ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜಾನಪದ ರಂಗೋತ್ಸವಕ್ಕೆ ಚಾಲನೆ

Last Updated 22 ಜೂನ್ 2017, 6:41 IST
ಅಕ್ಷರ ಗಾತ್ರ

ಸಂಡೂರು: ‘ತೊಗಲು ಗೊಂಬೆ ಆಟಕ್ಕೆ ಹೊಸ ರೂಪ ಹಾಗೂ ಮರುಜೀವ ಕೊಟ್ಟವರು ನಾಡೋಜ ಬೆಳಗಲ್ಲು ವೀರಣ್ಣನವರು’ ಎಂದು ಚಿತ್ರಕಲಾವಿದ ನಾಡೋಜ ವಿ.ಟಿ. ಕಾಳೆಯವರು ಅಭಿಪ್ರಾಯಪಟ್ಟರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ವಿಶೇಷ ಘಟಕ ಯೋಜನೆಯಡಿ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್, ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಜಾನಪದ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೌರಾಣಿಕ ನಾಟಕಗಳ ಕಥಾ ಪ್ರಸಂಗಗಳ ಜತೆಗೆ, ಸ್ವಾತಂತ್ರ್ಯ ಹೋರಾಟದಂತಹ ಐತಿಹಾಸಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ನಾಟಕಗಳನ್ನು ತೊಗಲು ಗೊಂಬೆ ಆಟದಲ್ಲಿ ಅಳವಡಿಸಿ, ಅಳಿವಿನಂಚಿ ನಲ್ಲಿದ್ದ ತೊಗಲು ಗೊಂಬೆ ಆಟದ ಕಲೆಗೆ ಬೆಳಗಲ್ಲು ವೀರಣ್ಣನವರು ಹೊಸ ರೂಪ ನೀಡಿದರು.

ಇಂತಹ ಅಳಿವಿನಂಚಿನ ಲ್ಲಿರುವ ಕಲೆಗಳನ್ನು ಸಂರಕ್ಷಿಸಿ, ಪೋಷಿಸಿ, ಮುಂದುವರಿಸಲು ಎಲ್ಲರ ಸಹಕಾರ ಅಗತ್ಯ’ ಎಂದರು. ಕರ್ನಾಟಕ ಜಾನಪದ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್. ಮಸೂತಿ, ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ್ರು, ಕಾರ್ಯಕ್ರಮದ ಸಂಚಾಲಕರಾದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿದರು.

ಪ್ರೇಕ್ಷಕರ ಮನಗೆದ್ದ ಯಕ್ಷಗಾನ: ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್‌, ಬಳ್ಳಾರಿ ಕಲಾ ತಂಡದವರು ಪ್ರಸ್ತುತ ಪಡಿಸಿದ ಕುವೆಂಪು ರಚಿಸಿದ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿನ ಸುಂದರ ಕಾಂಡದಲ್ಲಿ ಬರುವ ಲಂಕಾದಹನ ರೂಪಕ ಹಾಗೂ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ಕಲಾ ತಂಡದವರು ಪ್ರಸ್ತುತ ಪಡಿಸಿದ ಮೋಹಿನಿ ಭಸ್ಮಾಸುರ ಯಕ್ಷಗಾನ ಪ್ರೇಕ್ಷಕರ ಮನಸೂರೆಗೊಂಡಿತು.

ಗಮಕ ಶೈಲಿಯ ಸಂಭಾಷಣೆ, ಹಾಡುಗಳು, ಹಿಮ್ಮೇಳ, ನೃತ್ಯ ಪ್ರಸಂಗ ಪಾತ್ರಗಳು ಗಮನ ಸೆಳೆದವು. ಮುಖಂಡರಾದ ಸಿ.ಎಂ. ಶಿಗ್ಗಾವಿ, ಪುರಸಭೆ ಉಪಾಧ್ಯಕ್ಷ ಕೆ.ವಿ. ಸುರೇಶ್, ಶಾಂತಮ್ಮ ಅಂಕಮ ನಾಳ್, ಸತ್ಯ ಮೂರ್ತಿ ಹೊಳಗುಂದಿ, ಎಚ್.ಎನ್. ಭೋಸ್ಲೆ, ಕಾಶಿನಾಥ್ ಕಾಳೆ, ಶ್ರೀನಾಥ್ ಕಾಳೆ, ಹಗರಿ ಬಸವರಾಜಪ್ಪ, ಚನ್ನಬಸ ಪ್ಪ, ಸಂಡೂರು ಕುಮಾರಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT