ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಸೂಕ್ತವಲ್ಲ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

‘ಇಂಗ್ಲೆಂಡಿನಲ್ಲಿ ರಾಣಿ ಇಲ್ಲವೇ?’ (ವಾ.ವಾ. ಜೂನ್ 21)ಎಂದು ಪ್ರಶ್ನಿಸಿದ ಉಡುಪಿ ಅನಂತೇಶ ರಾವ್‌ ಅವರು  ಈ ಪರಂಪರೆ ಉಳಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಹಳೇ ಮೈಸೂರು ಪ್ರಾಂತದವರಿಗೆ ಹಿಂದಿನ ಅರಸರುಗಳ ಬಗ್ಗೆ ಉತ್ಕಟ ಅಭಿಮಾನವಿರುವುದು ಸಮರ್ಥನೀಯ. ನಾಡಿನ ಈ ಭಾಗದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ನಾಲ್ವಡಿಯವರಂಥ ಅರಸರು ಮತ್ತು ಅವರ  ವಿಶಾಲಹೃದಯದ  ದಿವಾನರುಗಳ ಕೊಡುಗೆ ಅಪಾರ. ಆದರೆ ಅವರ ‘ಮನೆತನ’ ಇಂದಿಗೆ ಪ್ರಸ್ತುತವಲ್ಲ.

ಯುನೈಟೆಡ್ ಕಿಂಗ್‌ಡಂನಲ್ಲಾದರೋ ಅರಸೊತ್ತಿಗೆ ಪ್ರಸ್ತುತ. ಇತರ ಎಲ್ಲ ವಿಚಾರಗಳಲ್ಲಿ ಬ್ರಿಟಿಷ್ ಸಂವಿಧಾನ ಭಾರತ ಸಂವಿಧಾನಕ್ಕೆ ಮಾದರಿಯಾದರೂ, ಅರಸೊತ್ತಿಗೆ ವಿಚಾರದಲ್ಲಿ ಅಲ್ಲ. ಪ್ರಪಂಚದ ಸಂಸದೀಯ ಪ್ರಜಾಸತ್ತೆಗೇ ‘ರಾಣಿ’ ಎನಿಸಿಕೊಳ್ಳುವ ಬ್ರಿಟಿಷ್ ಸಂವಿಧಾನದಲ್ಲಿ ಪರಂಪರಾನುಗತ ರಾಣಿ ಅಥವಾ ರಾಜ, ರಾಷ್ಟ್ರದ ಪ್ರತಿಷ್ಠೆಯ ಸಂಕೇತವಾಗಿ ಉಳಿದಿರುವುದು ನಮಗೆ ವಿಪರ್ಯಾಸ.

ವಂಶಪಾರಂಪರ್ಯವಾಗಿ ಅಲ್ಲಿನ ರಾಣಿ, ರಾಜ ನಿರ್ವವಹಿಸುವ ಪ್ರತಿಷ್ಠಿತ ಗೌರವ, ಸ್ಥಾನ-ಮಾನಗಳನ್ನು, ನಮ್ಮ ಸಂವಿಧಾನ ಚುನಾಯಿತ ರಾಷ್ಟ್ರಪತಿಗೆ ಕೊಟ್ಟಿದೆ. ಅಲ್ಲಾದರೆ ಬ್ರಿಟಿಷ್ ಮಹಾದ್ವೀಪ ಮತ್ತು ಈಶಾನ್ಯ ಐರ್ಲೆಂಡ್ ಎಂಬ ಎರಡೇ ರಾಜ್ಯಗಳು. ಇಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಒಂದು ನೂರಕ್ಕೂ ಹೆಚ್ಚು ರಾಜರು, ರಾಜಕುಮಾರರು! ಈ ವಂಶದ ಕುಡಿಗಳನ್ನು ರಾಷ್ಟ್ರಪತಿಗೆ ಹೋಲಿಸುವುದು ವಿಸಂಗತವೆನಿಸದೇ?
-ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT