದ ಹೊಸ ವಾಚ್‌ ಪೋರ್‌ ಲ ಮೆರಿಟ್‌. 2005ರಲ್ಲಿ ವಿನ್ಯಾಸ ಮಾಡಲಾಗಿದ್ದ ವಾಚ್‌ನ ಸುಧಾರಿತ ಮಾದರಿ ಇದಾಗಿದೆ. ಈ ಕಾಲದ ಅತ್ಯಂತ ಸಂಕೀರ್ಣ ವಾಚ್‌ ಇದಾಗಿದೆ ಎಂದು ಹೆಸರಾಗಿದೆ. ಅರೆಬಿಕ್‌ ಅಂಕಿಗಳನ್ನು ಈ ವಾಚ್‌ನಲ್ಲಿ ಬಳಕೆ ಮಾಡಲಾಗಿದೆ. ಈ ವಾಚ್‌ ಸರಣಿಯ ಬೆಲೆ ₹ 3,28,72,680 ಶುರುವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT