ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗಳು ಮದುವೆಯಾಗಲಿ’

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬಹುಭಾಷಾ ನಟಿ ಶ್ರೀದೇವಿ ಅವರಿಗೆ ತಮ್ಮ ಮಗಳು ಜಾಹ್ನವಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮದುವೆಯಾಗಿ ‘ಸೆಟ್ಲ್‌’ ಆದರೆ ಹೆಚ್ಚು ಸಂತೋಷವಂತೆ. ಜಾಹ್ನವಿ ನಾಯಕಿಯಾಗಿ ನಟಿಸುತ್ತಿರುವ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಬಗೆಗೆ ಕೇಳಲಾದ ಪ್ರಶ್ನೆಗೆ ಶ್ರೀದೇವಿ ಈ ಉತ್ತರ ನೀಡಿದ್ದಾರೆ.

‘ಚಿತ್ರರಂಗ ಕೆಟ್ಟ ಕ್ಷೇತ್ರವೇನು ಅಲ್ಲ, ನಾನು ಈ ರಂಗದಿಂದಲೇ ಬೆಳಕಿಗೆ ಬಂದವಳು ಆದರೆ ತಾಯಿಯಾಗಿ ಮಗಳ ಜೀವನ ಸುಖಮಯವಾಗಿರುವುದನ್ನು ನೋಡುವುದೇ ಖುಷಿ’ ಎನ್ನುವ ಮೂಲಕ ತಾವು ಉತ್ತಮ ತಾಯಿ ಎಂಬುದನ್ನು ಸೂಚ್ಯಗೊಳಿಸಿದ್ದಾರೆ.

ತಾವು, ಮಗಳ ನಟಿಸುವ ನಿರ್ಣಯದ ಪರವಾಗಿಲ್ಲದಿದ್ದರೂ ಆಕೆಯ ಆಸೆಗೆ ಅಡ್ಡಿಬರಬಾರದೆಂದು ಶ್ರೀದೇವಿ ಅವರು ಜಾಹ್ನವಿ ಅವರ ಸಿನಿಮಾ ಪಯಣಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದಾರಂತೆ.

ಮಗಳ ಸಿನಿ ಬದುಕಿಗೆ ಶುಭ ಹಾರೈಸಿರುವ ಅವರು ‘ಆಕೆ ನಟಿಯಾಗಿ ಉತ್ತಮ ಕೆಲಸ ಮಾಡಿದರೆ ನನಗೆ ಹೆಮ್ಮೆಯಾಗುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT