ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 22–6–1967

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

‘ಭಾರತ ಅಣ್ವಸ್ತ್ರ ರಾಷ್ಟ್ರವಾಗದು’
* ಚೀನಿ ಹೈಡ್ರೊಜನ್ ಬಾಂಬ್ ಸ್ಫೋಟ ಕುರಿತು ಸ್ವರಣ್ ಸಿಂಗ್

ದೆಹಲಿ, ಜೂನ್ 21– ‘ಚೀನಾ ಹೈಡ್ರೊಜನ್ ಬಾಂಬ್ ಸ್ಫೋಟನೆ ನೆರೆ ರಾಷ್ಟ್ರಗಳಿಗೆ ಶಂಕೆಯನ್ನುಂಟು ಮಾಡಿದೆಯಾದರೂ, ಭಾರತ ಅಣುರಾಷ್ಟ್ರವಾಗುವುದಕ್ಕೆ ಯತ್ನಿಸುವುದಿಲ್ಲ’ ಎಂದು ರಕ್ಷಣಾ ಸಚಿವ ಸರ್ದಾರ್ ಸ್ವರಣ್ ಸಿಂಗ್‌ರವರು ಚೀನಾ ಹೈಡ್ರೊಜನ್ ಬಾಂಬ್ ಸ್ಫೋಟನೆ ಬಗ್ಗೆ ಪ್ರಶ್ನೆಗಳಿಗೆ ಉತ್ತರವೀಯುತ್ತಾ ತಿಳಿಸಿದರು.

ಭಾರತ ಅಣ್ವಸ್ತ್ರಗಳಿಂದ ರಕ್ಷಣೆಗೆ ಪರದೇಶಗಳ ನೆರವನ್ನು ಪಡೆಯುವುದಿಲ್ಲವೆಂದು ಮುಂದುವರಿದು ನುಡಿದರು. ಚೀನಾ ವಿಚಾರ ಭಾರತಕ್ಕೆ ಎಷ್ಟೇ ಅಪಾಯವಿರಲಿ ರಾಷ್ಟ್ರದ ಸ್ವಾತಂತ್ಯ್ರ ರಕ್ಷಣೆ ದೃಷ್ಟಿಯಿಂದ ಯಾವ ರಾಷ್ಟ್ರದೊಡನೆಯೂ ಸೇನಾ ಒಡಂಬಡಿಕೆಗಾಗಲೀ ಅಥವಾ ಅಣ್ವಸ್ತ್ರಗಳಿಂದ ರಕ್ಷಣೆಗಾಗಲೀ ಮೊರೆ ಹೋಗುವುದಿಲ್ಲವೆಂದರು.

ಪೀಕಿಂಗಿನಲ್ಲಿ ತಮ್ಮ ನಿವಾಸಕ್ಕೆ ಭಾರತದ ಸಿಬ್ಬಂದಿ ವಾಪಸು
ಪೀಕಿಂಗ್, ಜೂ. 20–
ಇಲ್ಲಿರುವ ಭಾರತದ ರಾಯಭಾರಿ ಕಚೇರಿ ಆವರಣದಲ್ಲಿ ನಾಲ್ಕು ದಿನಗಳ ಕಾಲ ರೆಡ್‌ಗಾರ್ಡ್‌ಗಳ ಮುತ್ತಿಗೆಗೆ ಒಳಗಾಗಿದ್ದ ರಾಯಭಾರಿ ಕಚೇರಿ ನೌಕರರು ಮತ್ತು ಅವರ ಕುಟುಂಬಗಳು ಇಂದು ತಮ್ಮ ನಿವಾಸಗಳಿಗೆ ವಾಪಸಾದರು. ದಿಗ್ಬಂಧನವನ್ನು ನಿನ್ನೆ ರಾತ್ರಿ ಚೀನೀ ವಿದೇಶಾಂಗ ಸಚಿವ ಶಾಖೆಯು ರದ್ದು ಮಾಡಿತು.

ಈ ವರ್ಷವೇ ಕೃಷ್ಣಾ–ಹಾರಂಗಿ
ಹೇಮಾವತಿ ಯೋಜನೆಗಳು ಕಾರ್ಯಗತ: ಸಂಪುಟದ ನಿರ್ಧಾರ
ಬೆಂಗಳೂರು, ಜೂನ್ 21–
ಕೃಷ್ಣಾ ಮೇಲ್ದಂಡೆ, ಹೇಮಾವತಿ ಮತ್ತು ಹಾರಂಗಿ ಈ ಮೂರು ಭಾರಿ ನೀರಾವರಿ ಯೋಜನೆಗಳನ್ನು ಪ್ರಕೃತ ಸಾಲಿನಲ್ಲಿ ಕೈಗೊಳ್ಳಲು ರಾಜ್ಯ ಸಂಪುಟವು ಇಂದು ನಿರ್ಧರಿಸಿತು.

67–68ರ ಯೋಜನಾ ಕಾರ್ಯಕ್ರಮದಲ್ಲಿ ‘ನೀರಾವರಿ ಯೋಜನೆಗಳಿಗೆ ಅದರಲ್ಲಿಯೂ ಕೃಷ್ಣಾ ಮತ್ತು ಕಾವೇರಿ ಬಯಲಿನ ಯೋಜನೆಗಳಿಗೆ ಪರಮಾವಧಿ ಹಣವನ್ನು ಒದಗಿಸುವ ಉದ್ದೇಶದಿಂದ ಕೂಡಿರುವ’ ಮಂತ್ರಿಮಂಡಲವು ವಿವಿಧ ಇಲಾಖೆಗಳ ವೆಚ್ಚದಲ್ಲಿ ಎರಡು ಕೋಟಿ ಎಪ್ಪತ್ತೊಂದು ಲಕ್ಷ ಖೋತಾ ಮಾಡಲು ನಿರ್ಧರಿಸಿದೆ.

ಕೃಷ್ಣಾ, ಹಾರಂಗಿ ಮತ್ತು ಹೇಮಾವತಿ ಯೋಜನೆಗಳನ್ನು ಕೈಗೊಳ್ಳುವುದರ ಜೊತೆಗೆ ಅಪೂರ್ಣವಾಗಿರುವ ಕಬಿನಿ, ಭದ್ರ, ತುಂಗಭದ್ರ, ಘಟಪ್ರಭ, ಮಲಪ್ರಭ ಯೋಜನೆಗಳನ್ನು ಈ ವರ್ಷ ಮುಗಿಸಬೇಕೆಂದು ಕೂಡ ಸರಕಾರ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT