ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ನಲ್ಲಿ ಮದುವೆ ವಯೋಮಿತಿ 18ಕ್ಕೆ ಏರಿಕೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ :  ಮದುವೆಯಾಗಲು ನಿಗದಿಪಡಿಸಿದ್ದ ವಯೋಮಿತಿಯನ್ನು ನ್ಯೂಯಾರ್ಕ್‌ ಸರ್ಕಾರ 14 ರಿಂದ 18 ವರ್ಷಕ್ಕೆ ಏರಿಸಿದೆ.
ಈ ಕುರಿತ ಮಸೂದೆಗೆ  ಗವರ್ನರ್‌ ಆ್ಯಂಡ್ರೀವ್‌ ಕ್ಯೂಮೊ ಅವರು ಮಂಗಳವಾರ ಒಪ್ಪಿಗೆ ನೀಡಿದ್ದಾರೆ.

ಒಂದು ವೇಳೆ 17 ವರ್ಷದವರು ಮದುವೆಯಾಗಲು ಬಯಸಿದಲ್ಲಿ ತಮ್ಮ ಪೋಷಕರು ಮತ್ತು ನ್ಯಾಯಧೀಶರಿಂದ ಅನುಮತಿ ಪಡೆಯುವುದು ಕಡ್ಡಾಯ.
‘ಮಕ್ಕಳನ್ನು ರಕ್ಷಿಸಲು ಮತ್ತು ಒತ್ತಾಯಪೂರ್ವಕ ಮದುವೆಗಳನ್ನು ತಡೆಯಲು ಇದು ಬಹು ಮುಖ್ಯವಾದ ಕ್ರಮ. ಬಾಲ್ಯ ವಿವಾಹವನ್ನು ಅಂತ್ಯಗೊಳಿಸುವ ಹೊಸ  ಮಸೂದೆಗೆ ಸಹಿ ಹಾಕಿರುವುದು ಹೆಮ್ಮೆಯ ಸಂಗತಿ’ ಎಂದು ಆ್ಯಂಡ್ರೀವ್‌ ತಿಳಿಸಿದ್ದಾರೆ.

ಹೊಸ ಕಾನೂನು ಅಮೆರಿಕದ ಇತರೆ ರಾಜ್ಯಗಳಿಗೆ ಮಾದರಿ. ಎಲ್ಲ ರಾಜ್ಯಗಳು ಈ ಕಾನೂನನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು ಎಂದು ಮಹಿಳಾ ಹಕ್ಕುಗಳ ಹಿರಿಯ ಸಂಶೋಧಕಿ ಹೀಥರ್‌ ಬರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT