ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸರಣಿಗೂ ಮುನ್ನ ನೂತನ ಕೋಚ್: ಶುಕ್ಲಾ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ಶ್ರೀಲಂಕಾ ಎದುರು ನಡೆಯಲಿರುವ ಸರಣಿಗೂ ಮುನ್ನ ಭಾರತ ತಂಡಕ್ಕೆ ನೂತನ ಕೋಚ್ ನೇಮಕ ಮಾಡಲಾಗುವುದು. 2019ರ ವಿಶ್ವಕಪ್ ಟೂರ್ನಿಯವರೆಗೂ ಅವರನ್ನು ನೇಮಿಸಲಾಗುವುದು ಎಂದು ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಹೇಳಿದ್ದಾರೆ.

‘ಕೊಹ್ಲಿ ಮತ್ತು ಕುಂಬ್ಳೆ ನಡುವಣ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಬಿಸಿಸಿಐ ಬಹಳಷ್ಟು ಪ್ರಯತ್ನಿಸಿತು. ಮಂಡಳಿಯ ಹಂಗಾಮಿ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯು ಕುಂಬ್ಳೆ ಮತ್ತು ಕೊಹ್ಲಿ ಅವರೊಂದಿಗೆ ವಿವರವಾಗಿ ಮಾತುಕತೆ ನಡೆಸಿದರು. ಈ ವಿಷಯದ ಕುರಿತು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಅವರೊಂದಿಗೂ ಮಂಡಳಿ ಚರ್ಚಿಸಿತ್ತು. ಆದರೆ ಸಮಸ್ಯೆ ಬಗೆಹರಿಯದ ಕಾರಣ ಕುಂಬ್ಳೆ ಅವರು ರಾಜೀನಾಮೆ ನೀಡುವ ನಿರ್ಧಾರ ಮಾಡಿದರು’ ಎಂದು ಶುಕ್ಲಾ ಹೇಳಿದರು.

‘ಕುಂಬ್ಳೆ ಕೋಚ್ ಆಗಿ ಮುಂದುವರಿಯಲು ಕೊಹ್ಲಿ ಅವರೊಬ್ಬರೇ ಆಕ್ಷೇಪ ವ್ಯಕ್ತಪಡಿಸಿದ್ದರೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವುಗಳೆಲ್ಲವೂ ಊಹಾಪೋಹಗಳು ಮಾತ್ರ’ ಎಂದರು.

‘ತಂಡದಲ್ಲಿ ನಾಯಕನಿಗಷ್ಟೆ ಆದ್ಯತೆ ಕೊಟ್ಟಿಲ್ಲ. ಎಲ್ಲರಿಗೂ ಸಮಾನ ಗೌರವ ನೀಡಿದ್ದೇವೆ.  ಕೆಲವು ಬಾರಿ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಎಲ್ಲರೂ ಮನುಷ್ಯರೇ ಅಲ್ಲವೇ?’ ಎಂದು ಶುಕ್ಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT